ನವದೆಹಲಿ: ರಸ್ತೆ ಅಪಘಾತ ಪ್ರಕರಣಗಳಲ್ಲಿ ಸಾವುಗಳ ಸಂಖ್ಯೆ ಏರುತ್ತಿದೆ. ಜನರಿಗೆ ಕಾನೂನಿನ ಬಗ್ಗೆ ಭಯ ಅಥವಾ ಗೌರವ ಇಲ್ಲವಾಗಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಬೇಸರ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಇಂದು ಶೂನ್ಯವೇಳೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸ್ವತಃ ನಾನೇ ಅಪಘಾತಕ್ಕೆ ಗುರಿಯಾಗಿದ್ದೆ. ಈ ಸಮಸ್ಯೆ ಕುರಿತು ನಾನು ಸೂಕ್ಷ್ಮತೆ ಉಳ್ಳವನಾಗಿದ್ದೇನೆ ಎಂದರು.
ಇನ್ನು ಅಪಘಾತಗಳಲ್ಲಿ ಸಾವಿನ ಸಂಖ್ಯೆ ತಗ್ಗಿಸಲು ಸರ್ಕಾರ ಶ್ರಮ ವಹಿಸುತ್ತಿದೆ. ರಸ್ತೆ ನಿರ್ವಹಣೆ, ವಾಹನಗಳ ನಿರ್ವಹಣೆ, ಕಾನೂನು ಜಾರಿ ಮತ್ತು ಜನಜಾಗೃತಿಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಈ ಸಮಾಜದ ಅತಿದೊಡ್ಡ ಸಮಸ್ಯೆ ಎಂದರೆ ಕಾನೂನಿನ ಬಗ್ಗೆ ಗೌರವ ಅಥವಾ ಭೀತಿ ಇಲ್ಲದಿರುವುದು. ಯಾರೂ ಕೂಡ ಹೆಲ್ಮೆಡೆ ಧರಿಸುವುದಿಲ್ಲ. ರೆಡ್ ಸಿಗ್ನಲ್ ಕಂಡರೂ ವಾಹನ ನಿಲ್ಲಿಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಹೆಲ್ಮೆಟ್ ಧರಿಸದ ಕಾರಣಕ್ಕೆ 30 ಸಾವಿರ ಜನರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿಪಕ್ಷದ ನಾಯಕನಾಗಿದ್ದಾಗ ನಾನೇ ಸ್ವತಃ ಅಪಘಾತಕ್ಕೆ ಗುರಿಯಾಗಿದ್ದೆ. ಕಾಲಿಗೆ ನಾಲ್ಕು ಕಡೆ ತೀವ್ರ ಪೆಟ್ಟಾಗಿತ್ತು ಎಂದು ಗಡ್ಕರಿ ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


