Tuesday, September 22, 2026
spot_img
More
    spot_img
    HomeStateDistrictBREAKING: ವಿಶ್ವಕಪ್‌ ಟ್ರೋಫಿಯೊಂದಿಗೆ ಮೋದಿ ಭೇಟಿಯಾಗಿ ʼನಮೋ ನಂಬರ್ 1ʼ ಜೆರ್ಸಿ ಗಿಫ್ಟ್ ನೀಡಿದ ಭಾರತ...

    BREAKING: ವಿಶ್ವಕಪ್‌ ಟ್ರೋಫಿಯೊಂದಿಗೆ ಮೋದಿ ಭೇಟಿಯಾಗಿ ʼನಮೋ ನಂಬರ್ 1ʼ ಜೆರ್ಸಿ ಗಿಫ್ಟ್ ನೀಡಿದ ಭಾರತ ಮಹಿಳಾ ತಂಡ

    ಹೊಸದಿಲ್ಲಿ: ನವೆಂಬರ್‌ 2ರಂದು ನವಿಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ವನಿತೆಯರ ಏಕದಿನ ವಿಶ್ವಕಪ್‌ 2025ರ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ವನಿತೆಯರ ತಂಡ 52 ರನ್‌ಗಳ ಗೆಲುವು ದಾಖಲಿಸುವ ಮೂಲಕ ಇದೇ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

    Advertisement

    ಇನ್ನು ಲೀಗ್‌ ಹಂತದಲ್ಲಿ 3 ಪಂದ್ಯಗಳಲ್ಲಿ ಸಾಲು ಸಾಲು ಸೋಲುಂಡು ಭಾರೀ ಹೀನಾಯವಾಗಿ ಟೀಕೆಗೆ ಒಳಗಾಗಿದ್ದ ಭಾರತ ವನಿತೆಯರು ಬಳಿಕ ಕಮ್‌ಬ್ಯಾಕ್‌ ಮಾಡಿ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಸದೆಬಡಿದು ಫೈನಲ್‌ಗೇರಿ ಅಸಾಧ್ಯವೆಂಬಂತಿದ್ದ ಟೂರ್ನಿಯಲ್ಲಿ ಭಾರೀ ಯಶಸ್ಸು ಸಾಧಿಸಿದೆ.

    ಈ ಮಹಾನ್‌ ಗೆಲುವಿಗೆ ಇಡೀ ದೇಶ ಶುಭಾಶಯ ಕೋರಿ ಮಹಿಳೆಯರ ಸಾಧನೆಯನ್ನು ಕೊಂಡಾಡಿತ್ತು. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಕಲ್ಯಾಣ ಮಾರ್ಗದ ತಮ್ಮ ನಿವಾಸಕ್ಕೆ ವಿಶ್ವಕಪ್‌ ವಿಜೇತ ತಂಡವನ್ನು ಆಹ್ವಾನಿಸಿ ಉಪಚರಿಸಿದ್ದಾರೆ. ಈ ವೇಳೆ ಮಹಿಳಾ ತಂಡ ಟ್ರೋಫಿಯನ್ನು ಮೋದಿಗೆ ನೀಡಿ ಫೋಟೊ ಕ್ಲಿಕ್ಕಿಸಿಕೊಂಡಿದೆ.

    ಅಲ್ಲದೇ ನಮೋ ನಂಬರ್‌ 1 ಎಂಬ ವಿಶೇಷ ಟೀಮ್‌ ಇಂಡಿಯಾ ಜೆರ್ಸಿಯನ್ನು ಮೋದಿಗೆ ನೀಡಿದೆ. ಇದರಲ್ಲಿ ಎಲ್ಲ ಆಟಗಾರ್ತಿಯರ ಸಹಿಯನ್ನು ಹಾಕಲಾಗಿದೆ.

    ಈ ವೇಳೆ ನಾಯಕಿ ಹರ್ಮನ್‌ಪ್ರೀತ್‌ ಸಿಂಗ್‌ 2017ರಲ್ಲಿ ಟ್ರೋಫಿ ಇಲ್ಲದೇ ಮೋದಿಯವರನ್ನು ಭೇಟಿಯಾಗಿದ್ದ ಸಂದರ್ಭವನ್ನು ನೆನೆದು ಈಗ ಟ್ರೋಫಿಯೊಂದಿಗೆ ಅವರನ್ನು ಭೇಟಿಯಾಗಿದ್ದು ಸಂತಸ ಎಂದರು. ಸ್ಮೃತಿ ಮಂಧಾನ ಮೋದಿಯವರು ತಮಗೆ ಸ್ಪೂರ್ತಿ ಎಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿರುವುದಕ್ಕೆ ಮೋದಿ ಕಾರಣ ಎಂದರು.

    ಚಿನ್ನಯ್ಯ ಹೇಳಿದ್ದು ಬಿಡಿ, ಸರಿಯಾಗಿ ತನಿಖೆ ಮಾಡಿ; ಧರ್ಮಸ್ಥಳ ಪ್ರಕರಣಕ್ಕೆ ಮಹಿಳಾ ಆಯೋಗ ಖಡಕ್‌ ಎಂಟ್ರಿ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading