Friday, August 7, 2026
spot_img
More
    spot_img
    HomeTop Storyಡಿಕೆ ಸುರೇಶ್ ತಂಗಿ ಎಂದು ವಂಚಿಸಿದ್ದ ಐಶ್ವರ್ಯಾಗೌಡ ಮೇಲೆ ಮತ್ತೊಂದು ಎಫ್‌ಐಆರ್‌ ದಾಖಲು

    ಡಿಕೆ ಸುರೇಶ್ ತಂಗಿ ಎಂದು ವಂಚಿಸಿದ್ದ ಐಶ್ವರ್ಯಾಗೌಡ ಮೇಲೆ ಮತ್ತೊಂದು ಎಫ್‌ಐಆರ್‌ ದಾಖಲು

    ಬೆಂಗಳೂರು: ಮಾಜಿ ಸಂಸದ ಡಿ.ಕೆ.ಸುರೇಶ್‍ ಸಹೋದರಿಯೆಂದು ಪರಿಚಯಿಸಿಕೊಂಡು ವಂಚನೆ ಮಾಡಿರುವ ಐಶ್ವರ್ಯಗೌಡ ಮೇಲೆ ಇದೀಗ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‍ಐಆರ್ ದಾಖಲಾಗಿದೆ.

    Advertisement


    ಇದುವರೆಗೂ ಮಂಡ್ಯ ಪೂರ್ವ ಪೆÇಲೀಸ್ ಠಾಣೆ ಸೇರಿದಂತೆ ಒಟ್ಟು 4 ಪ್ರಕರಣಗಳು ದಾಖಲಾಗಿದ್ದು, ಚಂದ್ರಲೇಔಟ್ ಹಾಗೂ ಆರಾರ್ ನಗರ ಠಾಣೆಯಲ್ಲಿ ಶಿಲ್ಪಾಗೌಡ ಅವರು ನೀಡಿದ ದೂರಿನಲ್ಲಿ ಐಶ್ವರ್ಯಗೌಡಗೆ ಜಾಮೀನು ಲಭಿಸಿದೆ.


    ವೈದ್ಯೆಗೆ ವಂಚನೆ :
    ಆರಾರ್ನಗರದ ಬಿಇಎಂಎಲ್, 4ನೇ ಹಂತದ ನಿವಾಸಿ, ಸ್ತ್ರೀರೋಗ ತಜ್ಞೆ ಡಾ.ಮಂಜುಳಾ ಎ ಪಾಟೀಲ್ ಅವರ ಬಳಿ ಚೆಕಪ್‍ಗೆ ಹೋಗಿದ್ದ ವೇಳೆ ಐಶ್ವರ್ಯಗೌಡ ತಾನು ಡಿ.ಕೆ.ಸುರೇಶ್ ಅವರ ತಂಗಿ ಎಂದು ಹೇಳಿಕೊಂಡು ಅವರ ಆತ್ಮೀಯತೆ ಬೆಳೆಸಿಕೊಂಡಿದ್ದಾಳೆ.


    ತದನಂತರದಲ್ಲಿ ಕೆಲವು ಕಡೆ ನನ್ನ ಹಣ ಸ್ಟ್ರಕ್ ಆಗಿದೆ, ಈಗ ಅರ್ಜೆಂಟಾಗಿ ಹಣ ಬೇಕೆಂದು ವೈದ್ಯೆಯಿಂದ ಪಡೆದು ನಂಬಿಕೆ ಗಳಿಸಲು ಈ ಹಣ ಹಿಂದಿರುಗಿಸಿದ್ದಾರೆ.
    ಅದೇ ರೀತಿ 2022 ರಿಂದ ಹಂತಹಂತವಾಗಿ ಖಾತೆ ಮೂಲಕ ಹಣ ಪಡೆದುಕೊಂಡಿದ್ದ ಐಶ್ವರ್ಯಗೌಡ, ಹಣ ವಾಪಸ್ ಕೇಳಿದಾಗ ಸಬೂಬು ಹೇಳುತ್ತಾ ದಿನದೂಡಿದ್ದಾರೆ.


    ಗೋಲ್ಡ್ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಲಾಭವಿದೆಯೆಂದು ವೈದ್ಯೆಯನ್ನು ನಂಬಿಸಿ ಹಂತ ಹಂತವಾಗಿ ನಗದು ರೂಪದಲ್ಲಿ ಮತ್ತು ಖಾತೆ ಮೂಲಕ 2,52,60,000 ರೂ. ಹಣ ಹಾಗೂ 2 ಕೆಜಿ 350 ಗ್ರಾಂ ಚಿನ್ನದ ಒಡವೆಗಳನ್ನು ಐಶ್ವರ್ಯಗೌಡ ಪಡೆದುಕೊಂಡು ವಾಪಸ್ ನೀಡದೇ ನಂಬಿಕೆ ದ್ರೋಹವೆಸಗಿ ವಂಚಿಸಿದ್ದಾರೆ.
    ಐಶ್ವರ್ಯಗೌಡ ವಂಚನೆ ಬಗ್ಗೆ ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದ ವೈದ್ಯೆ ಹಣ ಕೇಳಲು ಜ.1 ರಂದು ಸಂಜೆ 7 ಗಂಟೆ ಸುಮಾರಿನಲ್ಲಿ ಐಶ್ವರ್ಯ ಮನೆ ಬಳಿ ಹೋಗಿದ್ದಾಗ ಕಾರು ಚಾಲಕ ಧನಂಜಯ ಮೊಬೈಲ್ ಕರೆ ಮಾಡಿ ಕೊಟ್ಟಿದ್ದಾರೆ.


    ಮೊಬೈಲ್‍ನಲ್ಲಿ ಐಶ್ವರ್ಯಗೌಡ ಮತ್ತು ಹರೀಶ್ ಇಬ್ಬರೂ ಮಾತನಾಡಿ, ನಿನಗೆ ಕೊಡಬೇಕಾಗಿರುವ ಹಣ ಮತ್ತು ಆಭರಣದ ಬಗ್ಗೆ ಎಲ್ಲಿಯೂ, ಯಾವ ಪೆÇಲೀಸ್‍ಠಾಣೆಯಲ್ಲೂ ದೂರು ನೀಡಬಾರದು. ಒಂದು ವೇಳೆ ನೀವೇನಾದರೂ ಹಾಗೆ ಮಾಡಿದರೆ ಹಣ ಮತ್ತು ಆಭರಣ ಕೊಡುವುದಿಲ್ಲ. ಆಮೇಲೆ ನಾನೇನು ಮಾಡುತ್ತೇನೋ ನನಗೇ ಗೊತ್ತಿಲ್ಲ. ನಾನು ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ತಂಗಿ ಎಂದು ನಿನಗೆ ಗೊತ್ತಿದೆಯಲ್ಲಾ? ಎಂದು ಹೇಳಿ ಹೆದರಿಸಿದ್ದಾರೆ.


    ವೈದ್ಯೆ ಮತ್ತೇನು ಮಾಡಬೇಕೆಂದು ತೋಚದೆ ಇದೀಗ ಆರಾರ್ ನಗರ ಪೊಲೀಸ್ ಠಾಣೆಗೆ ಐಶ್ವರ್ಯಗೌಡ ಹಾಗೂ ಕಾರು ಚಾಲಕರಾದ ಅಶ್ವಥ್, ಧನಂಜಯ ಹಾಗೂ ಇತರರ ವಿರುದ್ಧ ಬೆದರಿಕೆ ದೂರು ನೀಡಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading