ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆ ಇದೇ ತಿಂಗಳ 5ರಂದು ನಡೆದಿತ್ತು. ಒಟ್ಟು 70 ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಇಂದು (ಫೆಬ್ರವರಿ 8) ಪ್ರಕಟವಾಗಲಿದ್ದು, ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದೆ.
ಒಟ್ಟು 699 ಅಭ್ಯರ್ಥಿಗಳ ʼಮತಬರಹʼ ಇಂದು ಬಹಿರಂಗವಾಗಲಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಈ ಬಾರಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಹಾಗೂ ಬಿಜೆಪಿ ನಡುವೆ ನೇರಾನೇರ ಜಿದ್ದಾಜಿದ್ದಿಯಿದ್ದು, ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬ ಕುತೂಹಲ ಮೂಡಿದೆ.
ಅತ್ತ ಚುನಾವಣೋತ್ತರ ಸಮೀಕ್ಷೆಗಳ ಪೈಕಿ ಹತ್ತು ಸಮೀಕ್ಷೆಗಳು ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದು, ಒಟ್ಟಾರೆ ಎಲ್ಲಾ ಸಮೀಕ್ಷೆಗಳು ಸೇರಿದಂತೆ ಎಎಪಿ 26, ಬಿಜೆಪಿ 43 ಹಾಗೂ ಕಾಂಗ್ರೆಸ್ 1 ಸ್ಥಾನದಲ್ಲಿ ಗೆಲ್ಲಬಹುದು ಎನ್ನಲಾಗಿದೆ. ಈ ಸಮೀಕ್ಷೆ ನಿಜವಾಗುತ್ತಾ ಬಿಜೆಪಿ ಎರಡೂವರೆ ದಶಕದ ಬಳಿಕ ಮತ್ತೆ ದೆಹಲಿಯಲ್ಲಿ ತನ್ನ ಪತಾಕೆಯನ್ನು ಹಾರಿಸುತ್ತಾ ಎಂಬುದನ್ನು ನೋಡಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


