Saturday, November 7, 2026
spot_img
More
    spot_img
    HomeSportsCricketFact Check: ಶತಕ ಬಾರಿಸಿ 2 ವರ್ಷವಾಗಿದೆ ಎಂದು ಬೇಸತ್ತು ಗಳಗಳನೆ ಕಣ್ಣೀರಿಟ್ಟ ಪಾಕ್‌ನ ಬಾಬರ್‌...

    Fact Check: ಶತಕ ಬಾರಿಸಿ 2 ವರ್ಷವಾಗಿದೆ ಎಂದು ಬೇಸತ್ತು ಗಳಗಳನೆ ಕಣ್ಣೀರಿಟ್ಟ ಪಾಕ್‌ನ ಬಾಬರ್‌ ಅಜಮ್‌

    ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ಟೆಸ್ಟ್‌ ಸರಣಿಯನ್ನು ಡ್ರಾ ಮಾಡಿಕೊಂಡು, ಟಿ20 ಸರಣಿಯಲ್ಲಿ ಸೋತು ಇದೀಗ ಏಕದಿನ ಸರಣಿಯನ್ನಾಡುತ್ತಿದೆ.

    3 ಪಂದ್ಯಗಳ ಏಕದಿನ ಸರಣಿ ಇದಾಗಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ 2 ವಿಕೆಟ್‌ಗಳ ಅಂತರಿಂದ ಗೆದ್ದರೆ, ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 8 ವಿಕೆಟ್‌ಗಳ ಗೆಲುವನ್ನು ಕಂಡಿತು.

    ಇನ್ನು ಈ ಎರಡೂ ಪಂದ್ಯಗಳಲ್ಲಿಯೂ ಪಾಕಿಸ್ತಾನದ ಮಾಜಿ ನಾಯಕ ಬಾಬರ್‌ ಅಜಮ್‌ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಕೇವಲ 7 ರನ್‌ಗೆ ಔಟ್‌ ಆದ ಬಾಬರ್‌ ಅಜಮ್‌ ಎರಡನೇ ಪಂದ್ಯದಲ್ಲಿ 11 ರನ್‌ ಗಳಿಸಿ ಮತ್ತೆ ವಿಫಲರಾದರು.

    ಹೀಗೆ ಸತತ ಎರಡು ಇನ್ನಿಂಗ್ಸ್‌ನಲ್ಲಿ ನೆಲಕಚ್ಚಿರುವ ಬಾಬರ್‌ ಅಜಮ್‌ ಸಾಲು ಸಾಲು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದು ಮಾತ್ರವಲ್ಲದೇ ಶತಕ ಬಾರಿಸದೇ ಎರಡು ವರ್ಷಗಳನ್ನು ಕಳೆದಿದ್ದಾರೆ. 2023ರ ಏಷ್ಯಾಕಪ್‌ನಲ್ಲಿ ನೇಪಾಳದ ವಿರುದ್ಧ ಕೊನೆಯದಾಗಿ ಅಂತಾರಾಷ್ಟ್ರೀಯ ಶತಕ ಬಾರಿಸಿದ್ದ ಬಾಬರ್‌ ಅಜಮ್ ಅದಾದ ಬಳಿಕ ಒಮ್ಮೆಯೂ ಶತಕ ಬಾರಿಸಿಯೇ ಇಲ್ಲ.

    ಹೀಗೆ ಶತಕವಿಲ್ಲದೇ ಫಾರ್ಮ್‌ ಸಹ ಇಲ್ಲದೇ ಕಂಗೆಟ್ಟಿರುವ ಬಾಬರ್‌ ಅಜಮ್‌ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯ ಮುಗಿದ ಬಳಿಕ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಕಣ್ಣೀರು ಹಾಕಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದೆ.

    ಆದರೆ ಅಸಲಿಯತ್ತಿಗೆ ಇದು ನಿಜವಲ್ಲ. ಏಕೆಂದರೆ ಈ ಚಿತ್ರದಲ್ಲಿ ಕಣ್ಣೀರು ಹಾಕುತ್ತಿರುವ ಪಾಕ್‌ ಆಟಗಾರ ಫಾಖರ್‌ ಜಮಾನ್.‌ ಇದೇ ವರ್ಷ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದ ವೇಳೆ ನ್ಯೂಜಿಲೆಂಡ್‌ ವಿರುದ್ಧ ಗಾಯಕ್ಕೊಳಗಾದಾಗ ಫಾಖರ್‌ ಜಮಾನ್‌ ಡ್ರೆಸಿಂಗ್‌ ರೂಮ್‌ಗೆ ಬಂದು ನೋವಿನಲ್ಲಿ ಕಣ್ಣೀರು ಹಾಕಿದ್ದರು. ಈ ಫೋಟೊವನ್ನು ಬಳಸಿ ಬಾಬರ್‌ ಅಜಮ್‌ ಸೆಂಚುರಿ ಬಾರಿಸದ ಕಾರಣ ಕಣ್ಣೀರು ಹಾಕಿದ್ದಾರೆ ಎಂದು ಬಿಂಬಿಸಲಾಗಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search