ಬೆಂಗಳೂರು: ನಿನ್ನೆ (ಫೆಬ್ರವರಿ 6) ಸಾಮಾಜಿಕ ಜಾಲತಾಣದಲ್ಲಿ ಯಶ್ ಹಾಗೂ ರಾಧಿಕಾ ನಡುವೆ ವೈಮನಸ್ಸು ಮೂಡಿದ್ದು, ಯಶ್ ಬೆಂಗಳೂರಿನಲ್ಲಿದ್ದರೂ ಮನೆಗೆ ಹೋಗದೇ ಶೂಟಿಂಗ್ ಸೆಟ್‌ನ ಕ್ಯಾರಾವ್ಯಾನ್‌ನಲ್ಲೇ ಮಲಗುತ್ತಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು.
ಈ ಸುದ್ದಿ ಹರಿದಾಡಿದ ಬೆನ್ನಲ್ಲೇ ಇಂದು ಯಶ್ ಹಾಗೂ ರಾಧಿಕಾ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡು ಊಹಾಪೋಹಗಳಿಗೆಲ್ಲಾ ತೆರೆ ಎಳೆದಿದ್ದಾರೆ. ಹೌದು, ಇಂದು ನಟಿ ಜಯಮಾಲಾ ಪುತ್ರಿ ಸೌಂದರ್ಯ ಜಯಮಾಲಾ ಹಾಗೂ ರುಷಭ್ ಮದುವೆ ಸಮಾರಂಭಕ್ಕೆ ಯಶ್ ಹಾಗೂ ರಾಧಿಕಾ ಒಟ್ಟಿಗೆ ಆಗಮಿಸಿದ್ದಾರೆ.
ನಗರದ ಗಾಯತ್ರಿ ವಿಹಾರದಲ್ಲಿ ನಡೆದ ಈ ಮದುವೆ ಸಮಾರಂಭಕ್ಕೆ ನಟ ಕಿಚ್ಚ ಸುದೀಪ್ ಸಹ ತಮ್ಮ ಪತ್ನಿ ಪ್ರಿಯಾ ಸುದೀಪ್ ಜತೆ ಆಗಮಿಸಿದ್ದರು. ಸುದೀಪ್ ತಂದೆ ಸಂಜೀವ್ ಸಹ ಬಂದಿದ್ದರು. ನಾದಬ್ರಹ್ಮ ಹಂಸಲೇಖ, ಸಾರಾ ಗೋವಿಂದು ಹಾಗೂ ಎಂಎನ್ ಸುರೇಶ್ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಂಡು ವಧು – ವರರಿಗೆ ಹಾರೈಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


