ಬೆಂಗಳೂರು: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ನೀತಿಯನ್ನು ಖಂಡಿಸಿ ದೇಶದ 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ನಾಳೆ ( ಜುಲೈ 9 ) ಭಾರತ್ ಬಂದ್‌ಗೆ ಕರೆ ನೀಡಿವೆ.
ಕಾರ್ಮಿಕ ವಿರೋಧ ನೀತಿ ಹಾಗೂ ರೈತ ವಿರೋಧ ನೀತಿಯನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರ ಕಾರ್ಪೋರೇಟ್ ಪರವಾದ ನಿಲುವನ್ನು ತಾಳಿದ್ದು, ಇದನ್ನು ಖಂಡಿಸಿ ಬಂದ್ ಆಚರಿಸುತ್ತಿದ್ದೇವೆ ಎಂದು ಕಾರ್ಮಿಕ ಸಂಘಟನೆಗಳು ತಿಳಿಸಿವೆ.
ಇನ್ನು 25 ಕೋಟಿಗೂ ಹೆಚ್ಚು ಕಾರ್ಮಿಕರು ಈ ಬಂದ್‌ಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಬ್ಯಾಂಕ್, ವಿಮೆ ಹಾಗೂ ಅಂಚೆ ನೌಕರರೂ ಸಹ ಈ ಬಂದ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕಕ್ಕೂ ಸಹ ಬಂದ್ ಎಫೆಕ್ಟ್ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಈ ಕೆಳಕಂಡ ಸೇವೆಗಳಲ್ಲಿ ನಾಳೆ ವ್ಯತ್ಯಯವಾಗಲಿದೆ.
ಬ್ಯಾಂಕಿಂಗ್ ಹಾಗೂ ವಿಮೆ
ಅಂಚೆ ಸೇವೆಗಳು
ಕಲ್ಲಿದ್ದಲು ಗಣಿಗಾರಿಕೆ ಹಾಗೂ ಕಾರ್ಖಾನೆಗಳು
ಸಾರಿಗೆ ವ್ಯವಸ್ಥೆ
ಸಾರ್ವಜನಿಕ ವಲಯದ ಉದ್ಯಮಗಳು
ಕೃಷಿ ಕನ್ನಡ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿನ್ನೆ ಆಸ್ಪತ್ರೆ, ಇಂದು ಇಡೀ ದಿನ ರೆಸ್ಟ್; ಸಿದ್ದರಾಮಯ್ಯ ಆಸ್ಪತ್ರೆಗೆ ತೆರಳಿದ್ದ ಕಾರಣ ಬಹಿರಂಗ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


