ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಗಳಿಗೆ ಪ್ರೋತ್ಸಾಹ, ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹಗಳ ವೆಚ್ಚ ಭರಿಸಲು ಪ್ರತಿ ಜೋಡಿಗೆ 50 ಸಾವಿರ ರೂ. ನೆರವು ನೀಡಲಾಗುವುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಈ ಕಾರ್ಯಕ್ರಮ ಪ್ರಕಟಿಸಿದ್ದರು. ಮುಸ್ಲಿಮರು ಮಾತ್ರವಲ್ಲ ಅಲ್ಪಸಂಖ್ಯಾತರಾಗಿರುವ ಜೈನ, ಬೌದ್ಧ, ಕ್ರಿಶ್ಚಿಯನ್, ಸಿಖ್ ಮತ್ತು ಪಾರ್ಸಿ ಜೋಡಿಗಳಿಗೂ ಈ ಧನಸಹಾಯ ಸಿಗಲಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯ ಈ ಕುರಿತು ಆದೇಶ ಹೊರಡಿಸಿದೆ.
31 ಜಿಲ್ಲೆಗಳಿಗೂ ನಿರ್ದಿಷ್ಟ ಫಲಾನುಭವಿಗಳ ಸಂಖ್ಯೆ ನಿಗದಿಪಡಿಸಿದ್ದು, ನೆರವು ಪಡೆಯಲು ಪಾಲಿಸಬೇಕಾದ ಷರತ್ತುಗಳನ್ನು ವಿವರಿಸಿದೆ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಕನ್ನಡ ಕಲಿಕೆ: ಮದರಸಾಗಳಿಂದ 200 ವಿದ್ಯಾರ್ಥಿಗಳನ್ನು ಕನ್ನಡ ಕಲಿಸುವುದಕ್ಕಾಗಿ ಆಯ್ಕೆ ಮಾಡಿದ್ದು, ಮೂರು ತಿಂಗಳೊಳಗೆ ಅವರಿಗೆ ಕನ್ನಡ ಕಲಿಸುತ್ತೇವೆ. ಕನ್ನಡ ರಾಜ್ಯ ನಮ್ಮದು, ಪ್ರತಿಯೊಬ್ಬರಿಗೂ ಕನ್ನಡ ಬರಬೇಕು. ಎಲ್ಲ ಮಸೀದಿಗಳ ಗುರುಗಳಿಗೂ ಕನ್ನಡ ಕಲಿಸುತ್ತೇವೆ ಎಂದು ಜಮೀರ್ ಹೇಳಿದರು.
ಟೀ ಪುಡಿಗೆ 24 ರೂ. ಜಾಸ್ತಿ ಪಡೆದಿದ್ದಕ್ಕೆ 25 ಸಾವಿರ ದಂಡ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


