ಬೆಂಗಳೂರು: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ ಎಂದು ಆರೋಪಿಸಿ ಚಿನ್ನಯ್ಯ ಮಾಡಿರುವ ಆರೋಪದ ಮೇರೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆ ನಡೆಸುತ್ತಿದ್ದು, ಮತ್ತೊಂದೆಡೆ ಬೆಳ್ತಂಗಡಿ ಪೊಲೀಸರು ಖ್ಯಾತ ಯುಟ್ಯೂಬರ್ ಸಮೀರ್ ಎಂಡಿ ಮೇಲೆ ಸುಮೊಟೊ ದೂರು ದಾಖಲಿಸಿ ವಿಚಾರಣೆಯನ್ನೂ ಸಹ ನಡೆಸಿದ್ದಾರೆ.
ಸಮೀರ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ಮೊದಲಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು ನಿನ್ನೆ ( ಸೆಪ್ಟೆಂಬರ್ 4 ) ಬೆಂಗಳೂರಿನ ಬನ್ನೇರುಘಟ್ಟದ ಹುಲ್ಲಹಳ್ಳಿಯಲ್ಲಿರುವ ಸಮೀರ್ ಮನೆಗೆ ಭೇಟಿ ನೀಡಿದ್ದರು. ಮೊನ್ನೆ ಬೆಳ್ತಂಗಡಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದಿದ್ದ ಬೆಳ್ತಂಗಡಿ ಪೊಲೀಸರು ಸಮೀರ್ ಮನೆಗೆ ಬಂದು ಕಂಪ್ಯೂಟರ್, ಕ್ಯಾಮೆರಾ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದರು.
ಈ ಕುರಿತು ಸಮೀರ್ ಎಂಡಿ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟೆಣ್ಣವರ್ ಮಾತನಾಡಿ ಇದು ಧರ್ಮಸ್ಥಳ ವಿರುದ್ಧದ ಅಪಪ್ರಚಾರಕ್ಕೆ ಆಗಿರುವ ಕೇಸ್ ಅಲ್ಲವೇ ಅಲ್ಲ ಎಂದು ಹೇಳುವ ಮೂಲಕ ಸ್ಪೋಟಕ ಟ್ವಿಸ್ಟ್ ಕೊಟ್ಟಿದ್ದಾರೆ.
ಕೇಸ್ ಆಗಿರೋದು ಧರ್ಮಸ್ಥಳದ ಬಗ್ಗೆ ಅಪಪ್ರಚಾರಕ್ಕಲ್ಲ
ಮೊದಲಿಗೆ ಇದು ರೇಡ್ ಅಲ್ಲ ಎಂದು ಹೇಳಿಕೆ ನೀಡಿದ ಗಿರೀಶ್ ಮಟ್ಟೆಣ್ಣವರ್ ಸಮೀರ್ ಎಂಡಿ ವಿಡಿಯೊ ನೋಡಿ ಅವರ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿತ್ತು. ಆ ಪ್ರಕರಣ ದಾಖಲಾಗುವುದಕ್ಕೆ ಕಾರಣ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ ಎನ್ನುವುದಲ್ಲ, ದಯವಿಟ್ಟು ಅದನ್ನು ತೆಗೆದುಹಾಕಿಬಿಡಿ, ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಿದ್ರು ಎಂದು ಸಮೀರ್ ಅವರ ಮೇಲೆ ಯಾವ ಕೇಸ್ ಸಹ ಆಗಿಲ್ಲ ಎಂದರು. ಆ ವಿಡಿಯೊದಲ್ಲಿ ಬೆಳ್ತಂಗಡಿ ಪೊಲೀಸರು ದಣಿಗಳ ಚಾಟುಗಳು ಎಂದು ಒಂದು ಕಡೆ ಪದ ಬಳಕೆ ಮಾಡಿದ್ದಾರೆ. ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಸುಮೊಟೊ ಕೇಸ್ ಮಾಡಿ ತನಿಖೆ ಮಾಡುತ್ತಿದ್ದಾರೆ. ನೀವು ಪ್ರಸಾರ ಮಾಡಿದ ಹಾಗೆ ಸಮೀರ್ ವಿರುದ್ಧ ಯಾವುದೇ ಸರ್ಚ್ ವಾರೆಂಟ್ ತೆಗೆದುಕೊಂಡು ಬಂದಿಲ್ಲ. ಒಂದು ಪ್ರಕರಣ ದಾಖಲಾದ ಮೇಲೆ ಸಾಮಾನ್ಯವಾಗಿ ಸ್ಥಳ ಮಹಜರು ಮಾಡಬೇಕು ಮಾಡಿದ್ದಾರೆ ಎಂದರು.
ಎಫ್‌ಎಸ್‌ಎಲ್ ನೋಡಿ ಬೇಸರವಾಯಿತು
ಇನ್ನು ಇಲ್ಲಿಗೆ ಎಫ್‌ಎಸ್‌ಎಲ್‌ನವರೂ ಸಹ ಆಗಮಿಸಿ ಎರಡು ಕಿಟ್ ತೆಗೆದುಕೊಂಡು ಬಂದು ತುಂಬಾ ಅಚ್ಚುಕಟ್ಟಾಗಿ ತನಿಖೆ ಮಾಡಿದ್ದಾರೆ. ಅದನ್ನು ನೋಡಿ ನನಗೆ ಬೇಸರವಾಯಿತು, ಏಕೆಂದರೆ ಇದೇ ಆನೆ ಮಾವುತ ಹಾಗೂ ಆತನ ಸಹೋದಿರಯ ಮೇಲೆ ಕಲ್ಲೆತ್ತಿ ಹಾಕಿ ಕೊಲೆ ಮಾಡಿದರು, ಆಗ ಯಾವ ಎಫ್‌ಎಸ್‌ಎಲ್‌ನವರೂ ಸಹ ಬರಲಿಲ್ಲ, ಸೌಜನ್ಯ ಕೇಸ್‌ನಲ್ಲಿ ಯಾವುದೇ ಎಫ್‌ಎಸ್‌ಎಲ್‌ನವರು ಬಂದು ಫಿಂಗರ್‌ಪ್ರಿಂಟ್ ತೆಗೆದುಕೊಳ್ಳಲಿಲ್ಲ ಎಂದು ಕಿಡಿಕಾರಿದರು.
ನಿಮಗೂ ಒಂದು ದಿನ ಈ ಸ್ಥಿತಿ ಬರಬಹುದು
ಇನ್ನೂ ಮುಂದುವರಿದು ಮಾತನಾಡಿದ ಗಿರೀಶ್ ಮಟ್ಟೆಣ್ಣವರ್ ಷಡ್ಯಂತ್ರ ಎನ್ನಬೇಡಿ ಷಡ್ಯಂತ್ರ ಎನ್ನುವುದೇ ಒಂದು ಷಡ್ಯಂತ್ರ, ಅಪಪ್ರಚಾರ ಎನ್ನಬೇಡಿ, ಅಪಪ್ರಚಾರ ಎನ್ನುವುದೇ ಒಂದು ಅಪಪ್ರಚಾರ, ಸತ್ಯಾಂಶವನ್ನು ತೋರಿಸಿ, ಇಲ್ಲಿ ಅಪಪ್ರಚಾರದ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಎಂದರು. ಅಲ್ಲದೇ ಮುಂದೊಂದು ದಿನ ನಿಮಗೂ ಈ ಸ್ಥಿತಿ ಬರಬಹುದು, ಕ್ಯಾಮೆರಾ ಸೀಜ್ ಮಾಡಿದ್ದಾರೆ. ಒಬ್ಬ ಪತ್ರಕರ್ತ ನಿಜ ಬರೆದರೆ ಆತನ ಪೆನ್ ಹಾಗೂ ಪೇಪರ್ ಸೀಜ್ ಮಾಡಿದರೆ ಹೇಗಿರುತ್ತದೆ? ಇವತ್ತು ಅವರು ಅದನ್ನೇ ಮಾಡಿದ್ದಾರೆ ಎಂದು ಮಟ್ಟೆಣ್ಣವರ್ ಕಿಡಿಕಾರಿದರು.
ಐಪಿಎಲ್ ಟಿಕೆಟ್ ಮೇಲೆ ಹೆಚ್ಚುವರಿ ಹೊರೆ: ಶೇ. 28ರಿಂದ ಶೇ. 40ಕ್ಕೆ ಜಿಎಸ್‌ಟಿ ಏರಿಕೆ
ಐಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


