Wednesday, November 11, 2026
spot_img
More
    spot_img
    HomeStateDistrictಮೈಸೂರು ವಿವಿ: ಅಂಕಪಟ್ಟಿ ನೀಡಲು ಲಂಚ ಕೇಳಿದ್ದ ಸಿಬ್ಬಂದಿ ವಿರುದ್ಧ ರಸ್ತೆಯಲ್ಲಿ ಪ್ರತಿಭಟಿಸಿದ್ದ ವಿದ್ಯಾರ್ಥಿನಿಗೆ ನ್ಯಾಯ

    ಮೈಸೂರು ವಿವಿ: ಅಂಕಪಟ್ಟಿ ನೀಡಲು ಲಂಚ ಕೇಳಿದ್ದ ಸಿಬ್ಬಂದಿ ವಿರುದ್ಧ ರಸ್ತೆಯಲ್ಲಿ ಪ್ರತಿಭಟಿಸಿದ್ದ ವಿದ್ಯಾರ್ಥಿನಿಗೆ ನ್ಯಾಯ

    ಮೈಸೂರು : ಮೈಸೂರು ವಿಶ್ವವಿದ್ಯಾನಿಲಯವು ಅಂಕಪಟ್ಟಿ ನೀಡಿಲ್ಲವೆಂದು ಆರೋಪಿಸಿ ರಸ್ತೆಯಲ್ಲಿ ಪ್ರತಿಭಟಿಸಿದ್ದ ವಿದ್ಯಾರ್ಥಿನಿಗೆ ಬುಧವಾರ ಕುಲಸಚಿವರಾದ ಎಂ.ಕೆ.ಸವಿತಾ ಅವರು ಅಂಕಪಟ್ಟಿಯನ್ನು ಹಿಂತಿರುಗಿಸಿದರು.

    2021-22 ನೇ ಸಾಲಿನ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಪ್ರಭಾ, ಕೋವಿಡ್ ಕಾರಣ ಕಾಲೇಜಿನ ಶುಲ್ಕ ಪಾವತಿಸಿರುವ ಬಗ್ಗೆ ಚಲನ್ ಹಾಜರುಪಡಿಸಲು ಸಾಧ್ಯವಾಗಿರಲಿಲ್ಲ. ಈ ದಿನ ಚಲನ್ ಹಾಜರುಪಡಿಸಿ, ಯಾವುದೇ ಲಂಚ ಆರೋಪ ಮಾಡಿಲ್ಲವೆಂದು ಕುಲಸಚಿವರಾದ ಎಂ.ಕೆ. ಸವಿತಾಗೆ ಮನವಿ ಸಲ್ಲಿಕೆ ಮಾಡಿದರು.

    ಇನ್ನು ವಿದ್ಯಾರ್ಥಿನಿ ಪ್ರಭಾ ತನಗೆ ಅಂಕಪಟ್ಟಿ ನೀಡಲು ಸಿಬ್ಬಂದಿ 18 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿ ವಿಶ್ವವಿದ್ಯಾನಿಲಯದ ಮುಂದಿನ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದರು.

    ಇದನ್ನು ಪರಿಶೀಲಿಸಿ ಬಾಕಿ ಶುಲ್ಕ ಪಾವತಿ ಬಳಿಕ ವಿದ್ಯಾರ್ಥಿ ಅಂಕಪಟ್ಟಿ ಹಿಂದಿರುಗಿಸಲಾಯಿತು. ಜತೆಗೆ ಇಂತಹ ಸಮಸ್ಯೆಗಳಿದ್ದಾಗ ಮೇಲಾಧಿಕಾರಿಗಳನ್ನು ಭೇಟಿ ಮಾಡಿ ಅಗತ್ಯ ಸಹಾಯ ಪಡೆಯಲು ಕುಲಸಚಿವೆ ಸಲಹೆ ನೀಡಿದರು.

    ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ: ಪಂತ್‌ ಈಸ್‌ ಬ್ಯಾಕ್; ಇಬ್ಬರು ಕನ್ನಡಿಗರಿಗೆ ಸ್ಥಾನ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search