ಮೈಸೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ಪ್ರಕಟಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ನ್ಯಾಯಾಧೀಶರ ತೀರ್ಪನ್ನು ಪರಾಮರ್ಶೆ ಮಾಡುವ ಶಕ್ತಿ ನಮಗಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪತ್ರಿಕಾರಂಗ, ಶಾಸಕಾಂಗ ಸೇರಿದಂತೆ ಯಾವುದೇ ಅಂಗದಲ್ಲಿ ತಪ್ಪಾದರೆ ಶಿಕ್ಷೆ ಕೊಡೋದು ನ್ಯಾಯಾಂಗ.
ನ್ಯಾಯಾಂಗ ಕೊಡೋದು ದೇವರ ತೀರ್ಪು ಎಂದೇ ಜನರು ನಂಬಿದ್ದಾರೆ. ಇದರ ಜೊತೆಯಲ್ಲಿ ಮೇಲ್ಮನವಿ ಹೋಗಬಹುದು. ನ್ಯಾಯಾಧೀಶರ ತೀರ್ಪುನ್ನು ಪರಾಮರ್ಶೆ ಮಾಡುವ ಶಕ್ತಿ ನಮಗಿಲ್ಲ ಎಂದರು.
ಇನ್ನು ಕೆಆರ್‌ಎಸ್‌ಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದು ಎಂಬ ಸಚಿವ ಎಚ್.ಸಿ.ಮಹದೇವಪ್ಪ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಡಿಗಲ್ಲು ಹಾಕಿ ಕೆಆರ್‌ಎಸ್ ಪ್ರಾರಂಭ ಮಾಡಿದ್ದು ರಾಜರು ಎಂದು ಎಲ್ಲರಿಗೂ ಗೊತ್ತು. ಆದರೆ ಶಿಲಾನ್ಯಾಸ ಇದೇ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಅದರ ಇತಿಹಾಸದ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಇನ್ನು ಲೋಕಸಭಾ ಚುನಾವಣೆ ವೇಳೆ ಇವಿಎಂನಲ್ಲಿ ಮತಗಳ್ಳತನ ನಡೆದಿದೆ ಎಂಬ ಕಾಂಗ್ರೆಸ್ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನಗೆ ವೈಯಕ್ತಿಕವಾಗಿ ಅದರ ಬಗ್ಗೆ ಗೊತ್ತಿಲ್ಲ. ಚುನಾವಣೆ ವ್ಯವಸ್ಥೆ ಮೇಲೆ ಎಲ್ಲರಿಗೂ ನಂಬಿಕೆಯಿದೆ. ಈಗ ಅದರ ಮೇಲೆ ಕಾಂಗ್ರೆಸ್ ಪಕ್ಷ ಹೋರಾಟ ಮಾಡುತ್ತಿದೆ. ಅದು ತಪ್ಪೋ ಸುಳ್ಳೋ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬಿಜೆಪಿಯವರು ಅವರ ಪಕ್ಷದ ಸಂಘಟನೆ ಮಾಡ್ತಿದ್ದಾರೆ. ನಿಖಿಲ್ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಸಂಘಟನೆಯನ್ನು ಮಾಡ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಒಂದಾಗುತ್ತಾರೆ. ಈಗಲೂ ಎಲ್ಲರೂ ಒಂದಾಗಿಯೇ ಹೋಗುತ್ತಿದ್ದೇವೆ. ಅವರ ಪಕ್ಷದ ಕಾರ್ಯಕರ್ತರನ್ನು ಅವರೇ ಸಂಘಟನೆ ಮಾಡಬೇಕು. ಜಿಟಿ ದೇವೇಗೌಡ ಯಾವ ರೀತಿ ಪಕ್ಷ ಕಟ್ಟಿದ್ದಾನೆ ಎಂದು ಎಚ್.ಡಿ.ದೇವೇಗೌಡರಿಗೆ ಗೊತ್ತು. ಕ್ಷೇತ್ರದ ಕೆಲಸದಿಂದ ನಾನು ಪಕ್ಷದ ವಿಚಾರವಾಗಿ ಎಲ್ಲೂ ಹೋಗಲು ಆಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.
ಲಾಲ್‌ಬಾಗ್ ಫಲಪುಷ್ಪ ಮೇಳ ಆಗಸ್ಟ್ 7ರಿಂದ ಆರಂಭ: ಟಿಕೆಟ್ ದರ ಹಾಗೂ ಮುಂಗಡ ಬುಕ್ಕಿಂಗ್ ವಿವರಗಳು ಇಲ್ಲಿದೆ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


