ಶಿವಮೊಗ್ಗ: ನಗರದ ಜನಪ್ರಿಯ ಸ್ತ್ರೀರೋಗ ತಜ್ಞೆ ಜಯಶ್ರೀ ಹೊಮ್ಮರಡಿ ಹಾಗೂ ಅವರ ಪುತ್ರ ಆಕಾಶ್ ಹೊಮ್ಮರಡಿ ಒಂದೇ ದಿನ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಗರದ ಅಶ್ವತ್ಥ್ ಬಡಾವಣೆಯಲ್ಲಿ ತಾಯಿ, ಮಗ ಹಾಗೂ ಸೊಸೆ ವಾಸವಿದ್ದು, 57 ವರ್ಷದ ಜಯಶ್ರೀ ಮೊದಲಿಗೆ ಕೆಳಮಹಡಿಯ ತಮ್ಮ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾದರೆ, ಮಗ ಆಕಾಶ್ ಮೇಲಿನ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ.
ಇನ್ನು ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ ಹಣಕಾಸು ವಿಷಯಕ್ಕೆ ತಾಯಿ ಹಾಗೂ ಮಗನ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು ಎಂದು ಹೇಳಲಾಗಿದ್ದು, ಇದೇ ಕಾರಣಕ್ಕೆ ಈ ದುರ್ಘಟನೆ ನಡೆದಿರಬಹುದು ಎಂಬ ಶಂಕೆ ಇದೆ.
ಅಲ್ಲದೇ ಇದೇ ಮನೆಯಲ್ಲಿ ಹತ್ತು ವರ್ಷಗಳ ಹಿಂದೆ ಜಯಶ್ರೀ ಹೊಮ್ಮರಡಿ ಪತಿ, ಮಕ್ಕಳ ತಜ್ಞ ನಾಗರಾಜ ಹೊಮ್ಮರಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂದೂವರೆ ವರ್ಷದ ಹಿಂದೆ ಆಕಾಶ್ ಮೊದಲ ಪತ್ನಿ ಸಹ ಆತ್ಮಹತ್ಯೆಗೆ ಶರಣಾಗಿದ್ದರು.
ಮೊದಲ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆಕಾಶ್‌ಗೆ ಈ ವರ್ಷದ ಮೇ ತಿಂಗಳಿನಲ್ಲಿ ಎರಡನೇ ವಿವಾಹ ಮಾಡಲಾಗಿತ್ತು. ಆದರೆ ಮದುವೆಯಾದ ಆರೇ ತಿಂಗಳಿಗೆ ಆಕಾಶ್ ತನ್ನ ಎರಡನೇ ಪತ್ನಿ ಮನೆಯಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆರೆಹೊರೆಯ ಜನರು ಹಲವು ಎಕರೆ ಜಾಗ ಹಾಗೂ ಮನೆಯ ಆಸ್ತಿಗಳನ್ನು ಹೊಂದಿರುವ ಕುಟುಂಬ ಹಣಕಾಸು ಸಮಸ್ಯೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಕಷ್ಟ ಎಂದಿದ್ದಾರೆ. ಅಲ್ಲದೇ ಮೊದಲ ಪತ್ನಿಯ ಸಾವಿನ ಖಿನ್ನತೆ ಕುಟುಂಬಕ್ಕೆ ಕಾಡುತ್ತಿತ್ತು. ಇದೇ ಕಾರಣದಿಂದ ಆತ್ಮಹತ್ಯೆ ನಡೆದಿರಬಹುದಾ ಎಂಬ ಪ್ರಶ್ನೆ ಸಹ ಎದ್ದಿದೆ. ಡೆತ್‌ನೋಟ್‌ನಲ್ಲಿರುವ ಅಂಶ ಹಾಗೂ ಮರಣೋತ್ತರ ಪರೀಕ್ಷೆಯ ನಂತರ ಸಾವಿನ ಬಗ್ಗೆ ನಿಖರ ಕಾರಣ ಏನೆಂಬುದು ತಿಳಿದುಬರಲಿದೆ.
Disclaimer: ಯಾವುದೇ ಸಮಸ್ಯೆಗೂ ಸಾವೊಂದೇ ಪರಿಹಾರವಲ್ಲ. ಆತ್ಮಹತ್ಯೆಯ ಯೋಚನೆ ಬಂದರೆ ನಿಮ್ಮ ನೆಚ್ಚಿನ ವ್ಯಕ್ತಿ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ. ಇಲ್ಲವೇ ಈ ಸಹಾಯವಾಣಿಗೆ ಕರೆಮಾಡಿ: 9152987821
‘ರಾಜೀನಾಮೆ ನೀಡುತ್ತೇನೆ, ನೀವು ನೀಡ್ತೀರಾ?’; ಬಿಜೆಪಿಗರಿಗೆ ಸವಾಲೆಸೆದ ಡಿಕೆಶಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


