Wednesday, September 2, 2026
spot_img
More
    spot_img
    HomeLatest newsಭಾರತೀಯರನ್ನು ಗಡಿಪಾರು ಮಾಡಿದ ಅಮೆರಿಕಾ ವಿರುದ್ಧ ಸೇಡು ತೀರಿಸಿಕೊಳ್ಳುವ ಐಡಿಯಾ ಕೊಟ್ಟ ಸೂಲಿಬೆಲೆ; ನಿಮ್ಮ ಬುದ್ಧಿವಂತಿಕೆಗೆ...

    ಭಾರತೀಯರನ್ನು ಗಡಿಪಾರು ಮಾಡಿದ ಅಮೆರಿಕಾ ವಿರುದ್ಧ ಸೇಡು ತೀರಿಸಿಕೊಳ್ಳುವ ಐಡಿಯಾ ಕೊಟ್ಟ ಸೂಲಿಬೆಲೆ; ನಿಮ್ಮ ಬುದ್ಧಿವಂತಿಕೆಗೆ ಶರಣೆಂದ ನೆಟ್ಟಿಗರು

    ಕಳೆದೆರಡು ದಿನಗಳಿಂದ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ವಿಷಯವೆಂದರೆ ಅದು ಅಮೆರಿಕಾ ತನ್ನ ದೇಶ ಹೊಕ್ಕಿದ್ದ ಅಕ್ರಮ ವಲಸಿಗರನ್ನು ಗಡಿಪಾರು ಮಾಡಿರುವುದು.

    Advertisement

    ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕೊಟ್ಟ ಮಾತಿನಂತೆ ಈ ದಿಟ್ಟ ಹೆಜ್ಜೆ ಇಟ್ಟಿದ್ದು, ಈಗಾಗಲೇ ಹಲವಾರು ದೇಶಗಳಿಂದ ಅಕ್ರಮವಾಗಿ ಯುಎಸ್‌ ಸೇರಿದ್ದವರನ್ನು ಹೊರಹಾಕಲಾಗಿದ್ದು, ಈ ಪೈಕಿ ಭಾರತದ 104 ಮಂದಿಯೂ ಸೇರಿದ್ದಾರೆ.

    ಇನ್ನು ಹೀಗೆ ಗಡಿಪಾರು ಮಾಡಲಾದವರನ್ನು ಮೊದಲಿಗೆ ಸರಪಳಿಯಿಂದ ಕೈ ಕಾಲು ಕಟ್ಟಿಹಾಕಲಾಗಿದೆ. ಈ ಫೋಟೊ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಇವು ವೈರಲ್‌ ಆಗಿವೆ. ಇದಕ್ಕೆ ಅನೇಕರು ಅಸಮಾಧಾನ ಹೊರಹಾಕಿದ್ದು, ಇನ್ನೂ ಕೆಲವರು ಮೋದಿಯನ್ನು ಟ್ರೋಲ್‌ ಮಾಡಿದ್ದಾರೆ.

    ಇತ್ತ ವೇದಿಕೆ ಭಾಷಣಕಾರ, ಮೋದಿ ಅಪ್ಪಟಭಕ್ತ ಚಕ್ರವರ್ತಿ ಸೂಲಿಬೆಲೆ ಈ ಕುರಿತು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಈ ಕುರಿತು ಬರೆದುಕೊಂಡಿದ್ದು, “ಅಕ್ರಮ ವಲಸಿಗರನ್ನು ಅಮೆರಿಕಾ ಅಮಾನವೀಯವಾಗಿ ಗಡಿಪಾರು ಮಾಡಿದ್ದಕ್ಕೆ ಸೇಡು ತೀರಿಸಿಕೊಳ್ಳಬಹುದಾಗಿದೆ. ಆದರೆ ಹೇಗೆ? ಅದೇ ರೀತಿ ಭಾರತದಲ್ಲಿರುವ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಓಡಿಸಿ” ಎಂದಿದ್ದಾರೆ.

    ಇನ್ನು ಚಕ್ರವರ್ತಿ ಸೂಲಿಬೆಲೆಯ ಈ ಉಪಾಯ ಕಂಡು ನೆಟ್ಟಿಗರು ನಿಮ್ಮ ಬುದ್ಧಿವಂತಿಕೆಗೆ ಶರಣು ಎಂದು ಕಾಮೆಂಟ್‌ ಮಾಡಿದ್ದಾರೆ. ಶ್ರೀಮಂತರ ಕೈನಲ್ಲಿ ಒದೆ ತಿಂದು, ಬಡವರ ಮೇಲೆ ಕೋಪ ತೋರಿಸುವ ಉಪಾಯ ಎಂದು ಸೂಲಿಬೆಲೆ ಕಾಲೆಳೆದಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading