ನವದೆಹಲಿ: ನವದೆಹಲಿ: ಇಂದು (ಫೆಬ್ರವರಿ 8) ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಆಪ್ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ ಹೀನಾಯ ಸೋಲು ಉಂಟಾಗಿದೆ.
ನವದೆಹಲಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಅರವಿಂದ್ ಕೇಜ್ರಿವಾಲ್ ಬಿಜೆಪಿಯ ಪರ್ವೇಶ್ ಸಾಹಿಬ್ ಸಿಂಗ್ ವಿರುದ್ಧ 3182 ಮತಗಳ ಅಂತರಿಂದ ಸೋಲನ್ನು ಅನುಭವಿಸಿದ್ದಾರೆ.
ಈ ಮೂಲಕ ದಶಕದ ಕಾಲ ದೆಹಲಿ ರಾಜಕೀಯವನ್ನು ಆಳಿದ್ದ ಕೇಜ್ರಿವಾಲ್ ಈ ಬಾರಿ ವಿಧಾನಸಭೆಗೂ ಪ್ರವೇಶಿಸಲಾಗದೇ ಮುಖಭಂಗ ಅನುಭವಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


