ಚಂದೌಲಿ(ಉತ್ತರಪ್ರದೇಶ): ಮೂವತ್ತಾದರೂ ಇನ್ನೂ ಮದುವೆಯಾಗಿಲ್ಲ ಎಂದು ಮೂದಲಿಸುತ್ತಿದ್ದ ವ್ಯಕ್ತಿಯನ್ನು ಹೊಡೆದು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ತುಳಸಿ ಆಶ್ರಮದ ನಿವಾಸಿಯಾದ ಉದ್ಯಮಿ ಉಮಾಶಂಕರ್ ಮೌರ್ಯ (62) ಕೊಲೆಯಾಗಿರುವ ವ್ಯಕ್ತಿ. ಆರೋಪಿಯನ್ನು ಬ್ರಿಜೇಶ್ ಯಾದವ್ ಎಂದು ಗುರುತಿಸಲಾಗಿದೆ.
ಸಕಲ್ದಿಹಾ ಪ್ರದೇಶದಲ್ಲಿ ಬೆಳಿಗ್ಗೆ 5 ಗಂಟೆ ಸುಮಾರಿಗೆ ಉಮಾಶಂಕರ್ ಮೌರ್ಯ ಅವರು ತಮ ದಿನನಿತ್ಯದ ಬೆಳಗಿನ ನಡಿಗೆಗೆ ಮನೆಯಿಂದ ಹೊರಟಾಗ ಈ ಘಟನೆ ನಡೆದಿದೆ.
ಅಮ್ದಾರ-ಸಕಲ್ದಿಹಾ ರಸ್ತೆಯಲ್ಲಿರುವ ನಿಲ್ದಾಣದ ಮುಂದೆ ತಲುಪುತ್ತಿದ್ದಂತೆ, ಅದೇ ಗ್ರಾಮದ ನಿವಾಸಿ ಬ್ರಿಜೇಶ್ ಯಾದವ್, ಉಮಾಶಂಕರ್ ಅವರ ಮೇಲೆ ಕೋಲುಗಳಿಂದ ಹಲ್ಲೆ ಮಾಡಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಉಮಾಶಂಕರ್‍ನನ್ನು ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ಯುವಷ್ಟರೊಳಗೆ ಅವರು ಸಾವನ್ನಪ್ಪಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ. ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ಸಮಯದಲ್ಲಿ ಇನ್ನು ಮದುವೆಯಾಗಿಲ್ಲ ಎಂದು ಸದಾ ಛೇಡಿಸುತ್ತಿದ್ದರು. 30 ಆದರೂ ಮದುವೆ ಇಲ್ಲ ಎಂದು ಮೂದಲಿಸುತ್ತಿದ್ದರಿಂದ ಅಸಮಾಧಾನಗೊಂಡಿದ್ದೆ. ಹೀಗಾಗಿ ಅವರನ್ನು ಕೊಂದಿದ್ದಾಗಿ ಆರೋಪಿ ಹೇಳಿದ್ದಾನೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಮೊಗ್ಗ: ಒಂದೇ ಮನೆಯಲ್ಲಿ ತಾಯಿ, ಮಗ ನೇಣಿಗೆ ಶರಣು; ಈ ಹಿಂದೆ ಮಾವ, ಸೊಸೆಯೂ ಇದೇ ಮನೆಯಲ್ಲಿ ಆತ್ಮಹತ್ಯೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


