ರೋಸ್ ಡೇನಲ್ಲಿ ಒಂದು ಸುಂದರವಾದ ಗುಲಾಬಿಯನ್ನು ನೀಡಿ ಸಂಗಾತಿಯ ಹೃದಯವನ್ನು ಗೆದ್ದ ಬಳಿಕ,ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಲೇಬೇಕಲ್ಲವೇ? ಅದಕ್ಕಾಗಿ ಇಂದು ಪ್ರಪೋಸಲ್ ಡೇ ಆಚರಿಸಲಾಗುತ್ತಿದೆ.ಪ್ರಪೋಸ್ ಡೇ ಕೇವಲ “I Love U” ಎಂದು ಹೇಳುವುದಲ್ಲ ಇದು ನಿಮ್ಮ ಭಾವನೆಗಳನ್ನು ನಿಜವಾಗಿಯೂ ಪ್ರತಿಧ್ವನಿಸುವ ರೀತಿಯಲ್ಲಿ ವ್ಯಕ್ತಪಡಿಸುವುದು.ಪ್ರಪೋಸ್ ಡೇ ಪ್ರತಿ ವರ್ಷ ಫೆಬ್ರವರಿ 8ರಂದು ಆಚರಿಸಲಾಗುತ್ತದೆ. ಪ್ರೇಮಿಗಳ ವಾರದ ಎರಡನೇ ದಿನವಾದ ಈ ದಿನ ಪ್ರೇಮಿಗಳ ತಮ್ಮ ಪ್ರೀತಿಯ ವ್ಯಕ್ತಿಗೆ ಪ್ರೀತಿಯನ್ನು ಸರಳವಾಗಿ ಅಥವಾ ಅದ್ಧೂರಿಯಾಗಿ ಪ್ರಕಟಿಸಲು ಒಂದು ವಿಶೇಷ ಅವಕಾಶವನ್ನು ಒದಗಿಸುತ್ತದೆ.ಆಚರಣೆಯು ವಿನೋದದಿಂದ ತುಂಬಿದ ಮತ್ತು ಅತ್ಯಾಕರ್ಷಕ ವ್ಯಾಲೆಂಟೈನ್ ವೀಕ್‌ನ ಭಾಗವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಎರಡನೇ ದಿನದಂದು ಆಚರಿಸಲಾಗುತ್ತದೆ.

ಪ್ರತಿ ವರ್ಷ ಫೆಬ್ರವರಿ 8 ಪ್ರಪೋಸ್ ಡೇ ಆಚರಿಸಲಾಗುತ್ತದೆ. ಪ್ರಪೋಸ್ ಡೇ ಪ್ರೀತಿಯನ್ನು ವ್ಯಕ್ತಪಡಿಸಲು ಮತ್ತು ಸಂಬಂಧವನ್ನು ಹೊಸ ಹಂತಕ್ಕೆ ಕೊಂಡೊಯ್ಯಲು ಸೂಕ್ತ ದಿನ. ಈ ದಿನ ನೀವು ನಿಮ್ಮ ಪ್ರೀತಿಪಾತ್ರರಿಗೆ ತಮ್ಮ ಭಾವನೆಗಳನ್ನು ತಿಳಿಸುವ ಅತ್ಯುತ್ತಮ ಅವಕಾಶ. ಪ್ರೀತಿಯ ವ್ಯಕ್ತಿಗೆ ಪ್ರಪೋಸ್ ಮಾಡುವಾಗ ಒಂದು ಸ್ಮರಣೀಯ ಉಡುಗೊರೆಯೊಂದಿಗೆ ಪ್ರೀತಿಯ ಪ್ರತೀಕವನ್ನು ನೀಡುವುದು ಅವರಿಗೆ ಖುಷಿ ನೀಡಬಹುದು.ಈ ದಿನ ಪ್ರೀತಿ ಪಾತ್ರರಿಗೆ ಪ್ರೊಪೋಸ್ ಮಾಡುವ ಮೂಲಕ ಅವರು ಎಷ್ಟರ ಮಟ್ಟಿಗೆ ನಿಮ್ಮನ್ನೂ ಪ್ರೀತಿಸುತ್ತಾರೆ ಎಂಬುದು ನಿರ್ಣಾಯಕವಾಗುತ್ತದೆ. ಈ ಪ್ರಪೋಸ್ ಡೇ ಅನ್ನು ಕೆಲವರು ವಿಶೇಷ ಉಡುಗೊರೆ ಅಥವಾ ಪತ್ರ ಅಥವಾ ಉತ್ತಮ ಸಮಯ ಕಳೆಯುವ ಮೂಲಕ ಪ್ರೀತಿ ಪ್ರಸ್ತಾಪ ಮಾಡಬಹುದು
ಪ್ರಪೋಸ್ ಡೇ ಇತಿಹಾಸ
ಪ್ರಪೋಸ್ ಡೇನ ಐತಿಹಾಸಿಕ ಹಿನ್ನೆಲೆಯು ಅಷ್ಟಾಗಿ ಸ್ಪಷ್ಟವಾಗಿಲ್ಲ, ಆದರೆ 1477ರಲ್ಲಿ ಆಸ್ಟ್ರಿಯಾದ ಆರ್ಚ್‌ಡ್ಯೂಕ್ ಮ್ಯಾಕ್ಸಿಮಿಲಿಯನ್ ಅವರು ಬರ್ಗಂಡಿಯ ಮೇರಿಗೆ ವಜ್ರದ ಉಂಗುರ ನೀಡಿ ಪ್ರಪೋಸ್ ಮಾಡಿದ ಪ್ರಸಂಗವು ಪ್ರೇಮ ಪ್ರಸ್ತಾಪಗಳಿಗೆ ವಜ್ರದ ಉಂಗುರವನ್ನು ಸಂಬಂಧಿಸಿದ್ದಾಗಿ ದಾಖಲಿಸಲಾಗಿದೆ, ಆಸ್ಟ್ರಿಯಾದ ಆರ್ಚ್ ಡ್ಯೂಕ್ ಮ್ಯಾಕ್ಸಿಮಿಲಿಯನ್ 1477ರಲ್ಲಿ ಬರ್ಗಂಡಿಯ ಮೇರಿಗೆ ವಜ್ರದ ಉಂಗುರ ನೀಡಿ ಮದುವೆಗೆ ಪ್ರಪೋಸ್ ಮಾಡಿದರು. ಇದು ದಾಖಲಾದ ಪ್ರಪೋಸ್ ಮತ್ತು ವಜ್ರದ ಉಂಗುರ ಬಳಸಿದ ಮೊದಲ ನಿಶ್ಚಿತಾರ್ಥ ಆಗಿತ್ತು.ಮಧ್ಯಯುಗದಲ್ಲಿ, ನಿಶ್ಚಿತಾರ್ಥದ ಉಂಗುರಗಳನ್ನು ಸಾಮಾನ್ಯವಾಗಿ ಶ್ರೀಮಂತರು ಮಾತ್ರ ನೀಡುತ್ತಿದ್ದರು, ಏಕೆಂದರೆ ವಜ್ರಗಳು ಅಪರೂಪವಾಗಿದ್ದವು ಮತ್ತು ದುಬಾರಿಯಾಗಿದ್ದವು.ಈ ಘಟನೆ ಪ್ರಪೋಸ್ ಡೇಗೆ ನೇರ ಸಂಬಂಧಪಡದೇ ಇದ್ದರೂ ಇಂತಹ ಸಂಪ್ರದಾಯಗಳಿಂದಾಗಿಯೇ ಮುಂದೆ ಪ್ರಪೋಸಲ್ ಡೇ ಎಂಬ ದಿನದ ಹುಟ್ಟಿಗೆ ಕಾರಣವಾಯಿತು ಎನ್ನಲಾಗುತ್ತದೆ. ವಾಲಂಟೈನ್ ವೀಕ್ ನ ಒಂದು ಭಾಗ ಪ್ರಪೋಸಲ್ ಡೇ. ಇತ್ತೀಚೆಗಿನ ಆಧುನಿಕ ದಿನಗಳಲ್ಲಿ ಈ ದಿನಕ್ಕೆ ಹೆಚ್ಚು ಪ್ರಾಶಸ್ತ್ಯ ಸಿಕ್ಕಿದೆ.

ಪ್ರಪೋಸ್ ಮಾಡಲು ಐಡಿಯಾಗಳು
ರೋಮ್ಯಾಂಟಿಕ್ ಡಿನ್ನರ್:
ಕ್ಯಾಂಡಲ್‌ಲೈಟ್ ಡಿನ್ನರ್ ಯಾವಾಗಲೂ ಪ್ರಪೋಸ್ ಮಾಡಲು ಉತ್ತಮ ಉಪಾಯವಾಗಿದೆ. ಸ್ನೇಹಶೀಲ ಮತ್ತು ಸಕಾರಾತ್ಮಕ ಸೆಟ್ಟಿಂಗ್ ಭಯವಿಲ್ಲದೆ ಮಾತನಾಡಲು ಉತ್ತಮ ವಾತಾವರಣವನ್ನು ಸೃಷ್ಟಿಸುತ್ದೆ. ನಕ್ಷತ್ರಗಳಿಂದ ತುಂಬಿದ ಆಕಾಶದ ಕೆಳಗೆ ಸ್ಮರಣೀಯ ವಿವಾಹ ಪ್ರಪೋಸಲ್ ಸಹ ಯಾರಿಗಾದರೂ ಇಷ್ಟಬಾಗಬಹುದು.
ನೀವು ಮೊದಲು ಭೇಟಿಯಾದ ಸ್ಥಳ
ಹುಡುಗಿಗೆ ಪ್ರಪೋಸ್ ಮಾಡಲು ಇನ್ನೊಂದು ಉತ್ತಮ ಮಾರ್ಗವೆಂದರೆ ನೀವು ಮೊದಲು ಭೇಟಿಯಾದ ಸ್ಥಳದಲ್ಲೇ ಪ್ರಪೋಸ್ ಮಾಡುವುದು. ಅದು ನಿಮ್ಮ ಕಾಲೇಜಿನಲ್ಲಿರಬಹುದು ಅಥವಾ ನೀವು ಮೊದಲ ಬಾರಿಗೆ ಡೇಟ್ ಮಾಡಿದ್ದ ರೆಸ್ಟೋರೆಂಟ್‌ನಲ್ಲಿಯೂ ಆಗಿರಬಹುದು. ಈ ಐಡಿಯಾ ನಿಜವಾಗಿಯೂ ನೀವು ಮತ್ತು ನಿಮ್ಮ ಪ್ರೀತಿಪಾತ್ರರು ನಿಮ್ಮ ಮೊದಲ ಭೇಟಿಯಲ್ಲಿ ಹಂಚಿಕೊಂಡ ವಿಶೇಷ ನೆನಪುಗಳನ್ನು ಮರಳಿ ತರುತ್ತದೆ

ಉಡುಗೊರೆಯೊಂದಿಗೆ ಪ್ರಪೋಸ್;
ವಜ್ರದ ಉಂಗುರ ಅಥವಾ ಆಭರಣ ನೀಡಿ, ಭಾವನಾತ್ಮಕವಾಗಿ ಪ್ರೀತಿಯನ್ನು ವ್ಯಕ್ತಪಡಿಸಿ,ಬಲೂನ್ಸ್ ಒಳಗೆ “Will You Marry Me?” ಮುತ್ತಿದ ಚಿಟ್ಟೆ (scroll) ಇರಿಸಿ,ಮನೆಯಲ್ಲಿಯೇ ಡೆಕೋರೇಷನ್ ಮಾಡಿ, ಸೀಕ್ರೆಟ್ ವಿಡಿಯೋ ಅಥವಾ ಸ್ಲೈಡ್‌ಶೋ ಮೂಲಕ ಪ್ರಪೋಸ್ ಮಾಡಿ.ಒಳ್ಳೆಯ ಉಡುಗೊರೆ ನಿಮ್ಮ ಆಳವಾದ ಪ್ರೀತಿಯ ಭಾವನೆಗಳನ್ನು ಕುರುಡು ರೀತಿಯಲ್ಲಿ ಬಹಿರಂಗಪಡಿಸುತ್ತದೆ.
ಟೆಡ್ಡಿ ಬೇರ್:
ಹೆಣ್ಣುಮಕ್ಕಳಿಗೆ ಟೆಡ್ಡಿ ಬೇರ್ ಎಂದರೆ ಬಹಳ ಇಷ್ಟ. ಮೃದುವಾದ ಟಾಯ್ಸ್ ಯಾವಾಗಲೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರೇಮಿಗಳ ಪ್ರಧಾನ ಆಯ್ಕೆಯಾಗಿದೆ. ನಿಮ್ಮ ಕನಸಿನ ಪುರುಷ ಅಥವಾ ಮಹಿಳೆಗೆ ಟೆಡ್ಡಿ ಬೇರ್ ನೀಡಿ ಪ್ರಪೋಸ್ ಮಾಡಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


