ಸಾಮಾಜಿಕ ಜಾಲತಾಣದಲ್ಲಿ ಕೆಲ ಹುಚ್ಚಾಭಿಮಾನಿಗಳು ಮಾಡುವ ಕೆಲಸಕ್ಕೆ ಫ್ಯಾನ್ ವಾರ್‌ಗಳು ನಡೆಯುವುದು ಜಿಯೊ ನಂತರದ ದಿನಗಳಲ್ಲಿ ಅತಿ ಸಾಮಾನ್ಯವಾಗಿಬಿಟ್ಟಿದೆ. ಸದಾ ತಮ್ಮದೇ ಚಿತ್ರರಂಗದ ನಟರ ಕಾಲೆಳೆದು, ಕಾಮೆಂಟ್‌ಗಳಲ್ಲಿ ಇತರೆ ನಟರ ಕುಟುಂಬದ ತೇಜೋವಧೇ ಮಾಡುತ್ತಾ ಕೂರುವ ಈ ಬ್ಯಾಚ್ ಇದೀಗ ನಟ ದರ್ಶನ್ ಮೇಲೆ ಮುಗಿಬಿದ್ದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಟ್ರೋಲ್ ಶುರುವಾಗಿತ್ತು. ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ದರ್ಶನ್ ಆರೋಪಿಯಂತೆ ಹಾಗೂ ಪವನ್ ಕಲ್ಯಾಣ್ ಪೊಲೀಸ್ ವಸ್ತ್ರದಲ್ಲಿರುವ ಫೋಟೊಗಳನ್ನು ಹಂಚಿಕೊಂಡು ಟ್ರೋಲ್ ಮಾಡಿದ್ದ.
ಇದಕ್ಕೆ ಪ್ರತ್ಯುತ್ತರವಾಗಿ ದರ್ಶನ್ ಅಭಿಮಾನಿಗಳು ಪವನ್ ಕಲ್ಯಾಣ್ ಟ್ರೋಲ್ ಮಾಡಲಾರಂಭಿಸಿದ್ದಾರೆ. ಹೀಗೆ ಶುರುವಾದ ಫ್ಯಾನ್ ವಾರ್ ಸದ್ಯ ಎಕ್ಸ್‌ನಲ್ಲಿ ಟ್ರೆಂಡಿಂಗ್ ಪಟ್ಟಿಗೇರುವ ಮಟ್ಟಕ್ಕೆ ತಲುಪಿದೆ. ಪವನ್ ಕಲ್ಯಾಣ್ ಅಭಿಮಾನಿಗಳ ಜೊತೆಗೆ ಇತರೆ ತೆಲುಗು ನಟರ ಅಭಿಮಾನಿಗಳೂ ಸಹ ದರ್ಶನ್ ಟ್ರೋಲ್ ಮಾಡಿದ್ದು, ʼಕೆಎಫ್‌ಐ ಕ್ರಿಮಿನಲ್ ದರ್ಶನ್ʼ ಹ್ಯಾಷ್‌ಟ್ಯಾಗ್ ಅಡಿಯಲ್ಲಿ 1,04,000 ಟ್ವೀಟ್‌ಗಳನ್ನು ಮಾಡಿದ್ದಾರೆ.
ಒಂದೇ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಬಾರಿಸಿದ 9ನೇ ಆಟಗಾರ ಗಿಲ್; ಮೊದಲು ಬಾರಿಸಿದ್ದು ಯಾರು?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


