Wednesday, September 23, 2026
spot_img
More
    spot_img
    HomeEntertainmentಪವಿತ್ರಾ ಯಾಕ್ರೀ ಬಿಡುಗಡೆ ಆಗಲ್ಲ? ಬಾಲನ್‌ ಇರೋದು ಅಲ್ಲಿ, ಹೊರಗಡೆ ಕರೆತಂದೇ ತರುತ್ತೇನೆ; ಪವಿತ್ರಾಗೌಡ ವಕೀಲರ...

    ಪವಿತ್ರಾ ಯಾಕ್ರೀ ಬಿಡುಗಡೆ ಆಗಲ್ಲ? ಬಾಲನ್‌ ಇರೋದು ಅಲ್ಲಿ, ಹೊರಗಡೆ ಕರೆತಂದೇ ತರುತ್ತೇನೆ; ಪವಿತ್ರಾಗೌಡ ವಕೀಲರ ಶಪಥ!

    ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ ಅಂತೂ ಇಂತೂ ಟ್ರಯಲ್‌ ಹಂತಕ್ಕೆ ಬಂದು ತಲುಪಿದೆ. ಎಲ್ಲ 17 ಆರೋಪಿಗಳನ್ನೂ ನವೆಂಬರ್‌ 3ರಂದು ನಗರದ 64ನೇ ಸಿಸಿಎಚ್‌ ಕೋರ್ಟ್‌ಗೆ ಕರೆಸಿ ನ್ಯಾಯಾಧೀಶರು ದೋಷಾರೋಪ ಸಾರಾಂಶವನ್ನು ವಿವರಿಸಿದ್ದಾರೆ. ಈ ಆರೋಪಗಳೆಲ್ಲ ಸುಳ್ಳು, ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಎಲ್ಲ ಆರೋಪಿಗಳು ಹೇಳಿದ್ದಾರೆ.

    ಇನ್ನು ಪವಿತ್ರಾ ಗೌಡ ತನಗೆ ವಯಸ್ಸಾದ ತಂದೆ ಹಾಗೂ ತಾಯಿ ಇದ್ದಾರೆ ಮತ್ತು ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಮಗಳಿದ್ದಾಳೆ ಎಂದು ಹೇಳಿ ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ಗೆ ಮರು ಪರಿಶೀಲನಾ ಅರ್ಜಿಯನ್ನೂ ಸಹ ಸಲ್ಲಿಸಿದ್ದಾರೆ. ಆದರೆ ಈ ಕುರಿತು ಪವಿತ್ರಾ ಗೌಡ ಪರ ವಕೀಲರಾದ ಬಾಲನ್‌ ಪ್ರತಿಕ್ರಿಯಿಸಿದ್ದು, ಮರು ಪರಿಶೀಲನಾ ಅರ್ಜಿಯನ್ನು ಪರಿಗಣಿಸುವುದಿಲ್ಲ ಪವಿತ್ರಾಗೆ ಜಾಮೀನು ಸಿಗುವುದಿಲ್ಲ ಎಂದು ಕಡ್ಡಿ ಮುರಿದ ಹಾಗೆ ಹೇಳಿಬಿಟ್ಟಿದ್ದಾರೆ.

    ಅಲ್ಲದೇ ಈ ಅರ್ಜಿ ಮೂಲಕ ಪವಿತ್ರಾ ಗೌಡ ಹೊರಬಾರದೇ ಇರಬಹುದು, ಆದರೆ ಖುಲಾಸೆಯಾಗಿ ಅವರು ಆಚೆ ಬರುವ ಹಾಗೆ ಮಾಡಲಿದ್ದೇನೆ ಎಂದು ಬಾಲನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ಸಾಕ್ಷಿಗಳಿದ್ದಾರೆ, ಎಲ್ಲ ಮೊಬೈಲ್‌ ಲೊಕೇಷನ್‌ ಇದೆ, ಡಿಜಿಟಲ್‌ ಸಾಕ್ಷಿಗಳಿವೆ ಎಂದ ಬಾಲನ್‌ಗೆ ಪತ್ರಕರ್ತರು ಇಷ್ಟೆಲ್ಲ ಇದ್ದಮೇಲೆ ಪವಿತ್ರಾ ಬಿಡುಗಡೆಯಾಗುವುದು ಅನುಮಾನ ಎನ್ನಬಹುದಾ ಎಂದಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಬಾಲನ್‌ ಯಾಕೆ ಅನುಮಾನ ಎನ್ನುತ್ತೀರ? ಬಾಲನ್‌ ಇರೋದು ಅಲ್ಲಿ ವಕೀಲರು.. ಖುಲಾಸೆಯಾಗಿ ಹೊರಗಡೆ ಬಂದೇ ಬರುತ್ತಾರೆ. ಅವರು ಡಿಜಿಟಲ್‌ ಸಾಕ್ಷಿಗಳನ್ನು ಹಾಕಿದರೆ ನಾವು ಬೇರೆಯದ್ದೇ ರೀತಿ ರಿಪ್ಲೈ ಕೊಡುತ್ತೇವೆ. ನಿಜ ಸುಳ್ಳಾಗುತ್ತೆ, ನಿಜ ಸುಳ್ಳಾಗುತ್ತೆ. ಕ್ರಾಸ್‌ ಎಕ್ಸಾಮಿನೇಷನ್‌ ಇದೆಯಲ್ಲ, ಪವಿತ್ರಾ ಗೌಡ ಖುಲಾಸೆಯಾಗ್ತಾರೆ, ಹೊರಗೆ ಬರುತ್ತಾರೆ ಎಂದು ಹೇಳಿದರು.

    ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ: ಪಂತ್‌ ಈಸ್‌ ಬ್ಯಾಕ್; ಇಬ್ಬರು ಕನ್ನಡಿಗರಿಗೆ ಸ್ಥಾನ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading