Saturday, June 13, 2026
spot_img
More
    spot_img
    HomeCrimeವಾಮಾಚಾರ ಶಂಕೆ: ಪಂಚಾಯಿತಿ ಕರೆದು ಒಂದೇ ಕುಟುಂಬದ ಐವರನ್ನು ಬೆಂಕಿಹಚ್ಚಿ ಸುಟ್ಟ ಗ್ರಾಮಸ್ಥರು!

    ವಾಮಾಚಾರ ಶಂಕೆ: ಪಂಚಾಯಿತಿ ಕರೆದು ಒಂದೇ ಕುಟುಂಬದ ಐವರನ್ನು ಬೆಂಕಿಹಚ್ಚಿ ಸುಟ್ಟ ಗ್ರಾಮಸ್ಥರು!

    ಬಿಹಾರ: ಜುಲೈ 6ರ ಭಾನುವಾರದಂದು ಮುಫಾಸಿಲ್‌ ಪೊಲೀಸ್ ಠಾಣಾ ವ್ಯಾಪ್ತಿಯ ಟೆಟ್ಗಾಮಾ ಗ್ರಾಮದಲ್ಲಿ ದಾರುಣ ನೀಚ ಘಟನೆಯೊಂದು ನಡೆದಿದ್ದು, ಗ್ರಾಮಸ್ಥರು ಪಂಚಾಯಿತಿ ಕರೆದು ಒಂದೇ ಕುಟುಂಬದ ಐವರನ್ನು ವಾಮಾಚಾರ ಮಾಡಿದ ಆರೋಪ ಮಾಡಿ ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಿದ್ದಾರೆ.

    Advertisement

    ಈ ಕುರಿತು ಮಾಹಿತಿ ನೀಡಿರುವ ಪೊಲೀಸರು ʼರಾಮ್‌ದೇವ್‌ ಮಾಹ್ತೊ ಎಂಬ ಸ್ಥಳೀಯನ ಮಗುವೊಂದು ಅಸ್ವಸ್ಥಗೊಂಡ ಕಾರಣ ಬಾಬುಲಾಲ್‌ ಒರೌನ್‌ ಬಳಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದ್ದು, ಹೀಗಾಗಿ ಗ್ರಾಮಸ್ಥರು ಬಾಬುಲಾಲ್‌ ಹಾಗೂ ಕುಟುಂಬಸ್ಥರನ್ನು ದೊಣ್ಣೆಗಳಿಂದ ಹೊಡೆದು ಬಳಿಕ ಬೆಂಕಿ ಹಚ್ಚಿ ಕೊಲೆ ಮಾಡಿ ಚೀಲಗಳಿಗೆ ತುಂಬಿ ಟ್ರಾಕ್ಟರ್‌ ಮೂಲಕ ಹೆಣಗಳನ್ನು ಮುಚ್ಚಿಹಾಕಿದ್ದರುʼ ಎಂದು ಹೇಳಿದ್ದಾರೆ.

    ಇನ್ನು ಬಾಬುಲಾಲ್‌ನ 16 ವರ್ಷದ ಪುತ್ರ ಇದರಿಂದ ತಪ್ಪಿಸಿಕೊಂಡು ತನ್ನ ಅಜ್ಜ ಹಾಗೂ ಅಜ್ಜಿಗೆ ವಿಷಯ ಮುಟ್ಟಿಸಿದ್ದು, ಪೊಲೀಸರು ತನಿಖೆ ನಡೆಸಿ ಟ್ರಾಕ್ಟರ್‌ ಮಾಲೀಕ ನಕುಲ್‌ನನ್ನು ವಶಕ್ಕೆ ಪಡೆದಿದ್ದಾರೆ ಹಾಗೂ ಹೂತಿದ್ದ ಶವಗಳನ್ನು ಹೊರತೆಗೆದಿದ್ದಾರೆ.

    ಬಾಬುಲಾಲ್‌ ಪುತ್ರ ನೀಡಿದ ಮಾಹಿತಿ ಪ್ರಕಾರ ಟ್ರಾಕ್ಟರ್‌ ಮಾಲೀಕ ನಕುಲ್‌ ಮುಂದಾಳತ್ವದಲ್ಲಿ ಸುಮಾರು 200 ಜನ ಗ್ರಾಮಸ್ಥರಿದ್ದ ಸಭೆಯನ್ನು ನಡೆಸಲಾಗಿದ್ದು, ತನ್ನ ತಂದೆ ಹಾಗೂ ತಾಯಿಯನ್ನು ಕರೆದು ಕೊಲ್ಲಲು ನಿರ್ಧರಿಸಿದರು ಎಂದಿದ್ದಾನೆ. ಬಳಿಕ ಅವರನ್ನು ದೊಣ್ಣೆಗಳಿಂದ ಹೊಡೆದು, ಪೆಟ್ರೋಲ್‌ ಸುರಿದು ಜೀವಂತವಾಗಿ ಸುಟ್ಟುಹಾಕಿದರು ಎಂದು ತಿಳಿಸಿದ್ದಾನೆ.

    50 ವರ್ಷದ ಬಾಬುಲಾಲ್, 48 ವರ್ಷದ ಸೀತಾ ದೇವಿ, 65 ವರ್ಷದ ಕಟೋ ದೇವಿ, 25 ವರ್ಷದ ಮಂಜಿತ್‌ ಹಾಗೂ 23 ವರ್ಷದ ರಾಣಿ ದೇವಿ ಮೃತದುರ್ದೈವಿಗಳು.

    ಇಎಂಐ ಪಡೆದು ಮನೆ ಖರೀದಿಸುವ ಮೊದಲು ತಪ್ಪದೇ ತಿಳಿಯಬೇಕಾದ ಪ್ರಮುಖ ವಿಷಯಗಳು

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಕಾಕ್ರೋಚ್ ಜನತಾ ಪಾರ್ಟಿ: ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ವೈರಲ್ ಟ್ರೆಂಡ್!

    ಕಾಕ್ರೋಚ್ ಜನತಾ ಪಾರ್ಟಿ ಎಂಬ ಪದ ಸಾಮಾಜಿಕ ಜಾಲತಾಣದಲ್ಲಿ ಯಾವಾಗ, ಹೇಗೆ ವೈರಲ್ ಆಯಿತು? ಈ ಟ್ರೆಂಡ್ ಹಿಂದಿನ ಸಂಪೂರ್ಣ ಕಥೆ ಓದಿ.

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading