ಬೆಳ್ಳುಳ್ಳಿ (Garlic) ನೈಸರ್ಗಿಕ ಔಷಧಿಯಾಗಿದ್ದು, ಇದನ್ನು ಆಹಾರದಲ್ಲಿ ಹಾಗೂ ಆರೋಗ್ಯ ಪ್ರಯೋಜನಗಳಿಗಾಗಿ ಶತಮಾನಗಳಿಂದ ಬಳಸಲಾಗುತ್ತಿದೆ.ಭಾರತೀಯ ಆಯುರ್ವೇದ, ಚೀನೀ ಮತ್ತು ಗ್ರೀಕ್ ವೈದ್ಯಶಾಸ್ತ್ರದಲ್ಲಿ ಬೆಳ್ಳುಳ್ಳಿಯು ಪ್ರಮುಖ ಪಾತ್ರವಹಿಸಿದೆ.ಇದು ಬಯೋಆಕ್ಟಿವ್ ಸಂಯುಕ್ತಗಳನ್ನು ಹೊಂದಿದ್ದು, ಅನೇಕ ರೋಗನಿರೋಧಕ ಗುಣಗಳನ್ನು ಒದಗಿಸುತ್ತದೆ.ಬೆಳ್ಳುಳ್ಳಿಯ ಎಸಳು ಸಾಕಷ್ಟು ಪ್ರಯೋಜನಕಾರಿ.ಪ್ರತಿದಿನ ಎರಡು ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಕಾರಿ ಎಂದು ಕಂಡುಬಂದಿದೆ.ಬೆಳ್ಳುಳ್ಳಿಯನ್ನು ಪ್ರಪಂಚದಾದ್ಯಂತ ವಿವಿಧ ಪಾಕಪದ್ಧತಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ದೇಹದಲ್ಲಿ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಬೆಳ್ಳುಳ್ಳಿಯನ್ನು ದೈನಂದಿನ ಆಹಾರದಲ್ಲಿ ಸೇವಿಸುವುದು ತುಂಬಾ ಒಳ್ಳೆಯದು,ಬೆಳ್ಳುಳ್ಳಿಯಲ್ಲಿ ವಿಟಮಿನ್ ಸಿ, ಫೋಲೇಟ್, ನಿಯಾಸಿನ್ ಮತ್ತು ಥಯಾಮಿನ್ ಸಮೃದ್ದವಾಗಿದೆ. ಮನೆಯಲ್ಲಿ ನಾವು ಸಿದ್ಧಪಡಿಸುವ ಹೆಚ್ಚಿನ ಅಡುಗೆಗಳಿಗೆ ಬೆಳ್ಳುಳ್ಳಿಯನ್ನು ಒಂದಲ್ಲೊಂದು ರೂಪದಲ್ಲಿ ಬಳಸುತ್ತೇವೆ. ಬೆಳ್ಳುಳ್ಳಿ ಖಾರ. ಭಕ್ಷ್ಯಗಳಿಗೆ ಸಖತ್ ರುಚಿ ನೀಡುತ್ತದೆ

ಬೆಳ್ಳುಳ್ಳಿಯ ಆರೋಗ್ಯ ಪ್ರಯೋಜನಗಳು
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಬೆಳ್ಳುಳ್ಳಿಯಲ್ಲಿ ಶಕ್ತಿಶಾಲಿ ಆ್ಯಂಟೀಆಕ್ಸಿಡೆಂಟ್‌ಗಳು(Antiaccident) ಇರುತ್ತವೆ, ಇವು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.ಇನ್‌ಫೆಕ್ಷನ್‌ಗಳು ಮತ್ತು ಜ್ವರದಿಂದ ರಕ್ಷಣೆ ನೀಡುತ್ತದೆ.ಹಸಿ ಬೆಳ್ಳುಳ್ಳಿಯನ್ನು ಬಳಸಿ ನೆಗಡಿ ಮತ್ತು ಕೆಮ್ಮಿನಂತಹ ಸೋಂಕನ್ನು ತಡೆಯಲು ಸಾಧ್ಯವಾಗಬಹುದು. ಬೆಳಗ್ಗೆ ಎರಡು ಜಜ್ಜಿದ ಬೆಳ್ಳುಳ್ಳಿ ಎಸಳುಗಳನ್ನು ಸೇವಿಸುವುದರಿಂದ ನಿಮಗೆ ಉತ್ತಮ ರಿಸಲ್ಟ್ವನ್ನು ನೀಡುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಬೆಳ್ಳುಳ್ಳಿಯ ಬಳಕೆಯಿಂದ ಕೊಲೆಸ್ಟ್ರಾಲ್ನ್ನು ಉತ್ಪಾದಿಸುವ ಯಕೃತ್ತಿನ ಸಾಮಾರ್ಥ್ಯವನ್ನು ಕಡಿಮೆ ಮಾಡಬಹುದು. ಆಂಟಿಫಂಗಲ್, ಆಂಟಿವೈರಲ್ ಹಾಗೂ ಆಂಟಿ ಬ್ಯಾಕ್ಟೀರಿಯಾ ಲಕ್ಷಣಗಳನ್ನು ಹೊಂದಿದೆ,ದೇಹದಲ್ಲಿರುವ ವಿಷಯುಕ್ತ ವಸ್ತಗಳನ್ನು ಹೊರಗೆ ಕಳುಹಿಸುತ್ತದೆ ಬೆಳ್ಳುಳ್ಳಿ. ಮಲಗುವ ಮುನ್ನ ಹುರಿದ ಬೆಳ್ಳುಳ್ಳಿ ತಿಂದರೆ, ದೇಹ ಟಾಕ್ಸಿಕ್ ಪ್ರೀ (Toxic free) ಆಗುತ್ತದೆ. ಮೂತ್ರದ (Urine) ಮೂಲಕ ದೇಹದಲ್ಲಿರುವ ವಿಷಯುಕ್ತ ಅಂಶ ಹೊರಗೆ ಹೋಗುತ್ತದೆ.
ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ:
ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ಬೆಳ್ಳುಳ್ಳಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಏಕೆಂದರೆ ಇದು ರಕ್ತದೊತ್ತಡದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಕಂಡುಬಂದಿದೆ.
ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ:
ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ, ಕೋಶಗಳನ್ನು ಶೀಘ್ರವಾಗಿ ನಾಶವಾಗದಂತೆ ರಕ್ಷಿಸುವಲ್ಲಿ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಜ್ಞಾಪಕಶಕ್ತಿಯುಳ್ಳ ಎಲ್ಲಾ ಜೀವಿಗಳು ಹೆಚ್ಚು ಕಾಲ ಬದುಕುತ್ತವೆ, ಆದ್ದರಿಂದ ನಿಮ್ಮ ಜ್ಞಾಪಕಶಕ್ತಿಯನ್ನು ಉಳಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ಹೆಚ್ಚು ಬೆಳ್ಳುಳ್ಳಿಯನ್ನು ಸೇವಿಸಿ. ವಯಸ್ಸಾದವರಲ್ಲಿ ಜ್ಞಾಪಕಶಕ್ತಿಯನ್ನು ಸುಧಾರಿಸಲು ಬೆಳ್ಳುಳ್ಳಿಯನ್ನು ಸೇವಿಸುವುದು ಉತ್ತಮ ಎಂದು ಕೆಲವು ಸಂಶೋಧನೆಗಳು ತಿಳಿದುಬಂದಿದೆ.
ಕ್ಯಾನ್ಸರ್ ನಿವಾರಣೆಗೆ ಸಹಾಯ
ಬೆಳ್ಳುಳ್ಳಿಯಲ್ಲಿರುವ ಆರ್ಗೋ-ಸಲ್ಫೈಡ್‌ಗಳು ಕ್ಯಾನ್ಸರ್ ಪೈಪೋಟಿಗೆ ಸಹಾಯ ಮಾಡಬಹುದು.ಬೆಳ್ಳುಳ್ಳಿಯನ್ನು ಕ್ಯಾನ್ಸರ್ ವಿರೋಧಿ ಆಹಾರವೆಂದು ಪರಿಗಣಿಸಲಾಗುತ್ತದೆ. ಬೆಳ್ಳುಳ್ಳಿಯ ಹೆಚ್ಚಿನ ಸೇವನೆಯು ಅನ್ನನಾಳ, ಹೊಟ್ಟೆ ಮತ್ತು ಕರುಳಿನ ಕ್ಯಾನ್ಸರ್ನಂತಹ ಕ್ಯಾನ್ಸರ್ಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ದೃಢಪಡಿಸಿವೆ.
ಕೆಮ್ಮು ಮತ್ತು ಶೀತವನ್ನು ಕಡಿಮೆ ಮಾಡುತ್ತದೆ
ಹಸಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ಕೆಮ್ಮು ಅಥವಾ ನೆಗಡಿಯಂತಹ ಸೋಂಕನ್ನು ದೂರವಿಡಬಹುದು. ಖಾಲಿ ಹೊಟ್ಟೆಯಲ್ಲಿ ಎರಡು ಪುಡಿ ಮಾಡಿದ ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವ ಮೂಲಕ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿರುತ್ತದೆ
ಬೆಳ್ಳುಳ್ಳಿಯು ಉತ್ಕರ್ಷಣ ನಿರೋಧಕಗಳನ್ನು(Antioxidant) ಹೊಂದಿದೆ.ಬೆಳ್ಳುಳ್ಳಿ(Garlic) ದೇಹದಲ್ಲಿ ಸ್ವತಂತ್ರ ರಾಡಿಕಲ್‌ಗಳ ಉತ್ಪಾದನೆಯನ್ನು ತಡೆಯುತ್ತದೆ ಮತ್ತು ಡಿಎನ್‌ಎ(DNA)ಗೆ ಹಾನಿಯಾಗದಂತೆ ತಡೆಯುತ್ತದೆ. ಬೆಳ್ಳುಳ್ಳಿಯಲ್ಲಿರುವ ಸತುವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಇದು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


