ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಕಾಂಬಿನೇಶನ್‌ನ ಬಹು ನಿರೀಕ್ಷಿತ ಚಿತ್ರ ʼಪುಷ್ಪ ದ ರೂಲ್ʼ ಇಂದು ( ಡಿಸೆಂಬರ್ 5 ) ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಸಿನಿಮಾ ನೋಡಲು ಸಿನಿ ರಸಿಕರು ಹಾಗೂ ಅಲ್ಲು ಅರ್ಜುನ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ
ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಮೊದಲ ದಿನ ಮೊದಲ ಪ್ರದರ್ಶನವೇ ವೀಕ್ಷಿಸಬೇಕು ಎನ್ನುವ ಹುಚ್ಚು ಅಭಿಮಾನಕ್ಕೆ ಒಳಗಾದ ಇಬ್ಬರು ಅಭಿಮಾನಿಗಳು ಇದೇ ಪುಷ್ಪ ದ ರೂಲ್ ಚಿತ್ರ ವೀಕ್ಷಣೆ ವಿಚಾರವಾಗಿ ಎರಡು ಪ್ರತ್ಯೇಕ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ.
ಹೌದು, ನಿನ್ನೆ ( ಡಿಸೆಂಬರ್ 4 ) ರಾತ್ರಿ 9.30ಕ್ಕೆ ಪುಷ್ಪ ದ ರೂಲ್ ಚಿತ್ರದ ಪ್ರೀಮಿಯರ್ ಶೋವನ್ನು ಹೈದರಾಬಾದ್‌ನ ಆರ್‌ಟಿಸಿಎಕ್ಸ್ ರಸ್ತೆಯಲ್ಲಿರುವ ಸಂದ್ಯಾ 75ಎಂಎಂ ಚಿತ್ರಮಂದಿರದಲ್ಲಿ ಆಯೋಜಿಸಲಾಗಿತ್ತು. ಈ ಚಿತ್ರ ವೀಕ್ಷಿಸಲು ನಟ ಅಲ್ಲು ಅರ್ಜುನ್ ಸಹ ಆಗಮಿಸಿದ್ದರು.
ಪ್ರೀಮಿಯರ್ ಶೋ ನೋಡುವ ಹಾಗೂ ತಮ್ಮ ನೆಚ್ಚಿನ ನಟನನ್ನು ನೋಡುವ ಸಲುವಾಗಿ ಸಂದ್ಯಾ ಚಿತ್ರಮಂದಿರದಲ್ಲಿ ಜನ ಕಿಕ್ಕಿರಿದು ಜಮಾಯಿಸಿದ್ದರು. ಈ ಸಮಯದಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ ಹಾಗೂ ಅವರ ಜತೆ ಬಂದಿದ್ದ ಪುತ್ರನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ದೊಡ್ಡಬಳ್ಳಾಪುರದಲ್ಲಿ ಆಂಧ್ರಪ್ರದೇಶದ ಪಾಲಕೊಂಡ ನಿವಾಸಿ ಪ್ರವೀಣ್ (19) ಎಂಬಾತ ಪುಷ್ಪ ಚಿತ್ರ ನೋಡಲು ರೈಲು ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


