Sunday, November 1, 2026
spot_img
More
    spot_img
    HomeLatest newsಕನ್ನಡ ಬರೆಯಲಾಗದೇ ತಡಕಾಡಿದ್ದರ ಕುರಿತು ಸಚಿವ ಶಿವರಾಜ್‌ ತಂಗಡಗಿ ಮೊದಲ ಪ್ರತಿಕ್ರಿಯೆ

    ಕನ್ನಡ ಬರೆಯಲಾಗದೇ ತಡಕಾಡಿದ್ದರ ಕುರಿತು ಸಚಿವ ಶಿವರಾಜ್‌ ತಂಗಡಗಿ ಮೊದಲ ಪ್ರತಿಕ್ರಿಯೆ

    ಬೆಂಗಳೂರು: ತಾವು ಬಿಎಸ್‌ಸಿ ಪದವೀಧರರಾಗಿದ್ದು ಕನ್ನಡ ಬರೆಯಲು ಬರಲಾಗದಷ್ಟು ದಡ್ಡನೇನಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕಿಡಿಕಾರಿದ್ದಾರೆ.


    ಕರಟಗಿಯ ಜೆ.ಪಿ.ನಗರದಲ್ಲಿನ ಅಂಗನವಾಡಿ ಕೇಂದ್ರದ ಉದ್ಘಾಟನೆಯೊಂದರಲ್ಲಿ ಕನ್ನಡದಲ್ಲಿ ಶುಭವಾಗಲಿ ಎಂದು ಬರೆಯಲು ಸಚಿವ ಶಿವರಾಜ್ ತಂಗಡಗಿ ಪರದಾಡಿದರು ಎಂಬ ವರದಿಗೆ ಸಂಬಂಧಪಟ್ಟಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ನಾನು ಏನು ಬರೆಯುತ್ತೇನೆ ಎಂದು ನೋಡುವಷ್ಟು ತಾಳೆಯೂ ಟೀಕೆಕಾರರಿಗೆ ಇಲ್ಲ ಎಂದು ಆಕ್ಷೇಪಿಸಿದರು.


    ನಾನು ಪದವಿ ಓದಿದ್ದೇನೆ. ಏನೇನು ಬರೆಯಬೇಕು ಎಂದು ನನಗೆ ಗೊತ್ತಿದೆ. ಈವರೆಗೂ ಯಾವುದೇ ಕಾರ್ಯಕ್ರಮಗಳಲ್ಲಿ ಭಾಷಣದ ಪ್ರತಿಯನ್ನು ಒಂದು ಚೂರೂ ತಪ್ಪಾಗದಂತೆ ಓದಿದ್ದೇನೆ. 12 ವರ್ಷದಿಂದ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಜನವರಿ 26ರ ಗಣರಾಜ್ಯೋತ್ಸವದವರೆಗೂ ಎಲ್ಲಾ ಭಾಷಣಗಳನ್ನೂ ನಾನೇ ಮಾಡುತ್ತೇನೆ. ಎಂದೂ ತಪ್ಪು ಉಲ್ಲೇಖ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.


    ಕಳೆದ ಎರಡೂವರೆ ವರ್ಷಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಯಾವ ರೀತಿ ನಿರ್ವಹಣೆ ಮಾಡಿದ್ದೇನೆ ಎಂದು ಗಮನಿಸಬೇಕಿದೆ. ಸಾಹಿತಿಯೊಬ್ಬರ ಮನೆಯ ಮದುವೆ ಕಾರ್ಯಕ್ರಮಕ್ಕೆ ಭೇಟಿ ನೀಡಿದಾಗ ಇಲಾಖೆಯನ್ನು ಜವಾಬ್ದಾರಿಯುತವಾಗಿ ಉತ್ತಮವಾಗಿ ನಿರ್ವಹಿಸಿದವರಲ್ಲಿ ಇಬ್ಬರ ಹೆಸರುಗಳಿತ್ತು. ನೀನು ಮೂರನೆಯವನು ಎಂದು ನನ್ನನ್ನು ಸಾಹಿತಿ ಕೊಂಡಾಡಿದ್ದರು ಎಂದು ಹೇಳಿಕೊಂಡರು.


    ತಂಗಡಗಿ ವಿರುದ್ಧ ಅಪಪ್ರಚಾರ ಮಾಡಲು ಯಾವ ವಿಚಾರಗಳೂ ಇಲ್ಲ ಎಂದು ಅಸಹಾಯಕರಾಗಿ ಈ ರೀತಿಯ ವಿಚಾರಗಳನ್ನು ಬಳಸಿಕೊಳ್ಳಬಾರದು. ಅಂದಿನ ಕಾರ್ಯಕ್ರಮದಲ್ಲಿ ನಾನು ಬೇರೆ ಏನೋ ಬರೆಯಲು ಮುಂದಾಗಿದ್ದೆ. ಶುಭವಾಗಲಿ ಎಂದು ಬರೆಯಿರಿ ಸಾಕು ಎಂದು ಅಧಿಕಾರಿಗಳು ಸಲಹೆ ನೀಡಿದರು. ಹಾಗಾಗಿ ಒಂದಿಷ್ಟು ಗಲಿಬಿಲಿಯಾಗಿರಬಹುದು. ಶುಭ ಎಂದು ಬರೆಯುವಾಗ ಭ ಮಹಾಪ್ರಾಣ ಬರೆಯುವಾಗ ಬೇರೆ ಒತ್ತಡಕ್ಕೆ ಒಂದಿಷ್ಟು ಗೊಂದಲವಾಗಿದ್ದರೂ ಅದು ದೊಡ್ಡದಲ್ಲ ಎಂದರು.
    ಯಾವ್ಯಾವ ಇಲಾಖೆಯಲ್ಲಿ ಏನೇನು ಕೆಲಸಗಳಾಗಿವೆ ಎಂದು ನೋಡಲಿ. ನಾನು ಕನ್ನಡ ಬರೆಯಲು ಗೊತ್ತಿಲ್ಲದವನಲ್ಲ. ನನ್ನನ್ನು ಟೀಕೆ ಮಾಡುವವರ ಜೊತೆ ಬಹಿರಂಗ ಚರ್ಚೆಗೂ ನಾನು ಸಿದ್ಧ. ಕ್ಷೇತ್ರದ ಜನರಿಗೆ ತಂಗಡಗಿ ಎಷ್ಟು ಭಾಷೆ ಎಂದು ಗೊತ್ತಿದೆ. ನನ್ನ ತಾಳೆ ಪರೀಕ್ಷೆ ಮಾಡಬೇಡಿ. ಬೇಕಿದ್ದರೆ ನನ್ನ ಜೊತೆ ವಾದ ಮಾಡುವವರು ಅವರಿಗೇನು ಗೊತ್ತಿದೆ, ಎಷ್ಟು ಬರೆಯಲು ಗೊತ್ತಿದೆ, ನನಗೆಷ್ಟು ಬರೆಯಲು ಗೊತ್ತಿದೆ ಎಂಬ ಮುಕ್ತ ಸವಾಲಿಗೆ ಎದುರಾಗಲಿ ಎಂದು ಹೇಳಿದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search