ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ಚೇನೂ ದೈವ ಭಕ್ತರಲ್ಲ. ಇತರೆ ರಾಜಕಾರಣಿಗಳ ರೀತಿ ದೇವರ ಹೆಸರಿನಲ್ಲಿ ರಾಜಕೀಯ ಮಾಡಿದ್ದೂ ಸಹ ಇಲ್ಲ. ಹಾಗಂತ ದೇವರನ್ನು ವಿರೋಧಿಸಿ ಮಾತನಾಡಿದವರೂ ಅಲ್ಲ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಓರ್ವ ನಾಸ್ತಿಕ ಎಂಬ ಟೀಕೆಗಳು ಹಿಂದಿನಿಂದಲೂ ಕೇಳಿಬರುತ್ತಿವೆ.
ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಿದ್ದರಾಮಯ್ಯ ಹಲವು ಬಾರಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರ ವಿರೋಧಿ ಬಣ ಟೀಕೆಯನ್ನೂ ಮಾಡಿದೆ. ಅದರಲ್ಲಿಯೂ ಸಿದ್ದರಾಮಯ್ಯ ಹಣೆಗೆ ಕುಂಕುಮ ಇಟ್ಟಾಗಲೆಲ್ಲ ಒಂದಲ್ಲ ಒಂದು ಕಾಮೆಂಟ್ ಈ ಕುರಿತು ಇದ್ದೇ ಇರುತ್ತದೆ.
ಅದೇ ವಿಷಯವಾಗಿ ನಿನ್ನೆ ( ಜುಲೈ 6 ) ಸಿದ್ದರಾಮಯ್ಯ ಮಾತನಾಡಿದ್ದು, ತಾವು ಹೆಚ್ಚೇನೂ ದೇವಾಲಯಗಳಿಗೆ ಹೋಗಲ್ಲ, ಆದರೆ ಈ ಹಳ್ಳಿಗಳಿಗೆ ಭೇಟಿ ನೀಡಿ ದೇವಸ್ಥಾನಕ್ಕೆ ಹೋಗದೇ ಬಂದರೆ ಇವನು ದೇವಸ್ಥಾನಕ್ಕೆ ಬಂದಿಲ್ಲ ಇವನಿಗೆ ವೋಟ್ ಹಾಕೋದು ಬೇಡ ಅಂತ ಜನ ನಿರ್ಧಾರ ಮಾಡಿಬಿಡ್ತಾರೆ. ನಾನು ರಾಜಕಾರಣಿ ಅಲ್ವಾ? ಹೋಗಲೇಬೇಕು, ಹೋಗದಿದ್ದರೆ ವೋಟ್ ಸಿಗಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಒಂದೇ ಪಂದ್ಯದಲ್ಲಿ ದ್ವಿಶತಕ ಹಾಗೂ ಶತಕ ಬಾರಿಸಿದ 9ನೇ ಆಟಗಾರ ಗಿಲ್; ಮೊದಲು ಬಾರಿಸಿದ್ದು ಯಾರು?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


