ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ, ಅತ್ಯಾಚಾರ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಈ ಕುರಿತು ವರದಿ ಮಾಡಲು ಬಂದಿದ್ದ ಮೂರು ಯುಟ್ಯೂಬ್ ಚಾನೆಲ್‌ಗಳ ನಾಲ್ವರ ಮೇಲೆ ನಿನ್ನೆ ( ಆಗಸ್ಟ್ 6 ) ಕಿಡಿಗೇಡಿಗಳ ಗುಂಪೊಂದು ಗೂಂಡಾ ವರ್ತನೆ ತೋರಿದೆ.
ಮಾಧ್ಯಮದವರ ಮೇಲೆ ಪೈಪ್‌ನಿಂದ ಹಲ್ಲೆ ನಡೆಸಿ, ಅವರನ್ನು ನೆಲಕ್ಕೆ ಹಾಕಿ ತುಳಿದು, ಕ್ಯಾಮೆರಾಗೆ ಹಾನಿಯುಂಟುಮಾಡಿ ರೌಡಿಗಳ ಹಾಗೆ ವರ್ತಿಸಿದ್ದಾರೆ.
ಪೊಲೀಸರು ಲಾಠಿ ಚಾರ್ಜ್ ಮಾಡಿ ಆಗುತ್ತಿದ್ದ ಅನಾಹುತ ತಪ್ಪಿಸಿದ್ದು, ಬೆಳ್ತಂಗಡಿ ಹಾಗೂ ಧರ್ಮಸ್ಥಳ ಠಾಣೆಗಳಲ್ಲಿ ಈ ಕುರಿತು ಸುಮೊಟೊ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿತ್ತು.
ಅದರಂತೆ ಇಂದು ಧರ್ಮಸ್ಥಳ ಪೊಲೀಸ್ ಠಾಣೆಯ ಎಸ್‌ಐ ಸಮರ್ಥ್ ಆರ್ ಗಾಣಿಗೇರಾ ನೇತೃತ್ವದ ತಂಡ ಓರ್ವ ಆರೋಪಿಯನ್ನು ಬಂಧಿಸಿದೆ. ಧರ್ಮಸ್ಥಳದ ಕನ್ಯಾಡಿ ನಿವಾಸಿ ಸೋಮನಾಥ ಕನ್ಯಾಡಿ ( 48 ) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವೃತ್ತಿಯಲ್ಲಿ ಈತ ಜೀಪು ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.
ಬಿಜೆಪಿಯವರ ಮುಖವಾಡ ಕಳಚುವ ಕೆಲಸ ಮಾಡಿ; ಸಂತೋಷ್ ಲಾಡ್ ಕರೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


