Saturday, August 8, 2026
spot_img
More
    spot_img
    HomeBreaking NewsWeight Loss Tips: ದೇಹದ ತೂಕ ಇಳಿಸಲು ಇಲ್ಲಿದೆ ಸುಲಭ ಉಪಾಯ

    Weight Loss Tips: ದೇಹದ ತೂಕ ಇಳಿಸಲು ಇಲ್ಲಿದೆ ಸುಲಭ ಉಪಾಯ

    ನಮ್ಮ ದೇಹದ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವ ಹಾಗೆ ದೇಹದ ತೂಕದ ಬಗ್ಗೆ ಕೂಡ ಅತೀವವಾದ ಕಾಳಜಿಯನ್ನು ವಹಿಸಬೇಕು ಎಂಬುದು ಅಷ್ಟೇ ಸತ್ತ್ಯವಾದ ಮಾತು.ದೇಹದ ತೂಕ (Weight Gain) ಅಗತ್ಯಕ್ಕಿಂತ ಹೆಚ್ಚಾಗಿ ಇದ್ದರೆ, ತೂಕ ಕಡಿಮೆ (Wright Loss) ಮಾಡಲು ಹಲವು ಪ್ರಯತ್ನಗಳು ನಡೆಯುತ್ತಲೇ ಇರುತ್ತದೆ.ತೂಕ ಇಳಿಸಲು ಆಹಾರ ತಾಳ್ಮೆಯಿಂದ ಮತ್ತು ನಿಯಮಿತವಾಗಿ ಆಯ್ಕೆಮಾಡಬೇಕು. ಆರೋಗ್ಯಕರವಾಗಿ ತೂಕ ಇಳಿಸಲು ಸಮತೋಲನ ಆಹಾರ ಮತ್ತು ವ್ಯಾಯಾಮ ಪ್ರಮುಖವಾಗುತ್ತದೆ. ಬೇರೆ ಬೇರೆ ಬಗೆಯ ಕಾರಣಗಳಿಂದ ದೇಹದ ಸ್ವರೂಪ ಬದಲಾಗುತ್ತದೆ. ಇದರಲ್ಲಿ ದೇಹದ ತೂಕ ಹೆಚ್ಚಾಗುವುದು ಕೂಡ ಒಂದು. ಬೊಜ್ಜಿನ ಕಾರಣ ದಿಂದ ತೂಕ ಹೆಚ್ಚಾಗಿ ಅದು ಕ್ರಮೇಣವಾಗಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಇನ್ನಿತರ ಆರೋಗ್ಯ ತೊಂದರೆಗಳಿಗೆ ಕಾರಣವಾ ಗುತ್ತದೆ. ಇಂತಹ ಸಂದರ್ಭದಲ್ಲಿ ಆಹಾರ ಪದ್ಧತಿಯಲ್ಲಿ ಬದಲಾವಣೆಯನ್ನು ತಂದುಕೊಳ್ಳುವುದು ಇದಕ್ಕಿರುವ ಉತ್ತಮ ಮಾರ್ಗ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವುದರಿಂದ ಹೃದ್ರೋಗಗಳಿಂದ ದೂರವಿರಬಹುದು. ಸರಿಯಾದ ಆಹಾರ ಪದ್ಧತಿ, ದಿನಚರಿ ಇದ್ದರೆ ನಿಮ್ಮ ದೇಹದಲ್ಲಿರುವ ಅನಗತ್ಯದ ಕೊಬ್ಬು, ತೂಕ ಕಡಿಮೆ ಆಗುವುದು ಗ್ಯಾರಂಟಿ.ವಾರದ ಎಲ್ಲ ದಿನಗಳಿಗೂ ಪರಿಪೂರ್ಣ ಆಹಾರ ಯಾವುದಾಗಿರಬೇಕು ಎಂಬುದರ ಬಗ್ಗೆ ಸಂಪೂರ್ಣ ವಿವರಣೆ ಇಲ್ಲಿದೆ.

    Advertisement

    ಬಾದಾಮಿ ಬೀಜಗಳು

    ಬಾದಾಮಿ(Almonds) ಬೀಜಗಳಲ್ಲಿ ಎಲ್- ಆರ್ಜಿನೈನ್ ಎಂಬ ಅಮೈನೋ ಆಮ್ಲ ಇರಲಿದ್ದು, ವ್ಯಾಯಾಮ ಮಾಡುವಾಗ ಹೆಚ್ಚಿನ ಕೊಬ್ಬಿನ ಅಂಶ ಮತ್ತು ಕಾರ್ಬೋ ಹೈಡ್ರೇಟ್ ಕರಗುವಂತೆ ಇದು ನೋಡಿ ಕೊಳ್ಳುತ್ತದೆ.ಬಾದಾಮಿ ಬೀಜಗಳಲ್ಲಿ ನಾರಿನ ಅಂಶದ ಪ್ರಮಾಣ ಇರುವುದರಿಂದ ಇವುಗಳನ್ನು ತಿಂದ ಮೇಲೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಬಾದಾಮಿ ಬೀಜಗಳಲ್ಲಿ ಅಪಾರ ಪ್ರಮಾಣದ ಪ್ರೋಟಿನ್ ಮತ್ತು ನಾರಿನ ಅಂಶದ ಪ್ರಮಾಣ(Amount of fiber content) ಅಡಗಿದೆ. ಪ್ರೋಟೀನ್ ಅಂಶ ಅತಿ ಪ್ರಮುಖವಾಗಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸಿ ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುತ್ತದೆ.ಬಾದಾಮಿ ಬೀಜಗಳಲ್ಲಿ ಕಂಡುಬರುವ ಎಲ್ಲಾ ಕ್ಯಾಲೋರಿಗಳನ್ನು ಒಮ್ಮೆಲೆ ಜೀರ್ಣ ಮಾಡಿಕೊಳ್ಳಲು ಕೂಡ ಸಾಧ್ಯವಾಗುವುದಿಲ್ಲ.ರೋಗನಿರೋಧಕ ಶಕ್ತಿಯನ್ನು(Immunity power) ಹೆಚ್ಚಿಸಲು ಇದು ಸಹಕಾರಿ. ಕೇವಲ 30 ಗ್ರಾಂ ಬಾದಾಮಿಯು 7.7mg ಆಲ್ಫಾ-ಟೋಕೋಫೆರಾಲ್ ವಿಟಮಿನ್ ಇ ಅನ್ನು ಹೊಂದಿರುತ್ತದೆ,

    ಮೊಳಕೆ ಕಟ್ಟಿದ ಕಾಳುಗಳು

    ಮೊಳಕೆಯೊಡೆದ ಕಡಲೆಕಾಳಿನಲ್ಲಿ ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ವಿಟಮಿನ್ A ಮತ್ತು C ಸಮೃದ್ಧವಾಗಿದೆ. ಹಾಗಾಗಿ ಅನೇಕ ಮಂದಿ ಬೆಳಗಿನ ತಿಂಡಿಗಾಗಿ ಮೊಳಕೆಯೊಡೆದ ಕಾಳುಗಳನ್ನು ತಿನ್ನುತ್ತಾರೆ.ತೂಕ ನಷ್ಟಕ್ಕೆ ಪ್ರೋಟೀನ್ ಬಹಳ ಮುಖ್ಯ ಮತ್ತು ಇದು ಅನೇಕ ವಿಧಗಳಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಪ್ರತಿದಿನ ಬೆಳಗ್ಗೆ ಮೊಳಕೆ ಬರಿಸಿದ ಕಾಳನ್ನು ತಿನ್ನುವುದರಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು.ಸರಿಯಾದ ಕ್ರಮದಲ್ಲಿ ವ್ಯಾಯಾಮ ಮಾಡುತ್ತಾ ಇವುಗಳ ಸೇವನೆಯನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ತೂಕ ಒಂದು ವಾರದಲ್ಲಿ ನಿಯಂತ್ರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.​

    ಬ್ರೊಕೋಲಿ

    ಬ್ರೊಕೋಲಿ ವಿಟಮಿನ್ C ಮತ್ತು ವಿಟಮಿನ್ K ಜೊತೆಗೆ ಪ್ರೋಟಿನ್ ಮತ್ತು ನಾರಿನ ಪ್ರಮಾಣ ಹೆಚ್ಚಾಗಿರುವ ಬ್ರೊಕೋಲಿ ಆರೋಗ್ಯಕ್ಕೆ ಉತ್ತಮ ಲಾಭಗಳನ್ನು ಕೊಡುವುದರ ಜೊತೆಗೆ ತೂಕ ನಿಯಂತ್ರ ಣದಲ್ಲಿ ಸಹಾಯ ಮಾಡುತ್ತದೆ. ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಬ್ರೊಕೋಲಿ ಯಾವುದೇ ತರಕಾರಿಗಿಂತ ಹೆಚ್ಚು ಪೌಷ್ಟಿಕಾಂಶಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.ಅನೇಕ ಆಹಾರಗಳಂತೆ, ಬ್ರೊಕೊಲಿಯು ಕರಗುವ ಫೈಬರ್‌ನಿಂದ ತುಂಬಿದ್ದು, ಇದು ನಿಮ್ಮ ದೇಹದಿಂದ ಕೊಲೆಸ್ಟ್ರಾಲ್ ಅನ್ನು ಹೊರಹಾಕುತ್ತದೆ

    ಮೊಟ್ಟೆ

    ತೂಕ ನಷ್ಟಕ್ಕೆ ಮೊಟ್ಟೆಯನ್ನು ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗುತ್ತದೆ. ಮೊಟ್ಟೆಯೊಂದಿಗೆ ಕೆಲವು ಪದಾರ್ಥಗಳನ್ನು ಬೆರೆಸಿ ತಿನ್ನುವುದರಿಂದ ಸುಲಭವಾಗಿ ತೂಕ ಇಳಿಸಬಹುದು ಎಂದು ಹೇಳಲಾಗುತ್ತದೆ.ಒಂದು ಮೊಟ್ಟೆಯಲ್ಲಿ 75 ಕ್ಯಾಲೋರಿಗಳು, 7 ಗ್ರಾಂ ಉತ್ತಮ ಗುಣಮಟ್ಟದ ಪ್ರೊಟೀನ್, 5 ಗ್ರಾಂ ಕೊಬ್ಬು ಮತ್ತು 1.6 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, ಕಬ್ಬಿಣ, ಜೀವಸತ್ವಗಳು ಮತ್ತು ಖನಿಜಗಳಿವೆ.ಮೊಟ್ಟೆಯಿಂದ ಆಮ್ಲೆಟ್ ತಯಾರಿಸುವಾಗ ಅಡುಗೆಗೆ ಬಳಸುವ ಕೊಬ್ಬರಿ ಎಣ್ಣೆಯನ್ನು ಬಳಸುವುದರಿಂದ ಇದು ಸ್ಯಾಚುರೇಟೆಡ್ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

    ಹರಿವೆ ಸೊಪ್ಪು

    ಹರಿವೆ ಸೊಪ್ಪು ತೂಕ ಇಳಿಕೆಕೆಯ ಪ್ರಯತ್ನದಲ್ಲಿ ಇರುವವರಿಗೆ ಇದು ಉತ್ತಮ ಸೊಪ್ಪು. ಇದರಲ್ಲಿ ವಿಟಮಿನ್ C (Vitamin C) ಇದ್ದು, ಕಬ್ಬಿಣಾಂಶ(Iron) ಒದಗಿಸುವುದು, ರಕ್ತನಾಳ ರೂಪಿಸುವುದು, ಸ್ನಾಯು ಸರಿಪಡಿಸುತ್ತದೆ. ಇದರಲ್ಲಿ ಪೊಟ್ಯಾಶಿಯಂ (Potassium) ಮತ್ತು ಫೈಬರ್(Fiber) ಹೆಚ್ಚಿದ್ದು, ವಿಟಮಿನ್ A ಹೇರಳವಾಗಿದೆ.ಒಂದು ಕಟ್ಟು ಹರಿವೆ ಸೊಪ್ಪಿನಲ್ಲಿ 30ರಷ್ಟು ಕ್ಯಾಲೋರಿ(Calorie) ಇರುತ್ತದೆ. ಕೊಬ್ಬನ್ನು ಕರಗಿಸಬಲ್ಲ ಈ ಸೊಪ್ಪು ತೂಕ ಕಡಿಮೆ(Weight Loss) ಮಾಡಿಕೊಳ್ಳಲು ಇದು ನೆರವಾಗುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading