ಗುವಾಹಟಿ: ಸ್ತ್ರೀರೋಗ ತಜ್ಞನ ಸೋಗು ಹಾಕಿಕೊಂಡು ಹತ್ತು ವರ್ಷಕ್ಕೂ ಹೆಚ್ಚು ಕಾಲ ಅಸ್ಸಾಂನ ಸಿಲ್ದಾರ್ ಜಿಲ್ಲೆಯ ಎರಡು ಖಾಸಗಿ ಆಸ್ಪತ್ರೆಗಳಲ್ಲಿ 50ಕ್ಕೂ ಹೆಚ್ಚು ಸಿಸೇರಿಯನ್ ಆಪರೇಷನ್ ನಡೆಸಿದ್ದ ನಕಲಿ ವೈದ್ಯನನ್ನು
ಪೊಲೀಸರು ಬಂಧಿಸಿದ್ದಾರೆ.
ಇದು ನಟ ಸಂಜಯ್ ದತ್ ಅಭಿನಯದ ಜನಪ್ರಿಯ ‘ಮುನ್ನಾ ಭಾಯ್ ಎಂಬಿಬಿಎಸ್’ ಸಿನಿಮಾ ಶೈಲಿಯ ನಿಜ ಜೀವನದ ಇನ್ನೊಂದು ಪ್ರಕರಣವಾಗಿದೆ. ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಆಪರೇಷನ್ ಥಿಯೇಟರ್‌ನಲ್ಲೇ ಬಂಧಿತನಾದ ಖದೀಮ ವೈದ್ಯನ ಹೆಸರು ಪುಲೋಕ್ ಮಾಲಕ.
ಅಸ್ಸಾಂನ ಶ್ರೀಭೂಮಿ ಜಿಲ್ಲೆಯ ನಿವಾಸಿಯಾದ ಮಾಲಕರ್‌ನ ಶಿಕ್ಷಣದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಲಭ್ಯವಾದ ಮಾಹಿತಿಯೊಂದರ ಆಧಾರದಲ್ಲಿ ತನಿಖೆ ನಡೆಸಲು ಆರಂಭಿಸಲಾಗಿತ್ತೆಂದು ಹಿರಿಯ ಪೊಲೀಸ್ ಅಧಿಕಾರಿ ನುಮಲ್ ಮಹತ್ತಾ ಹೇಳಿದ್ದಾರೆ.
ಆತನ ಎಲ್ಲ ಸರ್ಟಿಫಿಕೆಟ್‌ಗಳು ನಕಲಿ ಎಂಬುದು ವಿಚಾರಣೆಯಲ್ಲಿ ಗೊತ್ತಾಯಿತು. ಅನೇಕ ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದಾನೆಂದು ಮಹತ್ತಾ ತಿಳಿಸಿದ್ದಾರೆ.
ಧರ್ಮಸ್ಥಳ: ಮತ್ತೆ ಎಸ್‌ಐಟಿ ಅಧಿಕಾರಿಗಳನ್ನು ಗುಡ್ಡ ಹತ್ತಿಸಿದ ಅನಾಮಿಕ; ಇಂದು ಎಷ್ಟು ಅಸ್ತಿಪಂಜರ?
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


