ನಿನ್ನೆ ( ಮಾರ್ಚ್ 5 ) ಲಾಹೋರ್‌ನ ಗಡ್ಡಾಫಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 50 ರನ್‌ಗಳ ಗೆಲುವು ದಾಖಲಿಸಿದ ನ್ಯೂಜಿಲೆಂಡ್ ಫೈನಲ್‌ಗೆ ಲಗ್ಗೆ ಇಟ್ಟಿದೆ.
ನ್ಯೂಜಿಲೆಂಡ್ ಗೆದ್ದು ಫೈನಲ್‌ಗೆ ಲಗ್ಗೆ ಇಡುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಫೈನಲ್ ಸೆಣಸಾಟದ ಕುರಿತು ಚರ್ಚೆಗಳು ಆರಂಭಗೊಂಡಿವೆ. ದುಬೈನಲ್ಲಿ ಇದೇ ಭಾನುವಾರ (ಮಾರ್ಚ್ 9) ಈ ಫೈನಲ್ ಪಂದ್ಯ ನಡೆಯಲಿದ್ದು, ಗೆಲುವು ಸೋಲುಗಳ ಲೆಕ್ಕಾಚಾರ ಸಹ ಶುರುವಾಗಿದೆ.
ಇನ್ನು ಫೈನಲ್ ಹಣಾಹಣಿಯ ಕುರಿತು ರೋಹಿತ್ ಶರ್ಮಾ ಅಸ್ಟ್ರೇಲಿಯಾ ವಿರುದ್ಧದ ಮೊದಲ ಸೆಮಿಫೈನಲ್ ಪಂದ್ಯದ ಅಂತ್ಯದ ನಂತರ ಪ್ರತಿಕ್ರಿಯೆ ನೀಡಿದ್ದರು. ಫೈನಲ್‌ಗೆ ಯಾವ ತಂಡ ಬರುವ ನಿರೀಕ್ಷೆ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದ ರೋಹಿತ್ ಶರ್ಮಾ ನಾವು ಅದರ ಬಗ್ಗೆ ಹೆಚ್ಚ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು. ಅಲ್ಲದೇ ಎರಡೂ ತಂಡಗಳು ಸಹ ಉತ್ತಮ ತಂಡಗಳು ಹಾಗಾಗಿಯೇ ಸೆಮಿಫೈನಲ್ ಪ್ರವೇಶಿಸಿವೆ ಎಂದಿದ್ದ ರೋಹಿತ್ ನಾವು ಅದರ ಮೇಲೆ ಕಣ್ಣಿಟ್ಟಿರುತ್ತೇವೆ. ಇತ್ತಡ ಇದೆ ಎಂದು ಗೊತ್ತು, ಆದರೂ ಸಹ ಫೈನಲ್‌ಗೂ ಮುನ್ನ ವಿಶ್ರಾಂತಿಗೆ ಸಮಯ ಸಿಕ್ಕಿರುವುದು ಅನುಕೂಲವಾಯಿತು ಎಂದರು. ಒಂದು ದಿನ ತಂಡದ ಸದಸ್ಯರಿಗೆ ವಿಶ್ರಾಂತಿ ಮಾಡಲಿದ್ದಾರೆ ಎಂದರು. ಅಗತ್ಯ ಬಿದ್ದಾಗ ಅದರ ಬಗ್ಗೆ ಚಿಂತಿಸುತ್ತೇವೆ ಎಂದು ಶರ್ಮಾ ಹೇಳಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


