ಶಿವಮೊಗ್ಗ: ಒಂದು ಕೆಜಿ ಚಹಾ ಪುಡಿಯ ಗರಿಷ್ಠ ಮಾರಾಟ ಬೆಲೆ 825 ರೂ. ಆಗಿತ್ತು. ಆದರೆ ಅದನ್ನು 849 ರೂ.ಗೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಆನ್‌ಲೈನ್ ಸೇವಾ ಸಂಸ್ಥೆ ಹಾಗೂ ಸಾಗಣೆ ಸಂಸ್ಥೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 25 ಸಾವಿರ ರೂ. ದಂಡ ವಿಧಿಸಿದೆ.
ಶಿವಮೊಗ್ಗದ ಮೆಹಬೂಬ್ ಮುದಾಸಿರ್ ಖಾನ್ ಆನ್‌ಲೈನ್‌ನಲ್ಲಿ ಒಂದು ಕೆಜಿ ಟೀ ಪುಡಿ ಬುಕ್ ಮಾಡಿದ್ದರು. ಅದಕ್ಕೆ 849 ರೂ. ಹಾಗೂ ಸಾಗಣೆ ವೆಚ್ಚ 41 ರೂ. ಸೇರಿ ಒಟ್ಟು 890 ರೂ. ಪಡೆಯಲಾಗಿತ್ತು. ಇದನ್ನು ಸ್ವೀಕರಿಸಿದ ಬಳಿಕ ಗ್ರಾಹಕರು ಪರಿಶೀಲಿಸಿದಾಗ ಟೀಪುಡಿ ಪ್ಯಾಕ್ ಮೇಲೆ ಎಂಆರ್‌ಪಿ 825 ರೂ. ಎಂದು ನಮೂದಾಗಿತ್ತು. ಹೆಚ್ಚುವರಿ ಹಣ ಪಡೆದ ಹಿನ್ನೆಲೆಯಲ್ಲಿ ಅವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠ ಸೇವಾ ನ್ಯೂನತೆ ಗುರುತಿಸಿ ಕೋರ್ಟ್ ವ್ಯಾಜ್ಯ ಬಾಬು ಹಾಗೂ ಮಾನಸಿಕ ಹಿಂಸೆ ನೀಡಿದ ಕಾರಣಕ್ಕೆ ಟೀ ಪುಡಿ ಪೂರೈಸಿದ ಹಾಗೂ ಸಾಗಣೆ ಮಾಡಿದ ಸಂಸ್ಥೆಗೆ ದಂಡ ವಿಧಿಸಿ ತೀರ್ಪಿತ್ತಿದೆ.
ಡಿಕೆ ಶಿವಕುಮಾರ್ ಸವಾರಿ ಮಾಡಿದ್ದ ಸ್ಕೂಟರ್ ಮೇಲಿವೆ 34 ಕೇಸ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


