Saturday, August 8, 2026
spot_img
More
    spot_img
    HomeLatest newsCIBIL: ಸಿಬಿಲ್ ಸ್ಕೋರ್ ಎಂದರೇನು? ನಿಮ್ಮ ಸಿಬಿಲ್‌ ಚೆಕ್‌ ಮಾಡುವುದು ಹೇಗೆ?

    CIBIL: ಸಿಬಿಲ್ ಸ್ಕೋರ್ ಎಂದರೇನು? ನಿಮ್ಮ ಸಿಬಿಲ್‌ ಚೆಕ್‌ ಮಾಡುವುದು ಹೇಗೆ?

    ಬೆಂಗಳೂರು, :ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (India) ಲಿಮಿಟೆಡ್ ( Cibil) ಭಾರತದಲ್ಲಿ ಕ್ರೆಡಿಟ್ ವರದಿಗಳು ಮತ್ತು ಸ್ಕೋರ್‌ಗಳನ್ನು ಒದಗಿಸುವ ಪ್ರಮುಖ ಏಜೆನ್ಸಿಗಳಲ್ಲಿ ಒಂದಾಗಿದೆ. ವೈಯಕ್ತಿಕ ಸಾಲವಾಗಲಿ, ವಾಹನ, ಮನೆ ಖರೀದಿಗೆ ಸಾಲ ಪಡೆಯಬೇಕಾದರೆ ಬ್ಯಾಂಕಿನವರು ಮೊದಲು ನೋಡುವುದು ನಿಮ್ಮ ಸಿಬಿಲ್ ಸ್ಕೋರ್. ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ನಿಮಗೆ ಸಾಲ ಕೊಡುತ್ತಾರೆ. ಇಲ್ಲದಿದ್ದರೆ ನಿಮಗೆ ಸಾಲ ಕೊಡಲು ಮುಂದೆ ಬರುವುದುಲ್ಲ. ಕ್ರೆಡಿಟ್‌ ಸ್ಕೋರ್ ಎಂಬುದು ಮೂರು-ಅಂಕಿಯ ಸಂಖ್ಯೆಯಾಗಿದ್ದು, ಅದು ಗ್ರಾಹಕರ ಕ್ರೆಡಿಟ್ ಕಾರ್ಡ್ ಹಿಸ್ಟರಿ ಅನ್ನು ಸಾರಾಂಶಗೊಳಿಸುತ್ತದೆ. ಕ್ರೆಡಿಟ್‌ ಸ್ಕೋರ್ ಹೆಚ್ಚಿನ ಅಂಕದಲ್ಲಿದ್ದರೆ, ಅದು ಉತ್ತಮ ಎಂಬುದನ್ನು ಸೂಚಿಸುತ್ತದೆ. ಗ್ರಾಹಕರು ಸಾಲ ಪಡೆದ್ದಿದ್ದು, ಆ ಸಾಲವನ್ನು ನಿಗದಿಯಂತೆ ಸರಿಯಾದ ಸಮಯಕ್ಕೆ ಮರುಪಾವತಿಸಿದ್ದರೆ, ಉತ್ತಮ ಅಂಕ ಇರುತ್ತದೆ. ಹಾಗಾದರೆ ಸಿಬಿಲ್ ಸ್ಕೋರ್ ಎಂದರೇನು, ಸಿಬಿಲ್ ಸ್ಕೋರ್ ಹೆಚ್ಚಿಸಲು ಏನು ಮಾಡಬೇಕು. ಯಾವ ಬ್ಯಾಂಕಿನಲ್ಲಿ ಎಷ್ಟು ಎಲ್ಲೆಲ್ಲಿ ಸಾಲ ಪಡೆದಿದ್ದೀರೆಂಬುದು ಚೆಕ್ ಮಾಡಬೇಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

    Advertisement

    ಸಿಬಿಲ್ ಸ್ಕೋರ್ ನಿಮ್ಮ ಕ್ರೆಡಿಟ್ ಇತಿಹಾಸದ ಆಧಾರದ ಮೇಲೆ ಕ್ರೆಡಿಟ್ ಅರ್ಹತೆಯನ್ನು ಸೂಚಿಸುವ ಸಂಖ್ಯೆಯಾಗಿದೆ. ಈ ಸಿಬಿಲ್ ಸ್ಕೋರ್ ಆಧಾರದ ಮೇಲೆ ನೀವು ಯಾವ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಿ ಯಾವ ವರ್ಷದಲ್ಲಿ ಸಾಲ ಪಡೆಯಲಾಗಿದೆ. ಮರುಪಾವತಿ ಮಾಡಲಾಗಿದೆಯೇ ಎಂಬುದರ ಆಧಾರ ಮೇಲೆ ಕ್ರೆಡಿಟ್ ಸ್ಕೋರ್ ನಿರ್ಧರಿಸಲಾಗುವುದು. ಕ್ರೆಡಿಟ್ ಸ್ಕೋರ್ 0 ರಿಂದ 900 ವರೆಗೆ ಇರುತ್ತದೆ.

    CIBIL ಸ್ಕೋರ್ ಎಂದರೇನು,ಸಾಲ ಪಡೆಯಲು ಕ್ರೇಡಿಟ್ ಸ್ಕೋರ್ ಎಷ್ಟಿರಬೇಕು?

    ಸಿಬಿಲ್ (CIBIL) ಎಂಬುದು ಒಂದು ಸಂಸ್ಥೆಯಾಗಿದೆ. ಕ್ರೇಡಿಟ್ ಇನ್ಫಾರ್ಮೇಷನ್ ಬ್ಯೂರೋ ಇಂಡಿಯಾ ಲಿಮೆಟೆಡ್ ಸಂಸ್ಥೆಯು ಬ್ಯಾಂಕುಗಳಿಂದ ಪ್ರತ್ಯೇಕವಾದ ಕಂಪನಿಯಾಗಿದೆ.ಎCIBIL ಸ್ಕೋರ್ ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಪ್ರತಿನಿಧಿಸುವ ಮೂರು-ಅಂಕಿಯ ಸಂಖ್ಯೆ. ಇದು 300 ರಿಂದ 900 ರ ವರೆಗೆ ಇರುತ್ತದೆ ಮತ್ತು ನಿಮ್ಮ ಪಾವತಿ ಇತಿಹಾಸ ಮತ್ತು CIBIL ನಿರ್ವಹಿಸುವ ಇತರ ಕ್ರೆಡಿಟ್ ವಿವರಗಳನ್ನು ಅಳೆಯುವ ಮೂಲಕ ಪಡೆಯಲಾಗಿದೆ. ಸಾಮಾನ್ಯವಾಗಿ, 700 ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಮತ್ತು, ಅದನ್ನೇ ನೀವು ಗುರಿಪಡಿಸಬೇಕು.

    ಸಿಬಿಲ್ ಸ್ಕೋರ್ ನೋಡುವುದು ಹೇಗೆ? (How to check CIBIL Score)

    *ನಿಮ್ಮ ಹೆಸರು, ಲಿಂಗ, ಹುಟ್ಟಿದ ದಿನಾಂಕ, ತಿಂಗಳು, ವರ್ಷ ಆಯ್ಕೆ ಮಾಡಿಕೊಳ್ಳಬೇಕು.

    *ಅಡ್ರೇಸ್ ಕಾಲಂನಲ್ಲಿ ರೆಸಿಡೆಂಟ್ ಅಥವಾ ಪರ್ಮನೆಂಟ್ ಅಡ್ರೆಸ್ ಭರ್ತಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ವಿಳಾಸ ತುಂಬಬೇಕು.ರಾಜ್ಯ, ನಗರ ಆಯ್ಕೆ ಮಾಡಿಕೊಂಡು ಪಿನ್ ಕೋಡ್ ನಮೂದಿಸಬೇಕು.

    *ಐಡೆಂಟಿ ಡಿಟೇಲ್ ನಲ್ಲಿ ಪ್ಯಾನ್ ಕಾರ್ಡ್ ಸೆಲೆಕ್ಟ್ ಮಾಡಿಕೊಂಡು ಪ್ಯಾನ್ ಕಾರ್ಡ್ ನಮೂದಿಸಬೇಕು.

    *ಕಾಂಟ್ಯಾಕ್ಟ್ ಡಿಟೇಲ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಮೇಲ್ ಐಡಿ ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಬೇಕು. ಆಗ ಸಿಬಿಲ್ ಸ್ಕೋರ್ ಪಿಡಿಎಫ್ ಫೈಲ್ ಓಪನ್ ಮಾಡಲು ಪಾಸ್ವರ್ಡ್ ನಿಮ್ಮ ಮೊಬೈಲಿಗೆ ಬರುತ್ತದೆ. ಅದನ್ನು ನಮೂದಿಸಿದರೆ ಸಾಕು, ಸಿಬಿಲ್ ಸ್ಕೋರ್ ಪೇಜ್ ಓಪನ್ ಆಗುತ್ತದೆ. ನೀವು ಎಲ್ಲೆಲ್ಲಿ ಸಾಲ ಪಡೆದಿದ್ದೀರೋ ಎಲ್ಲಾ ಮಾಹಿತಿಯು ಕಾಣುತ್ತದೆ.

    ಸಿಬಿಲ್ ಸ್ಕೋರ್ ಚೆಕ್ ಮಾಡುವುದು ಹೇಗೆ?
    ಜನರು ತಮ್ಮ ಸಿಬಿಲ್ ಸ್ಕೋರ್ ನ್ನು ಮೊಬೈಲ್ ನಲ್ಲೇ ಉಚಿತವಾಗಿ ಚೆಕ್ ಮಾಡಬಹುದು.https://homeloans.sbi/getcibil


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading