Friday, September 25, 2026
spot_img
More
    spot_img
    HomeStateDistrictಬಿಎಂಟಿಸಿ ಹೊಸ ಬಸ್ ಮಾರ್ಗ; ಹಳದಿ, ಹಸಿರು, ನೇರಳೆ ನಮ್ಮ ಮೆಟ್ರೋಗೆ ಸಂಪರ್ಕ

    ಬಿಎಂಟಿಸಿ ಹೊಸ ಬಸ್ ಮಾರ್ಗ; ಹಳದಿ, ಹಸಿರು, ನೇರಳೆ ನಮ್ಮ ಮೆಟ್ರೋಗೆ ಸಂಪರ್ಕ

    ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಉದ್ಯಾನ ನಗರಿ ಬೆಂಗಳೂರು ಜನರ ಜೀವನಾಡಿ. ನಮ್ಮ ಮೆಟ್ರೋ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಬಿಎಂಟಿಸಿ ಮೆಟ್ರೋ ಫೀಡರ್ ಬಸ್ ಸೇವೆಯನ್ನು ನೀಡುತ್ತಿದೆ. ಈಗ ಬಿಎಂಟಿಸಿ ಹೊಸ ಬಸ್ ಮಾರ್ಗವೊಂದನ್ನು ಪರಿಚಯಿಸಿದೆ.

    ಬೆಂಗಳೂರು ನಗರಲ್ಲಿ ಮೂರು ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ನಡೆಸುತ್ತಿದೆ. ಈಗ ಬಿಎಂಟಿಸಿ ಪರಿಚಯಿಸಿರುವ ಬಸ್ ನೇರಳೆ, ಹಸಿರು ಮತ್ತು ಹಳದಿ ಮಾರ್ಗದ ಮೆಟ್ರೋ ಸಂಪರ್ಕಿಸುತ್ತದೆ. ಮೂರು ಮೆಟ್ರೋ ಜಾಲಕ್ಕೆ ಸಂಪರ್ಕ ಕಲ್ಪಿಸುವ ಬಸ್ ಪ್ರಯಾಣಿಕರಿಗೆ ಅನುಕೂಲಕರವಾಗಿದೆ.

    ಮಾರ್ಗ, ವೇಳಾಪಟ್ಟಿ: ಬಿಎಂಟಿಸಿಯ ಹೊಸ ಬಸ್ ಮಾರ್ಗ MF-19. ಈ ಮಾರ್ಗದ ಬಸ್ ವಿಜಯನಗರದಿಂದ ಹಳದಿ ನಮ್ಮ ಮೆಟ್ರೋ ನಿಲ್ದಾಣವಾದ ಆರ್.ವಿ.ರಸ್ತೆಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ಬಸ್ ಸೇವೆ ನವೆಂಬರ್ 3ರಿಂದಲೇ ಆರಂಭವಾಗಿದೆ.

    ವಿಜಯನಗರ-ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದ ನಡುವೆ ಸಂಪರ್ಕ ಕಲ್ಪಿಸುವ ಹೊಸ ಮಾರ್ಗದಲ್ಲಿ ಬಿಎಂಟಿಸಿ 2 ಬಸ್‌ಗಳನ್ನು ಓಡಿಸಲಿದೆ. ಒಟ್ಟು 32 ಟ್ರಿಪ್ ಈ ಬಸ್‌ಗಳು ಸಂಚಾರವನ್ನು ನಡೆಸಲಿವೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ. ಈ ಮಾರ್ಗದ ಬಸ್‌ಗೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಹೆಚ್ಚಿನ ಬಸ್‌ಗಳ ಸಂಚಾರವನ್ನು ಆರಂಭಿಸಲು ಬಿಎಂಟಿಸಿ ಚಿಂತನೆ ನಡೆಸಿದೆ.

    ವಿಜಯನಗರ ಟಿಟಿಎಂಸಿ-ಆರ್.ವಿ.ರಸ್ತೆ ನಡುವೆ ಸಂಪರ್ಕ ಕಲ್ಪಿಸುವ ನೂತನ ಬಸ್ ಬನಶಂಕರಿ, ಬನಶಂಕರಿ ಬಿಡಿಎ ಕಾಂಪ್ಲೆಕ್ಸ್, ಹೊಸಕೆರೆಹಳ್ಳಿ ಕ್ರಾಸ್, ಗಿರಿನಗರ, ಅತ್ತಿಗುಪ್ಪೆಯಲ್ಲಿ ನಿಲುಗಡೆಯನ್ನು ಹೊಂದಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಹೊರಡುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

    ವಿಜಯನಗರದಲ್ಲಿ ನಮ್ಮ ಮೆಟ್ರೋ ನೇರಳೆ ಮಾರ್ಗವಿದೆ. ಬನಶಂಕರಿಯಲ್ಲಿ ನಮ್ಮ ಮೆಟ್ರೋ ಹಸಿರು ಮಾರ್ಗದ ರೈಲು ಸಿಗುತ್ತದೆ. ಇದೇ ಬಸ್‌ನಲ್ಲಿ ಆರ್.ವಿ.ರಸ್ತೆಗೆ ಸಂಚಾರವನ್ನು ನಡೆಸಿದರೆ ಅಲ್ಲಿ ಹಳದಿ ಮಾರ್ಗದ ನಮ್ಮ ಮೆಟ್ರೋ ರೈಲನ್ನು ಜನರು ಹತ್ತಬಹುದು.

    ವಿಜಯನಗರ-ಆರ್.ವಿ.ರಸ್ತೆ ಮೆಟ್ರೋ ನಿಲ್ದಾಣದ ಹೊಸ ಬಸ್ ಸೇವೆಯ ವೇಳಾಪಟ್ಟಿ. ಆರ್.ವಿ.ರೋಡ್ ಮೆಟ್ರೋ ನಿಲ್ದಾಣದಿಂದ ಬಸ್ ಬೆಳಗ್ಗೆ 6, 6.50, 7.35, 8.25, 9.20, 10.10, 12.20 ಮಧ್ಯಾಹ್ನ 2.35, 3.25, 4.20, 5.10, 6.10, 7, 8.20 ಮತ್ತು 9.10ಕ್ಕೆ ಹೊರಡಲಿದೆ.

    ವಿಜಯನಗರ ಟಿಟಿಎಂಸಿಯಿಂದ ಬಸ್ ಬೆಳಗ್ಗೆ 6.05, 6.45, 7.35, 8.25, 9.15, 10.40, 11.30, ಮಧ್ಯಾಹ್ನ 12.20, 1.10, 3.25, 4.15, 5.15, 6.05, 7.30, 8.20, 9.05ಕ್ಕೆ ಹೊರಡಲಿದೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

    ನಮ್ಮ ಮೆಟ್ರೋ ಹಳದಿ ಮಾರ್ಗ ಆರ್.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ. ಆಗಸ್ಟ್‌ನಲ್ಲಿ ವಾಣಿಜ್ಯ ಸಂಚಾರ ಆರಂಭವಾದ ಈ ಮಾರ್ಗದಲ್ಲಿ ನವೆಂಬರ್ 1ರಿಂದ 5ನೇ ಮೆಟ್ರೋ ರೈಲುಗಳು ಸಂಚಾರವನ್ನು ನಡೆಸುತ್ತಿವೆ.

    ಈ ಹೊಸ ರೈಲು ಸಂಚಾರದಿಂದ ಹಳದಿ ಮಾರ್ಗದಲ್ಲಿ ಪೀಕ್ ಅವಧಿಯಲ್ಲಿ ರೈಲುಗಳ ಆವರ್ತನವು ಪ್ರತಿ 15 ನಿಮಿಷಕ್ಕೊಮ್ಮೆ ರೈಲುಗಳು ಸಂಚರಿಸುತ್ತವೆ. (ಪ್ರಸಕ್ತ 19 ನಿಮಿಷಗಳ ಅಂತರದ ಬದಲಾಗಿ). ಇದರಿಂದ ಪ್ರಯಾಣಿಕರಿಗೆ ಕಡಿಮೆ ಅವಧಿಯಲ್ಲಿ ಸುಗಮ ಮತ್ತು ನಿರಂತರ ಸೇವೆ ನೀಡಲು ಸಹಾಯಕವಾಗಿದೆ.

    ಈ ಬದಲಾವಣೆ ಎಲ್ಲಾ ದಿನಗಳಿಗೆ ಅನ್ವಯವಾಗುತ್ತದೆ. ಆರ್.ವಿ, ರಸ್ತೆ ಮತ್ತು ಬೊಮ್ಮಸಂದ್ರ ಟರ್ಮಿನಲ್ ನಿಲ್ದಾಣಗಳಿಂದ ಹೊರಡುವ ಮೊದಲ ಹಾಗೂ ಕೊನೆಯ ರೈಲುಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್‌ಸಿಎಲ್ ಹೇಳಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading