Thursday, September 24, 2026
spot_img
More
    spot_img
    HomeLatest news7000mAh ಬ್ಯಾಟರಿಯ Moto G67 Power 5G ಲಾಂಚ್; ಬೆಲೆ ₹14,999 

    7000mAh ಬ್ಯಾಟರಿಯ Moto G67 Power 5G ಲಾಂಚ್; ಬೆಲೆ ₹14,999 

    ಇಂದು (ನವೆಂಬರ್ 5) ಭಾರತದ ಮೊಬೈಲ್ ಮಾರುಕಟ್ಟೆಗೆ ಸುದಿನ ಹೊಸ ಸ್ಮಾರ್ಟ್‌ಫೋನ್ ಲಾಂಚ್ ಸಂಭ್ರಮ. ಮೋಟೊರೊಲಾ ಕಂಪನಿಯು ತನ್ನ ಜನಪ್ರಿಯ G ಸರಣಿಗೆ ಹೊಸ ಸೇರ್ಪಡೆಯಾಗಿ Moto G67 Power 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.

    ₹20,000 ಕ್ಕಿಂತ ಕಡಿಮೆ ಬೆಲೆಯ ವಿಭಾಗದಲ್ಲಿ ಪ್ರಬಲ ಸ್ಪರ್ಧಿಯಾಗಿರುವ ಈ ಸಾಧನವು, ಬರೋಬ್ಬರಿ 7,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ, ಶಕ್ತಿಯುತ Snapdragon 7s Gen 2 ಪ್ರೊಸೆಸರ್ ಮತ್ತು ಉತ್ತಮ ಗುಣಮಟ್ಟದ 50-ಮೆಗಾಪಿಕ್ಸೆಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.

    ಈ ಫೋನ್ ಫ್ಲಿಪ್‌ಕಾರ್ಟ್ ಮತ್ತು ಅಧಿಕೃತ ಮೋಟೋರೋಲ ಇಂಡಿಯಾ ವೆಬ್‌ಸೈಟ್ ಮೂಲಕ ಪ್ರತ್ಯೇಕವಾಗಿ ಇದೆ 12ನೇ ನವೆಂಬರ್ನಿಂದ ಖರೀದಿಗೆ ಲಭ್ಯವಿರುತ್ತದೆ.ಈ ಶ್ರೇಷ್ಠ ವೈಶಿಷ್ಟ್ಯಗಳೊಂದಿಗೆ ಇದರ ಬೆಲೆ ಕೇವಲ ₹14,999 ಆಗಿದೆ.

    ಆಕರ್ಷಕ ವಿನ್ಯಾಸ ಮತ್ತು 120Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಹೊಂದಿರುವ ಈ ಹೊಸ Moto G67 Power 5G ಫೋನನ್ನು ನೋಡಿ ನಿಮಗೆ ಖಂಡಿತವಾಗಿಯೂ ಇಷ್ಟವಾಗುತ್ತದೆ. ಈ ಹೊಸ ಫೋನ್‌ನ ಸಂಪೂರ್ಣ ವಿಶೇಷತೆಗಳನ್ನು ಮುಂದೆ ಓದಿ ತಿಳಿಯೋಣ ಬನ್ನಿ.

    ವೈಶಿಷ್ಟ್ಯವಿಶೇಷಣಗಳು
    ಪ್ರೊಸೆಸರ್Snapdragon 7s Gen 2
    ಬ್ಯಾಟರಿಬೃಹತ್ 7,000mAh ಸಿಲಿಕಾನ್-ಕಾರ್ಬನ್ ಬ್ಯಾಟರಿ (58 ಗಂಟೆಗಳ ಮಿಶ್ರ ಬಳಕೆವರೆಗೆ ಬಾಳಿಕೆ)
    ಮುಖ್ಯ ಕ್ಯಾಮೆರಾ50 ಮೆಗಾಪಿಕ್ಸೆಲ್ Sony LYTIA 600 (ಎಲ್ಲಾ ಮೂರು ಲೆನ್ಸ್‌ಗಳಲ್ಲಿ 4K ವಿಡಿಯೋ ರೆಕಾರ್ಡಿಂಗ್)
    ಡಿಸ್ಪ್ಲೇ6.7 ಇಂಚು FHD+; 120 Hz ರಿಫ್ರೆಶ್ ರೇಟ್; 1050 nits ಪೀಕ್ ಬ್ರೈಟ್‌ನೆಸ್; Corning Gorilla Glass 7i ರಕ್ಷಣೆ
    ರ್ಯಾಮ್ / ಸ್ಟೋರೇಜ್8GB RAM (RAM ಬೂಸ್ಟ್ ಮೂಲಕ 24GB ವರೆಗೆ ವಿಸ್ತರಿಸಬಹುದು) + 128GB UFS 2.2 ಸ್ಟೋರೇಜ್
    ಇತರೆMIL-STD-810H ಪ್ರಮಾಣೀಕರಣ, IP64 ಧೂಳು ಮತ್ತು ನೀರಿನ ಪ್ರತಿರೋಧಕ; ಆಂಡ್ರಾಯ್ಡ್ 15 ಆಧಾರಿತ Hello UI

    ಕ್ಯಾಮೆರಾ ವಿವರ: 50MP ಮುಖ್ಯ ಕ್ಯಾಮೆರಾ ಜೊತೆಗೆ 8MP ಅಲ್ಟ್ರಾವೈಡ್ ಸಂವೇದಕ ಮತ್ತು 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಆಡಿಯೋವನ್ನು ಡಾಲ್ಬಿ ಅಟ್ಮಾಸ್ (Dolby Atmos) ಮತ್ತು Hi-Res ಪ್ರಮಾಣೀಕರಣದ ಸ್ಟೀರಿಯೋ ಸ್ಪೀಕರ್‌ಗಳು ನಿರ್ವಹಿಸುತ್ತವೆ.

    ವರ್ಗವಿವರಗಳು
    ಬೆಲೆ8GB RAM + 128GB ಸ್ಟೋರೇಜ್ — ₹15,999
    ಬಣ್ಣಗಳುಪ್ಯಾಂಟನ್ ಸಿಲಾಂಟ್ರೋ (Panton Cilantro),

    ಕ್ಯುರಾಕೊ ನೀಲಿ (Curacao Blue), ಪ್ಯಾರಾಚೂಟ್ (Parachute)
    ಮಾರಾಟ ದಿನಾಂಕ ಮತ್ತು ಸ್ಥಳನವೆಂಬರ್ 12, ಮಧ್ಯಾಹ್ನ 12 ಗಂಟೆಗೆ — ಫ್ಲಿಪ್‌ಕಾರ್ಟ್, Motorola.in ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳು
    ಬ್ಯಾಂಕ್ ರಿಯಾಯಿತಿಗಳುಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಮೂಲಕ ₹1,000 ವರೆಗೆ ರಿಯಾಯಿತಿ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ಮೇಲೆ ₹1,500 ವರೆಗೆ ರಿಯಾಯಿತಿ
    ಇಎಂಐ ಆಯ್ಕೆಗಳುಆರು ತಿಂಗಳವರೆಗೆ ನೋ-ಕಾಸ್ಟ್ ಇಎಂಐ ಲಭ್ಯ
    ಜಿಯೋ ಪಾಲುದಾರಿಕೆ ಕೊಡುಗೆ₹449 ಪ್ರಿಪೇಯ್ಡ್ ಯೋಜನೆ ಖರೀದಿಸಿದ ಗ್ರಾಹಕರಿಗೆ ₹2,000 ಕ್ಯಾಶ್‌ಬ್ಯಾಕ್ + ₹8,000 ಮೌಲ್ಯದ ಪಾಲುದಾರ ಕೂಪನ್‌ಗಳು = ಒಟ್ಟು ₹10,000 ಪ್ರಯೋಜನ

    ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ ₹98 ಇಳಿಕೆ!ಇಂದಿನ ರೇಟ್‌ ಚೆಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading