Tuesday, September 1, 2026
spot_img
More
    spot_img
    HomeLatest news`UPI' ಬಳಕೆದಾರರಿಗೆ ಸಿಹಿ ಸುದ್ದಿ : ಪಾವತಿ ಮಿತಿ ಹೆಚ್ಚಳ

    `UPI’ ಬಳಕೆದಾರರಿಗೆ ಸಿಹಿ ಸುದ್ದಿ : ಪಾವತಿ ಮಿತಿ ಹೆಚ್ಚಳ

    Advertisement

    ದಿನಕ್ಕೆ ಒಂದು ಲಕ್ಷ ರೂಪಾಯಿಗಳಿಗೆ ಸೀಮಿತವಾಗಿದ್ದ UPI ವಹಿವಾಟುಗಳ ಮಿತಿ ಮಿತಿಯನ್ನು ಈಗ ಹೆಚ್ಚಿಸಲಾಗಿದೆ. ಮೊದಲಿಗಿಂತ ಒಂದೇ ಬಾರಿಗೆ, ಹೆಚ್ಚಿನ ಮೊತ್ತವನ್ನು ಕಳುಹಿಸಲು ಸಾಧ್ಯವಾಗುತ್ತದೆ. ಇದುವರೆಗೆ ಒಂದೇ ಬಾರಿ ಗರಿಷ್ಠ 1 ಲಕ್ಷ ರೂಪಾಯಿ ಪಾವತಿ ಮಿತಿ ಇತ್ತು. ಇದೀಗ ಸೆಪ್ಟೆಂಬರ್ 15 ರಿಂದ, ಕೆಲವು ರೀತಿಯ ವಹಿವಾಟುಗಳಿಗೆ ಏಕಕಾಲದಲ್ಲಿ 5 ಲಕ್ಷ ರೂ.ಗಳವರೆಗೆ ಮತ್ತು ದಿನಕ್ಕೆ 10 ಲಕ್ಷ ರೂ.ಗಳವರೆಗೆ ಪಾವತಿಸಲು ಸಾಧ್ಯವಾಗಿದೆ.

    ವ್ಯಕ್ತಿಯಿಂದ ವ್ಯಕ್ತಿಗೆ ಕಳುಹಿಸುವ ವಹಿವಾಟುಗಳಿಗೆ ಹಳೆಯ ಮಿತಿ 1 ಲಕ್ಷ ರೂ. ಅನ್ವಯಿಸುತ್ತದೆ. ಈ ಹೊಸ ನಿಯಮವು ವ್ಯಕ್ತಿಯಿಂದ ವ್ಯಾಪಾರಿಗೆ ಮಾತ್ರ ಅನ್ವಯಿಸುತ್ತದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಕಳುಹಿಸುವ ನಿಯಮಿತ UPI ವಹಿವಾಟುಗಳಿಗೆ ಅನ್ವಯಿಸುವುದಿಲ್ಲ.

    NPCI ಈ ಹೊಸ ಮಿತಿಯನ್ನು ಎಲ್ಲಾ ಬ್ಯಾಂಕ್‌ಗಳು, ಅಪ್ಲಿಕೇಶನ್‌ಗಳು ಮತ್ತು ಪಾವತಿ ಸೇವಾ ಪೂರೈಕೆದಾರರಿಗೆ ಅನ್ವಯಿಸುತ್ತದೆ. ಆದಾಗ್ಯೂ, ಬ್ಯಾಂಕುಗಳು ತಮ್ಮ ಆಂತರಿಕ ಭದ್ರತಾ ನೀತಿಗಳ ಪ್ರಕಾರ ಈ ಮಿತಿಗಳನ್ನು ಸ್ವತಃ ನಿರ್ಧರಿಸುವ ಸ್ವಾತಂತ್ರ್ಯವನ್ನು ಹೊಂದಿವೆ.

    ತೆರಿಗೆ ಪಾವತಿ ಮಾಡಲು, 5 ಲಕ್ಷವನ್ನು ಒಂದೇ ಸಮಯಕ್ಕೆ ಮಾಡಬಹುದು ಹಾಗೂ ದಿನಕ್ಕೆ 10 ಲಕ್ಷ ಮಿತಿ ಇದೆ. ವಿಮೆ – ಬಂಡವಾಳ ಮಾರುಕಟ್ಟೆಯಲ್ಲಿನ ವಹಿವಾಟು ಮಾಡಲು ಈ ಹಿಂದೆ 2 ಲಕ್ಷ ಮಿತಿ ಇತ್ತು, ಅದನ್ನೂ ಸಹ ಈಗ 5 ಲಕ್ಷಕ್ಕೆ ಏರಿಸಲಾಗಿದೆ. ಸಾಲ ಇಎಂಐ, ಬಿ2ಬಿ ಸಂಗ್ರಹಣೆಗಳ ವಹಿವಾಟಿನಲ್ಲಿ ಸಹ ಇದೇ ನಿಯಮ ಇರಲಿದೆ.

    ಈ ವರ್ಷ ಆಗಸ್ಟ್ ತಿಂಗಳಲ್ಲಿ 2,000 ಕೋಟಿಗೂ ಅಧಿಕ ಯುಪಿಐ ವಹಿವಾಟುಗಳು ನಡೆದಿದ್ದು, ಇದರ ಒಟ್ಟು ಮೊತ್ತ 24.85 ಲಕ್ಷ ಕೋಟಿ ರೂಪಾಯಿ ತಲುಪಿದೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದರೆ, ಆಗಸ್ಟ್ ತಿಂಗಳಲ್ಲಿ ಯುಪಿಐ ವಹಿವಾಟಿನಲ್ಲಿ 34% ಏರಿಕೆ ದಾಖಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading