Thursday, August 6, 2026
spot_img
More
    spot_img
    HomeStateDistrictಮಂಡ್ಯ: ಶಾಸ್ತ್ರ ಹೇಳಿ ಭಯ ಹುಟ್ಟಿಸುತ್ತಿದ್ದ ಬುಡುಬುಡಿಕೆ ಜನರಿಗೆ ಚಳಿ ಬಿಡಿಸಿದ ಗ್ರಾಮಸ್ಥರು

    ಮಂಡ್ಯ: ಶಾಸ್ತ್ರ ಹೇಳಿ ಭಯ ಹುಟ್ಟಿಸುತ್ತಿದ್ದ ಬುಡುಬುಡಿಕೆ ಜನರಿಗೆ ಚಳಿ ಬಿಡಿಸಿದ ಗ್ರಾಮಸ್ಥರು

    ಮಂಡ್ಯ: ರಾತ್ರಿ ವೇಳೆ ಗ್ರಾಮಕ್ಕೆ ಬಂದು ಜನರಿಗೆ ಶಾಸ್ತ್ರ ಹೇಳಿ ಭಯ ಹುಟ್ಟಿಸುತ್ತಿದ್ದ ಬುಡುಬುಡಿಕೆ ಜನರಿಗೆ ಗ್ರಾಮಸ್ಥರೇ ಚಳಿ ಬಿಡಿಸಿದ ಘಟನೆ ಮಂಡ್ಯ ತಾಲ್ಲೂಕಿನ ಕೀಲಾರ ಗ್ರಾಮದಲ್ಲಿ ನಡೆದಿದೆ.

    Advertisement

    ಬುಡುಬುಡಿಕೆ ಜನಾಂಗದ ಹಲವರು ರಾತ್ರಿ ವೇಳೆ ಗ್ರಾಮದಲ್ಲಿ ಬೀದಿಯಲ್ಲಿ ಸಂಚರಿಸಿ ಭಯ ಹುಟ್ಟಿಸುವ ರೀತಿಯೇ ಶಾಸ್ತ್ರ ಹೇಳುತ್ತಿದ್ದರು. ಇವರ ಭಯ ಹುಟ್ಟಿಸುವ ಭವಿಷ್ಯ ಹಾಗೂ ಶಾಸ್ತ್ರ ಕೇಳಿ ಸುತ್ತಮುತ್ತಲ ಊರಿನ ಜನರು ಆತಂಕಗೊಂಡಿದ್ದರು. ಒಂಟಿ ಮಹಿಳೆಯರಿದ್ದ ಮನೆಗೆ ಹೋಗಿ ವಿಚಿತ್ರ ರೀತಿಯ ಭಯ ಹುಟ್ಟಿಸುವ ಶಾಸ್ತ್ರ ಹೇಳಿ ಹಣ ಪಡೆಯುತ್ತಿದ್ದರು. ಗ್ರಾಮದ ಮುಖ್ಯ ಜಾಗದಲ್ಲೇ ನಿಂತು ಗ್ರಾಮಕ್ಕೆ ಆಪತ್ತು ಬರಲಿದೆ ಎಂದು ಹೇಳಿ ಭಯದ ವಾತಾವರಣ ಸೃಷ್ಟಿಸಿದ್ದರು. ಬುಡುಬುಡಿಕೆಯವರ ಶಾಸ್ತ್ರದಿಂದ ಕಂಗಾಲಾಗಿದ್ದ ಗ್ರಾಮಸ್ಥರು, ಅವರು ತಂಗಿದ್ದ ಊರ ಹೊರಗಿನ ಜಾಗಕ್ಕೆ ಹೋಗಿ ಎಚ್ಚರಿಕೆ ನೀಡಿದ್ದಾರೆ. ಗ್ರಾಮಸ್ಥರ ತರಾಟೆ ಬಳಿಕ ಕ್ಷಮೆ ಕೋರಿದ ಬುಡುಬುಡಿಕೆಯವರು, ಮತ್ತೊಮ್ಮೆ ಗ್ರಾಮಕ್ಕೆ ಬಂದು ಈ ರೀತಿ ಮಾಡುವುದಿಲ್ಲ ಎಂದು ಕ್ಷಮೆಯಾಚಿಸಿದ್ದಾರೆ. ಗ್ರಾಮಕ್ಕೆ ಇನ್ನೊಮ್ಮೆ ಗ್ರಾಮಕ್ಕೆ ಬಂದು ಈ ರೀತಿ ಉಪದ್ರವ ನೀಡಿದ್ರೆ ಪೊಲೀಸರಿಗೆ ಹಿಡಿದುಕೊಡುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

    ಲಾಲ್‌ಬಾಗ್ ಫಲಪುಷ್ಪ ಮೇಳ ಆಗಸ್ಟ್ 7ರಿಂದ ಆರಂಭ: ಟಿಕೆಟ್ ದರ ಹಾಗೂ ಮುಂಗಡ ಬುಕ್ಕಿಂಗ್ ವಿವರಗಳು ಇಲ್ಲಿದೆ!

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading