ಇತ್ತೀಚೆಗಷ್ಟೆ ಗುಜರಾತ್ ಮೂಲದ ವಿದ್ಯಾರ್ಥಿನಿಯೋರ್ವಳು ಅಮೆರಿಕಾದ ಅಂಗಡಿಯೊಂದರಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದು ಬಳಿಕ ತನ್ನನ್ನು ಬಿಟ್ಟುಬಿಡುವಂತೆ ಪೊಲೀಸರ ಮುಂದೆ ಬಿಕ್ಕಿಬಿಕ್ಕಿ ಅತ್ತಿದ್ದ ವಿಡಿಯೊ ವೈರಲ್ ಆಗಿತ್ತು. ಈ ವಿಡಿಯೊ ವೈರಲ್ ಆದ ಬೆನ್ನಲ್ಲೇ ಈಕೆಯನ್ನು ಆಕೆಯ ದೇಶಕ್ಕೆ ವಾಪಸ್ ಓಡಿಸಿ ಎಂದು ಅಮೆರಿಕನ್ನರು ದೊಡ್ಡ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದರು.
ಅಲ್ಲದೇ ವಿದೇಶಿಗರನ್ನೆಲ್ಲರನ್ನೂ ಅವರವರ ದೇಶಕ್ಕೆ ಓಡಿಸಿ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಭಾರತೀಯರನ್ನು ಮೊದಲು ವಾಪಸ್ ಕಳುಹಿಸಿ ಎಂದು ಹೆಚ್ಚಿನ ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದರು. ಹೀಗೆ ಭಾರೀ ವಿರೋಧ ಪಡೆದುಕೊಂಡಿದ್ದ ಭಾರತೀಯರ ವಿರುದ್ಧ ಇದೀಗ ಅಮೆರಿಕನ್ನರ ಮತ್ತೊಂದು ವಿಡಿಯೊ ವೈರಲ್ ಆಗುತ್ತಿದೆ.
ಇನ್ಸ್ಟಾಗ್ರಾಮ್‌ನಲ್ಲಿ ಬ್ರೀಫ್‌ಚಾಟ್ ಎಂಬ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಳ್ಳಲಾಗಿದ್ದು, ಇಲ್ಲಿ ಕೆಲ ಪುರುಷರು ಮಾಸ್ಕ್ ಧರಿಸಿ ʼಭಾರತ ಬೇಡ, ಟೆಕ್ಸಾಸ್ ನಮ್ಮದು. ಎಚ್1ಬಿ ವಂಚಕರನ್ನು ಓಡಿಸಿʼ ಹಾಗೂ ʼವಿದೇಶಿ ರಾಕ್ಷಸರನ್ನು ತಿರಸ್ಕರಿಸಿ ಜೀಸಸ್ ನಮ್ಮ ದೇವರುʼ ಎಂಬ ಬೋರ್ಡ್‌ಗಳನ್ನು ಹಿಡಿದು ಪ್ರತಿಭಟಿಸಿದ್ದಾರೆ.
ಈ ಘಟನೆ ಟೆಕ್ಸಾಸ್‌ನ ಇರ್ವಿಂಗ್‌ನಲ್ಲಿ ಕಳೆದ ದೀಪಾವಳಿಯಂದು ನಡೆದಿದೆ. ಈ ಪಟ್ಟಣದಲ್ಲಿ ಹಿಂದೂ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ದೊಡ್ಡ ‘ದಲ್ಲಾಸ್ ಫೋರ್ಟ್ ವರ್ಥ್ʼ ಎಂಬ ಸಮುದಾಯದ ಅಡಿಯಲ್ಲಿ ದೇವಾಲಯವನ್ನೂ ಸಹ ನಿರ್ಮಿಸಿಕೊಂಡಿದ್ದಾರೆ. ಅಲ್ಲದೇ ಅಮೆರಿಕಾ ಆರ್ಥಿಕತೆಯಲ್ಲಿ ಇಲ್ಲಿನ ಜನರ ಕೊಡುಗೆ ದೊಡ್ಡ ಮಟ್ಟದಲ್ಲಿಯೇ ಇದೆ.
ಹೀಗೆ ಹಿಂದೂಗಳು ಅಲ್ಲಿ ಹೆಚ್ಚಾಗುತ್ತಿರುವುದನ್ನು ಸಹಿಸದ ಸ್ಥಳೀಯರು ಈ ರೀತಿಯ ಪ್ರತಿಭಟನೆ ನಡೆಸಿದ್ದಾರೆ. ಇನ್ನು ವಿದೇಶಿ ದೇವರುಗಳು ರಾಕ್ಷಸರು, ಜೀಸಸ್ ನಮ್ಮ ದೇವರು ಎಂದು ಬರೆದುಕೊಂಡಿರುವ ಇವರು ರಾಮ ಹಾಗೂ ಗಣೇಶನ ಫೋಟೊಗಳ ಮೇಲೆ ನಿಷೇಧದ ಚಿಹ್ನೆಯನ್ನು ಹಾಕಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


