ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಜಾರಿಗೊಳಿಸಿದೆ. ಅಕ್ಟೋಬರ್ 1, 2025ರಿಂದ ಯೋಜನೆ ಜಾರಿಗೆ ಬಂದಿದ್ದು, ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡುವ ಯೋಜನೆ ಇದು.
ಸರ್ಕಾರಿ ನೌಕರರು ಈ ಯೋಜನೆಗೆ ಒಳಪಡದೇ ಇರಲು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿಲ್ಲ ಎಂದರೆ ಯೋಜನೆಗೆ ಒಳಪಡುತ್ತಾರೆ ಎಂದು ಅರ್ಥ. ಆದ್ದರಿಂದ ಅವರ ಮಾಸಿಕ ವೇತನದಲ್ಲಿ ವಂತಿಕೆ ಕಡಿತವಾಗುತ್ತದೆ.
HRMS ತಂತ್ರಾಂಶದಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಡಲು/ ಹೊರ ಉಳಿಯಲು ಇಚ್ಛಿಸುವ ಸರ್ಕಾರಿ ನೌಕರರಿಗೆ/ ಡಿಡಿಒ ಗಳಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ಯೋಜನೆಗೆ ಸೇರಲು ಬಯಸದ ನೌಕರರು ನವೆಂಬರ್ 25ರ ತನಕ ಅರ್ಜಿಯನ್ನು ಸಲ್ಲಿಸಬಹುದು.
ಸರ್ಕಾರಿ ನೌಕರರು/ ಡಿಡಿಒಗಳಿಗೆ ಮಾರ್ಗಸೂಚಿ: ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ-2.0 ನಿರ್ದೇಶನಾಲಯ, ಸುತ್ತೋಲೆಯೊಂದನ್ನು ಹೊರಡಿಸಿದೆ. ಇದು HRMS ತಂತ್ರಾಂಶದಲ್ಲಿ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)ಗೆ ಒಳಪಡಲು/ ಹೊರ ಉಳಿಯಲು ಇಚ್ಛಿಸುವ ಸರ್ಕಾರಿ ನೌಕರರಿಗೆ/ ಡಿಡಿಒ ಗಳಿಗೆ ಮಾರ್ಗಸೂಚಿ ಎಂಬ ವಿಷಯ ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)ಗೆ ಒಳಗುಳಿಯಲು/ ಹೊರಗುಳಿಯಲು ಸರ್ಕಾರಿ ನೌಕರರು ಈ ಕೆಳಕಂಡ ಮಾರ್ಗಸೂಚಿಯನ್ನು ಅನುಸರಿಸುವುದು. HRMS-1 (KASS) ವೆಬ್ ಅಪ್ಲಿಕೇಶನ್ ಮೂಲಕ ಕುಟುಂಬ ಅವಲಂಬಿತರ ದಾಖಲೆ ಮತ್ತು ಅನುಮೋದನೆ ಪ್ರಕ್ರಿಯೆ.
- ಲಾಗಿನ್ ಮತ್ತು ಸಂಚರಣೆ. HRMS ಪೋರ್ಟಲ್ ಪ್ರವೇಶ ಮಾಡಿ https://hms.karnataka.gov.in. DDO ತನ್ನ ಲಾಗಿನ್ ವಿವರಗಳನ್ನು ಬಳಸಿ HRMS-1ಗೆ ಲಾಗಿನ್ ಮಾಡುತ್ತಾರೆ. ಮೆನು Service Register > Family Dependent Entry Form – KASS
- ಅವಲಂಬಿತರ ಮತ್ತು ಸಂಗಾತಿಯ ವಿವರಗಳು. ಅಧಿಕಾರಿಯ/ ಸಿಬ್ಬಂದಿಯ KGID ನಮೂದಿಸಿ → GET ಕ್ಲಿಕ್ ಮಾಡಿ. ಅಧಿಕಾರಿಯ ಸಿಬ್ಬಂದಿಯ ಹೆಸರು ಸ್ವಯಂಚಾಲಿತವಾಗಿ ತೋರಿಸುತ್ತದೆ. ಅಧಿಕಾರಿಯ/ ಸಿಬ್ಬಂದಿಯ ಫೋಟೋ/ ಆಧಾರ್ ಅಪಲೋಡ್ ಆಗದಿದ್ದಲ್ಲಿ ಪರಿಶೀಲನೆ ಪ್ರಕ್ರಿಯೆಯಿಂದ ಅಪ್ ಲೋಡ್ ಮಾಡಿ.
ಪ್ರಶ್ನೆ: ನಿಮ್ಮ ಸಂಗಾತಿಯು ಕರ್ನಾಟಕ ಸರ್ಕಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರಾ?. ಹೌದು ಆಯ್ಕೆ ಮಾಡಿದರೆ. ಸಂಗಾತಿಯ KGID ನಮೂದಿಸಿ → GET ಕ್ಲಿಕ್ ಮಾಡಿ ಸಂಗಾತಿಯ ವಿವರಗಳನ್ನು ಪರಿಶೀಲಿಸಿ ಮತ್ತು ದೃಢೀಕರಿಸಿ. Deduction ಆಯ್ಕೆ: Self ಅಥವಾ Spouse. Spouse ಆಯ್ಕೆ ಮಾಡಿದರೆ → ಎಚ್ಚರಿಕೆ ಮತ್ತು ದೃಢೀಕರಣ ಸಂದೇಶ.
- ಅವಲಂಬಿತರನ್ನು ಸೇರಿಸಲು. Add Dependent ಕ್ಲಿಕ್ ಮಾಡಿ. ವಿವರಗಳು ನಮೂದಿಸಿ: ಹೆಸರು, ವಿಳಾಸ, ಮೊಬೈಲ್, ಇ-ಮೇಲ್, ಆಧಾರ್ ಇತ್ಯಾದಿ. ಫೋಟೋ ಅಪ್‌ಲೋಡ್ ಮಾಡಿ – ಯಶಸ್ವಿಯಾಗಿ ಅಪ್‌ಲೋಡ್ ಆಗಿರುವ ಸಂದೇಶ. ದಾಖಲೆಯನ್ನು ಸೇರಿಸಲಾಗಿದೆ → Dependent Record Successfully Saved
- ಅವಲಂಬಿತರ ದಾಖಲಾತಿಗಳನ್ನು ಅಪ್‌ಲೋಡ್ ಮಾಡಿ. ಫೋಟೋ ಅಪ್‌ಲೋಡ್ ಮಾಡಿ (<50 KB, JPG/PNG). Photo Uploaded Successfully
- ಗುರುತು ಪರಿಶೀಲನೆ (UIDAI). Validate Aadhaar with UIDAI ಕ್ಲಿಕ್ ಮಾಡಿ. DEMO Auth ಗೆ ರೀಡೈರೆಕ್ಟ್ → ಆಧಾರ್ + ಹೆಸರು ನಮೂದಿಸಿ.
ಯಶಸ್ಸು Record Inserted Successfully. ವಿಫಲ – ಪುನಃ ಪ್ರಯತ್ನಿಸಿ ಅಥವಾ UIDAI ಕೇಂದ್ರಕ್ಕೆ ಭೇಟಿ ನೀಡಿ. ವಿಶಿಷ್ಟ ಅಪ್ಲಿಶೇಶನ್ ಐಡಿ ತಯಾರಾಗುತ್ತದೆ. - ಸೇರಿಸಿರುವ ಅವಲಂಬಿತರನ್ನು ವೀಕ್ಷಿಸಿ. KGID ನಮೂದಿಸಿ → GET ಕ್ಲಿಕ್ ಮಾಡಿ Grid ನಲ್ಲಿ ವಿವರಗಳು ತೋರಿಸುತ್ತವೆ. ಸಹಿ ಮಾಡಿದ ಘೋಷಣೆಗಳನ್ನು ಅಪ್‌ಲೋಡ್ ಮಾಡಿ (Employee + DDO, PDF < 500KB).
- ಸೇರಿಸಿರುವ ಅವಲಂಬಿತರನ್ನು ಅನುಮೋದನೆಗಾಗಿ ಸಲ್ಲಿಸಿ. Submit ಕ್ಲಿಕ್ ಮಾಡಿ. ದಾಖಲೆಗಳು ಉಳಿಸಲಾಗುತ್ತದೆ. DDO ಘೋಷಣೆಯನ್ನು ಅಪ್‌ಲೋಡ್ ಮಾಡಿ (ಅಪ್‌ಲೋಡ್ ಮಾಡದಿದ್ದರೆ)
- ಅನುಮೋದನೆ ಪ್ರಕ್ರಿಯೆ. ಸಂಚರಣೆ Service Register > Family Dependent Approval Form – KASS
ವಿವರಗಳನ್ನು ವೀಕ್ಷಿಸಿಸಲು → ಅಪ್ಲಿಕೇಶನ್ ನಂ. ಕ್ಲಿಕ್ ಮಾಡಿ. - Delete Dependent. Click Delete → Dependent removed from grid.
- Upload Declaration Document. Upload declaration (≤500KB) Click Choose File.
Click Get OTP → Enter OTP → Click Upload. Confirmation: Dependent details uploaded successfully.
ಈ ಮೇಲೆ ತಿಳಿಸಿರುವ ಮಾರ್ಗಸೂಚಿಯನ್ನು ಅನುಸರಿಸಿ KASS (Web Application/ Mobile) ಮೂಲಕ ಸದರಿ ಅಧಿಕಾರಿ/ ಸಿಬ್ಬಂದಿಯ ಕುಟುಂಬದ ಅವಲಂಬಿತರ ವಿವರಗಳನ್ನು ದಾಖಲಿಸಬಹುದಾಗಿದೆ ಹಾಗೂ ದಾಖಲಿಸಿದ ಕುಟುಂಬದ ಅವಲಂಬಿತರ ವಿವರಗಳನ್ನು ಅನುಮೋದಿಸಲು HRMS-1ರ Web Applicationನ ಡಿಡಿಒ ಲಾಗಿನ್‌ನಲ್ಲಿಯೇ ಅನುಮೋದಿಸಬೇಕೆಂದು ಸೂಚಿಸಿದೆ.
ಈ ಪ್ರಕ್ರಿಯಿಗೆ ಸಂಬಂಧಿಸಿದ ಕೈಪಡಿ HRMS ತಂತ್ರಾಂಶದಲ್ಲಿ Path: HRMS Home page Screen → KASS Folder → KASS Manual ಲಭ್ಯವಿರುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


