Sunday, November 1, 2026
spot_img
More
    spot_img
    HomeTop Storyವೈರಸ್ಸೂ ಇಲ್ಲ, ಏನೂ ಇಲ್ಲ; ಚೀನಾದಿಂದ ವಿಡಿಯೊ ಮೂಲಕ ಸತ್ಯಾಂಶ ಬಿಚ್ಚಿಟ್ಟ ಕನ್ನಡಿಗ

    ವೈರಸ್ಸೂ ಇಲ್ಲ, ಏನೂ ಇಲ್ಲ; ಚೀನಾದಿಂದ ವಿಡಿಯೊ ಮೂಲಕ ಸತ್ಯಾಂಶ ಬಿಚ್ಚಿಟ್ಟ ಕನ್ನಡಿಗ

    ಚೀನಾದಲ್ಲಿ ಎಚ್‌ಎಂಪಿವಿ ಎಂಬ ಹೊಸ ವೈರಸ್‌ ಕಾಣಿಸಿಕೊಂಡಿದ್ದು, ಇದು ಕೊರೊನಾ ವೈರಸ್‌ ಮಾದರಿಯಲ್ಲಿಯೇ ಪ್ರಭಾವ ಬೀರಲಿದೆ ಎಂಬ ಸುದ್ದಿಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹರಿದಾಡಿವೆ.

    ಚೀನಾದಲ್ಲಿ ಈಗಾಗಲೇ ಹಲವರಲ್ಲಿ ಈ ಎಚ್‌ಎಂಪಿವಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗಳಲ್ಲಿ ಬೆಡ್‌ಗಾಗಿ ನೂಕು ನುಗ್ಗಲು ಉಂಟಾಗಿದೆ, ಜನರು ಸಾಯುತ್ತಿದ್ದಾರೆ ಎಂದೆಲ್ಲಾ ಸುದ್ದಿಗಳು ಹರಿದಾಡತೊಡಗಿವೆ. ಹೀಗೆ ಎಚ್‌ಎಂಪಿವಿ ಜನರ ಮನಸ್ಸಲ್ಲಿ ಭಯ ಹುಟ್ಟುಹಾಕುತ್ತಿರುವ ಸಮಯದಲ್ಲೇ ಉತ್ತರ ಕರ್ನಾಟಕ ಮೂಲದ ರಾಜು ನಾಯಕ್‌ ಎಂಬುವವರು ಚೀನಾದಿಂದ ವಿಡಿಯೊ ಮಾಡಿ ಅಲ್ಲಿನ ಅಸಲಿಯತ್ತೇನು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

    ಉತ್ತರ ಚೀನಾದ ಡಾಲಿಯನ್‌ ಸಿಟಿಯಲ್ಲಿರುವ ಇವರು ಅಲ್ಲಿಂದಲೇ ವಿಡಿಯೊ ರೆಕಾರ್ಡ್‌ ಮಾಡಿ ನಿಜ ಪರಿಸ್ಥಿತಿ ಹೇಗಿದೆ ಎಂಬುದನ್ನು ತೋರಿಸಿದ್ದಾರೆ. ʼಒಂದು ವಾರದಿಂದ ಚೀನಾದಲ್ಲಿ ಹಂಗಂತೆ, ಹಿಂಗಂತೆ. ಆಸ್ಪತ್ರೆಯಲ್ಲಿ ಬೆಡ್‌ ಇಲ್ಲದೇ ಜನರು ಪರದಾಡುತ್ತಿದ್ದಾರೆ, ಹೆಣಗಳನ್ನು ಹೂಳೋಕೂ ಜಾಗ ಇಲ್ಲವಂತೆ ಎಂದೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಆದರೆ ಇಲ್ಲಿ ನೋಡಿ, ಡಾಲಿಯನ್‌ ಸಿಟಿ ನಾರ್ಮಲ್‌ ಆಗಿದೆ. ಟಿವಿಯಲ್ಲಿ ತೋರಿಸುತ್ತಿರುವ ಹಾಗೇನಿಲ್ಲ. ಜನ ಜೀವನ ಮೊದಲಿನಂತೇ ಇದೆ. ಶಾಪಿಂಗ್‌ ಮಾಲ್‌ ಹಾಗೂ ಇತರೆ ಜಾಗಗಳಲ್ಲಿ ಜನ ಎಂದಿನಂತೆ ಓಡಾಡುತ್ತಿದ್ದಾರೆ. ನೀವು ತೋರಿಸುವಂತಹ ಸಮಸ್ಯೆ ಇಲ್ಲ. ಟಿಆರ್‌ಪಿಗೋಸ್ಕರ ಇಂತಹ ಸುದ್ದಿಗಳನ್ನು ಹರಡಬೇಡಿ. ಅಂತಹದ್ದೇನೂ ಆಗಿಲ್ಲ. ನಾನು 2008ರಿಂದ ಇದ್ದೇನೆ. ಆ ಥರಹ ಏನಾದರೂ ಇದ್ದರೆ ನಿಮಗಿಂತ ಮೊದಲೇ ನಮಗೆ ವಿಷಯ ಗೊತ್ತಾಗುತ್ತೆ. ನಾನೂ ಮಾಸ್ಕ್‌ ಹಾಕಿಲ್ಲ, ಇಲ್ಲಿನ ಜನರೂ ಮಾಸ್ಕ್‌ ಹಾಕಿಲ್ಲ. ಯಾರೂ ಹೆದರಬೇಡಿ, ಹೆದರಿಸಬೇಡಿʼ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search