ಆರ್‌ಆರ್‌ಆರ್ ಚಿತ್ರದ ಮೂಲಕ ಮತ್ತೊಮ್ಮೆ 1000 ಕೋಟಿ ಗಳಿಕೆಯ ಚಿತ್ರವನ್ನು ನೀಡಿ ಗೆದ್ದಿದ್ದ ನಿರ್ದೇಶಕ ರಾಜಮೌಳಿ ನಿರ್ದೇಶನದ ಮತ್ತೊಂದು ಚಿತ್ರ ಸಿದ್ಧವಾಗುತ್ತಿದೆ. ಇನ್ನು ಈ ಬಾರಿ ತೆಲುಗಿನ ನಂಬರ್ 1 ನಟ ಮಹೇಶ್ ಬಾಬು ಜತೆ ರಾಜಮೌಳಿ ಕೈ ಜೋಡಿಸಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಅದೆಷ್ಟೋ ಸಂದರ್ಶನಗಳಲ್ಲಿ, ಚಿತ್ರಗಳ ವೇದಿಕೆ ಕಾರ್ಯಕ್ರಮದಲ್ಲಿ ಮಹೇಶ್ ಬಾಬು ಜತೆ ಸಿನಿಮಾ ಯಾವಾಗ ಎಂಬ ಪ್ರಶ್ನೆಯನ್ನು ಎದುರಿಸಿದ್ದ ನಿರ್ದೇಶಕ ರಾಜಮೌಳಿ ಇದೀಗ ಚಿತ್ರದ ಚಿತ್ರೀಕರಣವನ್ನು ಹೆಚ್ಚೇನೂ ಅಪ್‌ಡೇಟ್‌ಗಳಿಲ್ಲದೇ ಕ್ಲೈಮ್ಯಾಕ್ಸ್‌ವರೆಗೆ ತಂದಿಟ್ಟಿದ್ದಾರೆ. ಹೀಗೆ ಕ್ಲೈಮ್ಯಾಕ್ಸ್ ಚಿತ್ರೀಕರಿಸುತ್ತಿರುವ ಚಿತ್ರತಂಡ ಹೈದರಾಬಾದ್‌ನಲ್ಲಿ ಇದೇ 15ರಂದು ದೊಡ್ಡ ಕಾರ್ಯಕ್ರಮವನ್ನೂ ಸಹ ಮಾಡುತ್ತಿದೆ.
ಕೆಲವೇ ದಿನಗಳ ಹಿಂದೆ ಎಕ್ಸ್ ವೇದಿಕೆಯಲ್ಲಿ ನಿರ್ದೇಶಕ ರಾಜಮೌಳಿ, ನಟ ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಟ್ವೀಟ್ ಸರಣಿಯಲ್ಲಿ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟಿಸುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದರು. ಇದೀಗ ಪೃಥ್ವಿರಾಜ್ ಸುಕುಮಾರನ್ ಅವರ ಪಾತ್ರದ ಪೋಸ್ಟರ್ ಬಿಡುಗಡೆಯಾಗದೆ.
ಚಿತ್ರದಲ್ಲಿ ಅಂಗವೈಕಲ್ಯದಿಂದ ಬಳಲುತ್ತಿರುವ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರ್ ಆಕ್ಟಪಸ್ ಕೈಕಾಲುಗಳಿರುವ ವೀಲ್‌ಚೇರ್ ಮೇಲೆ ಕುಳಿತಿದ್ದಾರೆ. ಇವರ ಪಾತ್ರಕ್ಕೆ ಕುಂಭ ಎಂದು ಹೆಸರನ್ನು ಇಡಲಾಗಿದೆ. ಇನ್ನು ಚಿತ್ರಕ್ಕೆ ಗ್ಲೋಬ್‌ಟ್ರಾಟರ್ ಎಂಬ ಹೆಸರನ್ನು ಇಡಲಾಗಿದ್ದು, ಗ್ಲೋಬ್‌ಟ್ರಾಟರ್ ಎಂದರೆ ಪ್ರಪಂಚದುದ್ದಕ್ಕೂ ಪಯಣಿಸುವವ ಎಂದರ್ಥ.
ಇನ್ನು ಪೃಥ್ವಿರಾಜ್ ಸುಕುಮಾರನ್ ಅವರ ಈ ಪೋಸ್ಟರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈ ಹಿಂದಿನ ರಾಜಮೌಳಿ ಶೈಲಿಯ ಧಮ್ ಈ ಪೋಸ್ಟರ್‌ನಲ್ಲಿ ಕಾಣಸಿಗುತ್ತಿಲ್ಲ ಎಂಬ ದೂರುಗಳು ದೊಡ್ಡಮಟ್ಟದಲ್ಲಿ ಬರುತ್ತಿವೆ.
ಸ್ವಚ್ಛ ಸರ್ವೇಕ್ಷಣ್ 2025: ಭಾರತದ 10 ಕೊಳಕು ನಗರಗಳ ಪಟ್ಟಿ ಬಿಡುಗಡೆ; ಬೆಂಗಳೂರಿಗೆ ‘ಕಳಂಕದ’ ಎಷ್ಟನೇ ಸ್ಥಾನ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


