ಬೆಂಗಳೂರು: ನಮ್ಮ ಮೆಟ್ರೋ ರೈಲು ಟಿಕೆಟ್ ದರವನ್ನು ಹೆಚ್ಚಿಸಲಾಗುವುದು ಎಂಬ ಸುದ್ದಿ ಈ ಹಿಂದಿನಿಂದಲೂ ಹರಿದಾಡುತ್ತಿದ್ದು, ಸದ್ಯ ಬಿಎಂಆರ್ಸಿಎಲ್ ಇಂದು (ಫೆಬ್ರವರಿ 8) ಮಾಧ್ಯಮ ಪ್ರಕಟಣೆ ಮೂಲಕ ಪರಿಷ್ಕೃತ ದರವನ್ನು ತಿಳಿಸಿದೆ.
ಕಳೆದ ವರ್ಷದ ಡಿಸೆಂಬರ್ 16ರಂದು ಸಮಿತಿ ಸಲ್ಲಿಸಿದ್ದ ಪರಿಷ್ಕೃತ ದರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಾಳೆಯಿಂದಲೇ (ಫೆಬ್ರವರಿ 9) ಈ ದರ ಜಾರಿಯಾಗಲಿದೆ ಎಂದು ತಿಳಿಸಿದೆ. ಇನ್ನು ಎಷ್ಟು ಕಿಲೊಮೀಟರ್ಗೆ ಎಷ್ಟು ದರ ಎಂಬ ಮಾಹಿತಿ ಮುಂದಿದೆ.
0-2 ಕಿಲೋಮೀಟರ್ಗೆ 10 ರೂ
2-4 ಕಿಲೋಮೀಟರ್ಗೆ 20 ರೂ
4-6 ಕಿಲೋಮೀಟರ್ಗೆ 30 ರೂ
6-8 ಕಿಲೋಮೀಟರ್ಗೆ 40 ರೂ
8-10 ಕಿಲೋಮೀಟರ್ಗೆ 50 ರೂ
10-15 ಕಿಲೋಮೀಟರ್ಗೆ 60 ರೂ
15-20 ಕಿಲೋಮೀಟರ್ಗೆ 70 ರೂ
20-25 ಕಿಲೋಮೀಟರ್ಗೆ 80 ರೂ
25-30 ಕಿಲೋಮೀಟರ್ಗೆ 90 ರೂ
30ಕ್ಕಿಂತ ಹೆಚ್ಚು ಕಿಲೋಮೀಟರ್ಗೆ 90 ರೂ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


