Monday, July 6, 2026
spot_img
More
    spot_img
    HomeDelhi Assembly Election 2025Delhi Election Results: 27 ವರ್ಷಗಳ ಬಳಿಕ ಬಿಜೆಪಿ ತೆಕ್ಕೆಗೆ ದೆಹಲಿ; ಸಿಎಂ ರೇಸ್‌ನಲ್ಲಿ 6...

    Delhi Election Results: 27 ವರ್ಷಗಳ ಬಳಿಕ ಬಿಜೆಪಿ ತೆಕ್ಕೆಗೆ ದೆಹಲಿ; ಸಿಎಂ ರೇಸ್‌ನಲ್ಲಿ 6 ಮಂದಿ

    ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು (ಫೆಬ್ರವರಿ 8) ಹೊರಬಿದ್ದಿದ್ದು, ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ.

    Advertisement

    ಇನ್ನು ಕಳೆದ ಹತ್ತು ವರ್ಷಗಳಿಂದ ದೆಹಲಿಯನ್ನು ಆಳಿದ್ದ ಎಎಪಿಯನ್ನು ದೆಹಲಿ ಜನತೆ ಈ ಬಾರಿ ತಿರಸ್ಕರಿಸಿದ್ದು, ಎಎಪಿಯ ಪ್ರಮುಖ ನಾಯಕರೇ ಸೋಲನ್ನು ಅನುಭವಿಸಿದ್ದಾರೆ.

    ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಎಪಿಯ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಸಹ ಸೋಲನ್ನು ಅನುಭವಿಸಿದ್ದು, 3182 ಮತಗಳ ಅಂತರದಿಂದ ಬಿಜೆಪಿಯ ಪರ್ವೇಶ್‌ ಸಿಂಗ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ.

    ಹೀಗೆ ದೆಹಲಿಯಲ್ಲಿ ಬರೋಬ್ಬರಿ 27 ವರ್ಷಗಳ ಬಳಿಕ ಗೆಲುವು ಸಾಧಿಸಿರುವ ಬಿಜೆಪಿಯಿಂದ ಯಾರು ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಚರ್ಚೆ ಏರ್ಪಟ್ಟಿದೆ.

    ಸದ್ಯ ನವದೆಹಲಿ ಕ್ಷೇತ್ರದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಸೋಲಿಸಿರುವ ಪರ್ವೇಶ್‌ ಸಿಂಗ್‌ ಅವರ ಹೆಸರು ಸಿಎಂ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸುಷ್ಮಾ ಸ್ವರಾಜ್‌ ಪುತ್ರಿ ಬನ್ಸುರಿ ಸ್ವರಾಜ್‌, ವಿಜಯೇಂದ್ರ ಗುಪ್ತಾ, ಕಪಿಲ್ ಮಿಶ್ರಾ, ಕೈಲಾಸ್‌ ಗೆಹ್ಲೋಟ್‌ ಹಾಗೂ ಅರವಿಂದರ್‌ ಲವ್ಲಿ ಹೆಸರುಗಳು ಸಹ ಸಿಎಂ ರೇಸ್‌ನಲ್ಲಿ ಕೇಳಿಬರುತ್ತಿವೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    ಬೆಂಗಳೂರು: ಡೇ ಕೇರ್‌ನಲ್ಲಿ ಮಕ್ಕಳಿಗೆ ಹಿಂಸೆ, ಐವರು ಮಹಿಳೆಯರ ವಿರುದ್ಧ ಎಫ್‌ಐಆರ್

    ಕ್ಯಾಪ್‌ಜೆಮಿನಿ ಕ್ಯಾಂಪಸ್‌ನ ಡೇ ಕೇರ್‌ನಲ್ಲಿ ಪುಟ್ಟ ಮಕ್ಕಳಿಗೆ ಹಿಂಸೆ ನೀಡಿದ ಆರೋಪದ ವಿಡಿಯೊ ವೈರಲ್; ಐವರು ಮಹಿಳಾ ಆರೈಕೆದಾರರ ವಿರುದ್ಧ ಪ್ರಕರಣ ದಾಖಲು.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading