ಕನ್ನಡ ಕೇವಲ ಕರ್ನಾಟಕದಲ್ಲಿ ಮಾತ್ರ ಮಾತನಾಡುವುದಿಲ್ಲ. ನಮ್ಮ ನಾಡಿನ ಹೆಮ್ಮೆಯ ಭಾಷೆ ಗಡಿ ದಾಟಿ, ನೆರೆಯ ಆರು ರಾಜ್ಯಗಳಲ್ಲಿಯೂ ಗಣನೀಯ ಸಂಖ್ಯೆಯ ಕನ್ನಡ ಮಾತನಾಡುವವರನ್ನು ಹೊಂದಿದೆ. ಈ ರಾಜ್ಯಗಳು ಯಾವುವು ಮತ್ತು ಅಲ್ಲಿ ಎಷ್ಟು ಜನರು ಕನ್ನಡ ಮಾತನಾಡುತ್ತಾರೆ ಎಂಬುದರ ವಿವರ ಇಲ್ಲಿದೆ:
ಗುಜರಾತ್: 18 ಸಾವಿರಕ್ಕೂ ಹೆಚ್ಚು ಕನ್ನಡಿಗರ ನೆಲೆ,ಭಾರತದಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವವರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಗುಜರಾತ್ 7ನೇ ಸ್ಥಾನದಲ್ಲಿದೆ.
ಈ ರಾಜ್ಯದಲ್ಲಿ ಅಂದಾಜು 18,033 ಜನರು ಕನ್ನಡವನ್ನು ಮಾತನಾಡುತ್ತಾರೆ.ಗುಜರಾತ್ ಕರ್ನಾಟಕದಿಂದ ದೂರವಿದ್ದರೂ, ಅಲ್ಲಿ ವಲಸೆ ಹೋಗಿರುವ ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಜೀವಂತವಾಗಿರಿಸಿದ್ದಾರೆ.
ಕರ್ನಾಟಕ: ಕನ್ನಡದ ಮಾತೃಭೂಮಿ ಮತ್ತು ಅಗ್ರಸ್ಥಾನ,ಕನ್ನಡ ಮಾತನಾಡುವವರ ಪಟ್ಟಿಯಲ್ಲಿ ಕರ್ನಾಟಕವು ಸಹಜವಾಗಿಯೇ ಟಾಪ್ 1 ಸ್ಥಾನದಲ್ಲಿದೆ. ಇದು ಕನ್ನಡ ಭಾಷೆಯ ಮಾತೃಭೂಮಿ ಮತ್ತು ಅತಿಹೆಚ್ಚು ಕನ್ನಡಿಗರ ನೆಲೆ.ನಮ್ಮ ಕರ್ನಾಟಕದಲ್ಲಿ 4 ಕೋಟಿಗೂ ಹೆಚ್ಚಿನ ಜನರು ಕನ್ನಡವನ್ನೇ ಮಾತನಾಡುತ್ತಾರೆ.ಈ ಭಾಷೆಯೇ ರಾಜ್ಯದ ಅಧಿಕೃತ ಭಾಷೆ ಮತ್ತು ಪ್ರಧಾನ ಸಂಸ್ಕೃತಿಯ ಆಧಾರವಾಗಿದೆ.
ಗೋವಾ (Goa);ಅತಿ ಹೆಚ್ಚು ಕನ್ನಡ ಮಾತನಾಡುವವರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಗೋವಾ 6ನೇ ಸ್ಥಾನದಲ್ಲಿದೆ.ಕನ್ನಡ ಮಾತನಾಡುವವರ ಸಂಖ್ಯೆ: ಈ ಪುಟ್ಟ ರಾಜ್ಯದಲ್ಲಿ ಸುಮಾರು 67,923 ಜನರು ಕನ್ನಡವನ್ನು ಮಾತನಾಡುತ್ತಾರೆ.
ಕೇರಳ (Kerala)ಕನ್ನಡ ಮಾತನಾಡುವ ಜನಸಂಖ್ಯೆಯ ವಿಷಯದಲ್ಲಿ ಕೇರಳವು 5ನೇ ಸ್ಥಾನದಲ್ಲಿದೆ.ಕರ್ನಾಟಕದ ಗಡಿನಾಡಾಗಿರುವ ಕಾಸರಗೋಡು ಪ್ರದೇಶದಲ್ಲಿ ಅತಿ ಹೆಚ್ಚು ಜನರು ಕನ್ನಡವನ್ನು ಮಾತನಾಡುತ್ತಾರೆ.ಕೇರಳದಲ್ಲಿ ಒಟ್ಟಾರೆಯಾಗಿ 86,995 ಜನರು ಕನ್ನಡವನ್ನು ಮಾತನಾಡುತ್ತಾರೆ.
ಆಂಧ್ರಪ್ರದೇಶ (Andhra Pradesh);ರಾಜ್ಯದ ಸ್ಥಾನ: ಕನ್ನಡ ಮಾತನಾಡುವ ಜನರ ಸಂಖ್ಯೆಯನ್ನು ಆಧರಿಸಿ ಆಂಧ್ರಪ್ರದೇಶವು 4ನೇ ಸ್ಥಾನದಲ್ಲಿದೆ.ಇಲ್ಲಿ ಬರೋಬ್ಬರಿ 5,34,144 ಜನರು ಕನ್ನಡವನ್ನು ಮಾತನಾಡುತ್ತಾರೆ.
ಮಹಾರಾಷ್ಟ್ರ:
ಮಹಾರಾಷ್ಟ್ರವು ಕರ್ನಾಟಕದೊಂದಿಗೆ ಗಡಿಯನ್ನು ಹಂಚಿಕೊಂಡಿರುವುದರಿಂದ, ಇಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಇದು ಕನ್ನಡ ಮಾತನಾಡುವ 3 ನೇ ಅತಿದೊಡ್ಡ ರಾಜ್ಯವಾಗಿದ್ದು, ಇಲ್ಲಿ ಒಟ್ಟು 10,00,463 ಜನರು ಈ ಭಾಷೆಯನ್ನು ಮಾತನಾಡುತ್ತಾರೆ.
ತಮಿಳುನಾಡು:
ಕನ್ನಡ ಮಾತನಾಡುವವರಲ್ಲಿ ತಮಿಳುನಾಡು 2 ನೇ ಸ್ಥಾನದಲ್ಲಿದೆ. ಸರಿಸುಮಾರು 12,86,175 ಜನರು ಈ ಭಾಷೆಯನ್ನು ಮಾತನಾಡುತ್ತಾರೆ. ಪ್ರಧಾನವಾಗಿ ತಮಿಳು ಮಾತನಾಡುವ ಜನಸಂಖ್ಯೆಯಲ್ಲಿ ಅನೇಕ ಕನ್ನಡಿಗರು ವಾಸಿಸುತ್ತಾರೆ.
7000mAh ಬ್ಯಾಟರಿಯ Moto G67 Power 5G ಲಾಂಚ್; ಬೆಲೆ ₹14,999
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


