Wednesday, November 11, 2026
spot_img
More
    spot_img
    HomeLatest newsಕರ್ನಲ್‌ ಸೋಫಿಯಾ ಖುರೇಷಿ ಕರ್ನಾಟಕದ ಬೆಳಗಾವಿಯ ಸೊಸೆ; ಮಾವ ಗೌಸ್‌ ತಮ್ಮ ಸೊಸೆ ಬಗ್ಗೆ ಹೇಳಿದ್ದೇನು?

    ಕರ್ನಲ್‌ ಸೋಫಿಯಾ ಖುರೇಷಿ ಕರ್ನಾಟಕದ ಬೆಳಗಾವಿಯ ಸೊಸೆ; ಮಾವ ಗೌಸ್‌ ತಮ್ಮ ಸೊಸೆ ಬಗ್ಗೆ ಹೇಳಿದ್ದೇನು?

    ಬೆಂಗಳೂರು: ಆಪರೇಷನ್ ಸಿಂದೂರ್ ಬಗ್ಗೆ ಅಂತರಾಷ್ಟ್ರೀಯ ಮಟ್ಟಕ್ಕೆ ವಿವರಣೆ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಕರ್ನಾಟಕದ ಸೊಸೆಯಾಗಿದ್ದು, ಆಕೆಯ ಬಗ್ಗೆ ಮಾವನ ಕುಟುಂಬ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

    ಬೆಳಗಾವಿ ಜಿಲ್ಲೆ ಗೋಕಾಕ್ ತಾಲ್ಲೂಕಿನ ಕೊಣ್ಣೂರು ನಿವಾಸಿ ತಾಜಾವುದ್ದೀನ್ ಮತ್ತು ಸೂಫಿಯಾ 2015ರಲ್ಲಿ ಮದುವೆಯಾಗಿದ್ದರು. ಸೋಫಿಯಾ ಗುಜರಾತ್‍ನ ವಡೋದರಾ ಮೂಲದವರಾಗಿದ್ದು, ಎರಡು ಕುಟುಂಬದವರು ಸೇರಿ ಅಲ್ಲಿಯೇ ಮದುವೆ ಮಾಡಿದ್ದರು. ಸೂಫಿಯಾರ ಪತಿ ರಾಜಾವುದ್ದೀನ್ ಕೂಡ ಸೇನೆಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿನ್ನೆ ಪತ್ರಿಕಾಗೋಷ್ಟಿಯಲ್ಲಿ ಸೂಫಿಯಾ ಖುರೇಷಿ ಕಾಣಿಸಿಕೊಂಡ ಬಳಿಕ ಕೊಣ್ಣೂರಿನ ಮನೆಗೆ ಜನ ಜಂಗುಳಿಯೇ ಸೇರಿತ್ತು.

    ಸೂಫಿಯಾರ ಮಾವ ಗೌಸ್ ಸುದ್ದಿಗಾರರೊಂದಿಗೆ ಮಾತನಾಡಿ, ಮಗ ಸೊಸೆ ದೇಶಕ್ಕಾಗಿ ದುಡಿಯುತ್ತಿರುವುದು ನಮಗೆ ಹೆಮ್ಮೆಯ ವಿಚಾರ. ಇಬ್ಬರೂ ಓದಿನಲ್ಲಿ ಟಾಪ್ ನಲ್ಲೇ ಇದ್ದರು ಎಂದು ಹೇಳಿದರು.

    ನಾನು ಅವಿದ್ಯಾವಂತ ಜಾತ್ರೆಯಲ್ಲಿ ಫೋಟೋ ತೆಗೆಸಿಕೊಂಡು ಖುಷಿ ಪಡುವವನು. ಅಂತಹವನ ಸೊಸೆ ಟಿವಿಯಲ್ಲಿ ಬರುವುದೆಂದರೆ ಪರಮಾನಂದವಾಯಿತು. ನಿನ್ನೆಯಿಂದ ಜನ ನಮಗೆ ಕರೆ ಮಾಡಿ ಸಂತೋಷ ಹಂಚಿಕೊಳ್ಳುತ್ತಿದ್ದಾರೆ. ನಾವಂತೂ ಟಿವಿ ಬಿಟ್ಟು ಮೇಲೆಳಲಿಲ್ಲ ಎಂದರು.

    ಮಗ ಮಂಡಿಮಠ ಶಾಲೆಯಲ್ಲಿ ಸ್ವಾಮಿಗಳ ಆಶೀರ್ವಾದದಿಂದ ಕನ್ನಡದಲ್ಲಿಯೇ ಓದಿದ್ದಾನೆ. ಗೋಕಾಕ್ ಜಿಎಸ್‍ಎಸ್ ಕಾಲೇಜು, ಬಳಿಕ ಬೆಂಗಳೂರಿನ ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದಾನೆ. ಕಷ್ಟ ಪಟ್ಟು ಓದಿಸಿದ್ದಕ್ಕೂ ಸಾರ್ಥಕವಾಯಿತು. ಸೊಸೆ ಅವರ ಊರಿನಲ್ಲಿ ನಿಂತು ಅಡುಗೆ ಮಾಡುತ್ತಾರೆ. ಇಲ್ಲಿಗೆ ಬಂದು ನೆಲದ ಮೇಲೆ ಕುಳಿತು ರೊಟ್ಟಿ ತಟ್ಟುವುದನ್ನು ಕುತೂಹಲದಿಂದ ನೋಡುತ್ತಾರೆ. ಪರೋಠ ತಿನ್ನುವವರು ಇಲ್ಲಿ ಜೋಳದ ರೊಟ್ಟಿ ತಿನ್ನುತ್ತಾರೆ. ಸಾದಾ ಸೀದ ಜೀವನಕ್ಕೆ ಇಲ್ಲಿ ಹೊಂದಿಕೊಳ್ಳುತ್ತಾರೆ. ಈ ವರ್ಷ ಹಬ್ಬಕ್ಕೆ ಬರುವುದಿತ್ತೂ ಆದರೆ ಸಮಯದ ಅಭಾವದಿಂದ ಅದು ಆಗಿಲ್ಲ ಎಂದರು.

    ಸೊಸೆ ದಿನಾ ನಾಲ್ಕು ಕಿಲೋ ಮೀಟರ್ ಓಡುತ್ತಾರೆ. ಬಹಳ ಕಷ್ಟು ಪಟ್ಟು ಕಸರತ್ತು ಮಾಡಿ ದೇಹ ದಂಡಿಸುತ್ತಾರೆ. ನಮಗೆ ಅವರಂತೆ ಕಸರತ್ತು ಮಾಡಲು ಕಷ್ಟ. ಯುದ್ಧ ಕಾಲದಲ್ಲಿ ನಮ ಮಗ, ಸೊಸೆ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ನಮಗೆ ಹೆಮೆಯ ವಿಚಾರ. ಇನ್ನೊಬ್ಬ ಇಲ್ಲಿಯೇ ಮಗ ಅಗ್ನಿಶಾಮಕ ದಳದಲ್ಲಿ ಇದ್ದಾನೆ, ಎಲ್ಲೆ ಉರಿ ಬೆಂಕಿ ಇರಲಿ ಮೊದಲು ದುಮುಕಿ ರಕ್ಷಣೆ ಮಾಡು ಎಂದು ಹೇಳುತ್ತಿರುತ್ತೇನೆ. ಆತನೂ ಹಾಗೇಯೇ ಕೆಲಸ ಮಾಡುತ್ತಾನೆ ಎಂದಿದ್ದಾರೆ.

    ಮಗ 12 ವರ್ಷದ ಹಿಂದೆ ತಾಜಾವುದ್ದೀನ್ ಸೇನೆಗೆ ಸೇರಿದ್ದಾನೆ. ಅನಂತರ ನಾನು ದುಡಿಮೆ ನಿಲ್ಲಿಸಿದ್ದೇನೆ. ಮಗ ಆರು ತಿಂಗಳಿಗೊಮೆ ಊರಿಗೆ ಬರುತ್ತಾನೆ. ಸೊಸೆ ವರ್ಷಕ್ಕೊಮೆ ಬರುತ್ತಾರೆ. ನಿನ್ನೆ ಮಗನ ಜೊತೆ ಮಾತನಾಡಿದ್ದೇನೆ, ಸೊಸೆ ದೆಹಲಿಯಲ್ಲಿದ್ದರು ಹಾಗಾಗಿ ಆಕೆಯ ಜೊತೆ ಮಾತನಾಡಲಾಗಲಿಲ್ಲ. ಇಬ್ಬರಿಗೂ ಒಬ್ಬ ಮಗನಿದ್ದಾನೆ ಎಂದರು.

    ನಾನು ಮುಸ್ಲಿಂ ಮೂರು ಬಾರಿ ಅಯ್ಯಪ್ಪನ ದರ್ಶನಕ್ಕೆ ಹೋಗಿ ಬಂದಿದ್ದೇನೆ. ನನಗೆ ಹಿಂದು ಮುಸ್ಲಿಂ ಎಂಬ ಬೇಧ ಭಾವ ಇಲ್ಲ. ನನ್ನನ್ನು ಇಲ್ಲಿ ಬಾಳಯ್ಯ ಅಜ್ಜ ಎಂದೇ ಕರೆಯುತ್ತಾರೆ. ಜೈನರು, ಬೇಡರು, ಹಿಂದುಳಿದ ಎಲ್ಲರ ಜೊತೆ ನಾನು ಬೆರೆಯುತ್ತೇನೆ. ದೇಶದ ವಿಚಾರದಲ್ಲಿ ಹಿಂದು ಮುಸ್ಲಿಂ ಎಂಬ ಬೇರೆ ಬೇರೆಯಾಗಿ ನೋಡುವುದು ಬೇಕಿಲ್ಲ ಎಂದಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search