ಸೇಡಂ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ಮದ್ಯಸೇವನೆ ಚಟ ಬಿಡಲು ಸ್ವಯಂಘೋಷಿತ ಮುತ್ಯಾನೋರ್ವ ನಾಟಿ ಔಷಧ ನೀಡಿದ್ದು, ಮೂವರು ಬುಧವಾರ ( ಆಗಸ್ಟ್ 6 ) ಸಾವಿಗೀಡಾಗಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ. ಫಕೀರಪ್ಪ (ಸಾಯಪ್ಪ) ನಾಟಿ ಔಷಧ ನೀಡಿದ ಸ್ವಯಂಘೋಷಿತ ಮುತ್ಯಾ.
ಬುರಗಪಲ್ಲಿ ಗ್ರಾಮದ ಲಕ್ಷ್ಮೀ ಪಲ್ಲಾ (50), ಶಹಾಬಾದ್‌ನ ಡಕ್ಕಾ ತಾಂಡಾದ ಗಣೇಶ ರಾಠೋಡ್ (30) ಮೃತರು. ಲಕ್ಷ್ಮೀ ಪುತ್ರ ನಿಂಗೇಶ ಪಲ್ಲಾ ಸ್ಥಿತಿ ಕೂಡ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಸಾಗಿಸಲಾಗಿದೆ. ಮದಕಲ್‌ನ ನಾಗೇಶ ಕಡಬು (31) ಸಹ ಔಷಧ ಸೇವಿಸಿ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ವಿಷಯ ತಿಳಿಯುತ್ತಲೇ ಮುತ್ಯಾ ಪರಾರಿಯಾಗಿದ್ದಾನೆ.
ಇಮಡಾಪುರದ ಹನುಮಾನ ಮಂದಿರ ಬಳಿ ಕುಡಿತ ಬಿಡಿಸುವುದು ಸೇರಿ ಹಲವು ವ್ಯಾಧಿಗಳಿಗೆ ಕೆಲ ವರ್ಷಗಳಿಂದ ಫಕೀರಪ್ಪ ಔಷಧ ನೀಡುತ್ತಿದ್ದ. ಕಳೆದ ಭಾನುವಾರ (ಆ.3) ಲಕ್ಷ್ಮೀ ಪಲ್ಲಾ, ಗಣೇಶ ರಾಠೋಡ್, ನಾಗೇಶ ಕಡಬು ಸೇರಿ ನೂರಾರು ಜನರಿಗೆ ಔಷಧ ನೀಡಿ ಬುಧವಾರ ಮತ್ತೊಮ್ಮೆ ಬರುವಂತೆ ತಿಳಿಸಿದ್ದ. ಬುಧವಾರ ಬೆಳಗ್ಗೆ ಮಡಿಕೆಯಲ್ಲಿ ಕುದಿಸಿದ ತಪ್ಪಲಿನ ದ್ರವರೂಪದ ಗಣೇಶ ರಾಠೋಡ್ ಪದಾರ್ಥವನ್ನು ಕುಡಿಯಲು ನೀಡಿದ್ದಾನೆ. ಇದನ್ನು ಕುಡಿದ ಮೂವರು ಸೇರಿ ಹಲವರು ಅಸ್ವಸ್ಥಗೊಂಡರು. ಆದರೂ ಮುತ್ಯಾ, ‘ಏನೂ ಆಗಲ್ಲ, ಕೈಬೆರಳು ಬಾಯಿಯಲ್ಲಿ ಹಾಕಿ ವಾಂತಿ ಮಾಡಿ’ ಎಂದು ಹೇಳಿದ್ದಾನೆ. ಹಾಗೆ ಮಾಡಿದ ನಂತರವೂ ಯಾವುದೇ ಬದಲಾವಣೆ ಕಾಣದಿರುವುದನ್ನು ಕಂಡು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮೀ, ಗಣೇಶ ಕೊನೆಯುಸಿರೆಳೆದಿದ್ದಾರೆ. ಪಿಎಸ್‌ಐ ಉಪೇಂದ್ರ ಕುಮಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಟೀ ಪುಡಿಗೆ 24 ರೂ. ಜಾಸ್ತಿ ಪಡೆದಿದ್ದಕ್ಕೆ 25 ಸಾವಿರ ದಂಡ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


