Tuesday, September 1, 2026
spot_img
More
    spot_img
    HomeLatest newsಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ: ನೋಂದಣಿ ಅಭಿಯಾನ 2025ರ ಆಗಸ್ಟ್‌ 15ರವರೆಗೆ ವಿಸ್ತರಣೆ

    ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ: ನೋಂದಣಿ ಅಭಿಯಾನ 2025ರ ಆಗಸ್ಟ್‌ 15ರವರೆಗೆ ವಿಸ್ತರಣೆ

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ‘ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY)’ಯಡಿಯಲ್ಲಿ ನಡೆಯುತ್ತಿರುವ ವಿಶೇಷ ನೋಂದಣಿ ಅಭಿಯಾನವನ್ನು 2025ರ ಆಗಸ್ಟ್ 15ರವರೆಗೆ ವಿಸ್ತರಿಸಿದೆ. ಈ ಅಭಿಯಾನವು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮತ್ತು ನೋಂದಣಿ ಕಾರ್ಯವನ್ನು ನಡೆಸುತ್ತಿದೆ.ಅಭಿಯಾನದ ಮುಖ್ಯ ಉದ್ದೇಶವೇನೆಂದರೆ ಎಲ್ಲಾ ಅರ್ಹ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರನ್ನು ತಲುಪಿಸಿ, ಅವರು ಸಕಾಲದಲ್ಲಿ ಯೋಜನೆಯಡಿಯಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರೋತ್ಸಾಹಿಸುವುದು.ಈ ಯೋಜನೆಯ ಮೂಲಕ ಮಹಿಳೆಯರು ಆರೋಗ್ಯವಂತ ಮಗುವನ್ನು ಪ್ರಸವಿಸಬಹುದಾದ ಶಕ್ತಿ-ಸಾಮರ್ಥ್ಯ ಹೊಂದುವಂತಾಗುತ್ತದೆ. ಅರ್ಹ ಮಹಿಳೆಯರು ತಮ್ಮ ಸ್ಥಳೀಯ ಅಂಗನವಾಡಿ ಕೇಂದ್ರ ಅಥವಾ ಆಶಾ ಕಾರ್ಯಕರ್ತೆ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

    Advertisement

    ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY) ಎಂದರೇನು?

    ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY) ಎಂಬುದು ಗರ್ಭಿಣಿಯರು ಮತ್ತು ಬಾಣಂತಿಯರಿಗಾಗಿ ಭಾರತ ಸರ್ಕಾರ ಜಾರಿಗೆ ತಂದಿರುವ ಒಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.ಯೋಜನೆ ಪ್ರಾರಂಭವಾದಾಗಿನಿಂದ 2025ರ ಜುಲೈ 31ರವರೆಗೆ, 4.05 ಕೋಟಿಗೂ ಹೆಚ್ಚು ಫಲಾನುಭವಿಗಳ ಬ್ಯಾಂಕ್ / ಅಂಚೆ ಕಚೇರಿ ಖಾತೆಗಳಿಗೆ ನೇರ ನಗದು ವರ್ಗಾವಣೆಯ ಮೂಲಕ ₹19,028/- ಕೋಟಿ ಮೊತ್ತದಷ್ಟು ಮಾತೃತ್ವ ಭತ್ಯೆಯನ್ನು (ಕನಿಷ್ಠ ಒಂದು ಕಂತು) ಪಾವತಿಸಲಾಗಿದೆ,ಗರ್ಭೀಣಿ ಮತ್ತು ಬಾಣಂತಿಯರಿಗೆ ಉಂಟಾಗುವ ತೊಂದರೆ, ಅನಾರೋಗ್ಯಗಳಾದ ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ, ಬಾಣಂತಿಯರ ಮರಣಗಳನ್ನು ತಡೆಯಲು ಭಾರತ ಸರ್ಕಾರ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಜಾರಿ ತಂದಿದೆ.

    ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಪ್ರೋತ್ಸಾಹಧನ

    ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ (PMMVY)ಯು ಮಿಷನ್ ಶಕ್ತಿಯ ‘ಸಾಮರ್ಥ್ಯ’ ಉಪ-ಯೋಜನೆಯಡಿಯಲ್ಲಿ ಬರುವ ಕೇಂದ್ರ ಪ್ರಾಯೋಜಿತ ಯೋಜನೆ. ಇದು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ (DBT) ಮೂಲಕ ಆರ್ಥಿಕ ನೆರವು ನೀಡುತ್ತದೆ.

    ಪ್ರೋತ್ಸಾಹಧನದ ವಿವರಗಳು:

    ಮೊದಲ ಮಗುವಿಗೆ: ಎರಡು ಕಂತುಗಳಲ್ಲಿ ಒಟ್ಟು ₹5,000 ಪ್ರೋತ್ಸಾಹಧನ ನೀಡಲಾಗುತ್ತದೆ.

    ಎರಡನೇ ಮಗುವಿಗೆ (ಹೆಣ್ಣು ಮಗುವಾದರೆ): ಹೆರಿಗೆಯ ನಂತರ ಒಂದೇ ಕಂತಿನಲ್ಲಿ ₹6,000 ಪ್ರೋತ್ಸಾಹಧನ ನೀಡಲಾಗುತ್ತದೆ.

    ಈ ಯೋಜನೆಯ ಮುಖ್ಯ ಉದ್ದೇಶ ಗರ್ಭಿಣಿಯರು ಮತ್ತು ತಾಯಂದಿರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು, ಪೌಷ್ಟಿಕ ಆಹಾರ ಸೇವನೆಗೆ ಪ್ರೋತ್ಸಾಹಿಸುವುದು ಮತ್ತು ತಾಯಿ-ಮಗುವಿನ ಉತ್ತಮ ಆರೋಗ್ಯವನ್ನು ಖಚಿತಪಡಿಸುವುದು.

    ಯೋಜನೆಯ ಮುಖ್ಯ ಉದ್ದೇಶಗಳು:

    ಅಪೌಷ್ಟಿಕತೆ ತಡೆಗಟ್ಟುವುದು: ಗರ್ಭಾವಸ್ಥೆಯಲ್ಲಿ ಮತ್ತು ಬಾಣಂತನದ ಸಮಯದಲ್ಲಿ ಮಹಿಳೆಯರು ಎದುರಿಸುವ ಅಪೌಷ್ಟಿಕತೆ ಮತ್ತು ರಕ್ತಹೀನತೆಯಂತಹ ಸಮಸ್ಯೆಗಳನ್ನು ತಡೆಗಟ್ಟುವುದು.

    ಶಿಶು ಮತ್ತು ತಾಯಿಯ ಮರಣ ಪ್ರಮಾಣ ಕಡಿಮೆ ಮಾಡುವುದು: ಹೆರಿಗೆ ಸಮಯದಲ್ಲಿ ಮತ್ತು ನಂತರ ಸಂಭವಿಸುವ ಶಿಶುಮರಣ ಮತ್ತು ತಾಯಂದಿರ ಮರಣಗಳನ್ನು ಕಡಿಮೆ ಮಾಡುವುದು.

    ಆರ್ಥಿಕ ನೆರವು: ಉತ್ತಮ ಆರೋಗ್ಯ ಮತ್ತು ಪೌಷ್ಟಿಕ ಆಹಾರಕ್ಕಾಗಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಆರ್ಥಿಕ ಸಹಾಯ ಒದಗಿಸುವುದು.

    ʼಮಾತೃ ವಂದನಾ ಯೋಜನೆʼಗೆ ಅರ್ಜಿ ಸಲ್ಲಿಸುವುದು ಹೇಗೆ?

    ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

    ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿ:

    ಆಧಾರ್ ಕಾರ್ಡ್

    ರೇಷನ್ ಕಾರ್ಡ್

    ಲಸಿಕೆ ಮಾಹಿತಿ

    ಬ್ಯಾಂಕ್ ಪಾಸ್‌ಬುಕ್

    ತಾಯಿ ಕಾರ್ಡ್

    ಮೊಬೈಲ್ ನಂಬರ್

    ಅಧಿಕಾರಿಗಳನ್ನು ಭೇಟಿ ಮಾಡಿ: ನಿಮ್ಮ ಹತ್ತಿರದ ಅಂಗನವಾಡಿ ಕಾರ್ಯಕರ್ತೆ ಅಥವಾ ಆಶಾ ಕಾರ್ಯಕರ್ತೆಯರನ್ನು ನೇರವಾಗಿ ಭೇಟಿ ಮಾಡಿ.

    ಅರ್ಜಿ ಸಲ್ಲಿಸಿ: ಅವರಿಗೆ ಅಗತ್ಯ ದಾಖಲೆಗಳನ್ನು ನೀಡಿ, ಯೋಜನೆಯಡಿ ನೋಂದಣಿಗೆ ಅರ್ಜಿ ಸಲ್ಲಿಸಿ.ಈ ಸರಳ ಹಂತಗಳ ಮೂಲಕ ನೀವು ಸುಲಭವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

    ಅತಿಯಾದ ಯೋಚನೆ ನಿಲ್ಲಿಸಲು ಈ ಸರಳ ಟ್ರಿಕ್ಸ್ ಅನುಸರಿಸಿ

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading