Friday, May 15, 2026
spot_img
More
    spot_img
    HomeLatest newsಇಎಂಐ ಪಡೆದು ಮನೆ ಖರೀದಿಸುವ ಮೊದಲು ತಪ್ಪದೇ ತಿಳಿಯಬೇಕಾದ ಪ್ರಮುಖ ವಿಷಯಗಳು

    ಇಎಂಐ ಪಡೆದು ಮನೆ ಖರೀದಿಸುವ ಮೊದಲು ತಪ್ಪದೇ ತಿಳಿಯಬೇಕಾದ ಪ್ರಮುಖ ವಿಷಯಗಳು

    ಬಾಡಿಗೆ ಕಟ್ಟುತ್ತಾ ಸಾಕಾದವರು ಸ್ವಂತ ಮನೆ ಖರೀದಿಸುವ ಕನಸು ಕಾಣುವುದು ಸಹಜ. ಆದರೆ, ಮಹಾನಗರಗಳಲ್ಲಿ ಮನೆ ಖರೀದಿಸುವುದು ಸುಲಭವಲ್ಲ. ಫ್ಲ್ಯಾಟ್‌ ಖರೀದಿಗೆ ಕೋಟಿಗಟ್ಟಲೆ ಹಣ ಬೇಕಾಗುತ್ತದೆ; ಬ್ಯಾಂಕ್‌ ಲೋನ್‌ ಪಡೆದು ಮನೆ ಖರೀದಿಸಿದರೆ, ತಿಂಗಳಿಗೆ ಕನಿಷ್ಠ ₹50,000 ಇಎಂಐ ಪಾವತಿಸಬೇಕಾಗಬಹುದು. ಬಾಡಿಗೆಯ ಹಣ ಉಳಿಸಿ ಸ್ವಂತ ಮನೆಗೆ ಇಎಂಐ ಪಾವತಿಸುವುದು ಸುಲಭ ಎಂದುಕೊಳ್ಳುವುದಕ್ಕಿಂತ, ಮುಂಚಿತವಾಗಿ ಸ್ಪಷ್ಟ ಹಣಕಾಸು ಯೋಜನೆ ಮಾಡುವುದು ಅತ್ಯವಶ್ಯಕ.ಸ್ವಂತ ಮನೆ ಖರೀದಿಸುವುದು ಜೀವನದ ದೊಡ್ಡ ನಿರ್ಧಾರ. ಪ್ಲ್ಯಾನ್‌ ಇಲ್ಲದೆ ಕೈ ಹಾಕುವುದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ, ಎಲ್ಲ ಅಂಶಗಳನ್ನೂ ಗಮನಿಸಿ, ಬಾಡಿಗೆ, ಇಎಂಐ, ಡೌನ್ ಪೇಮೆಂಟ್, ಮತ್ತು ಭವಿಷ್ಯದ ವೆಚ್ಚಗಳ ಬಗ್ಗೆ ಮುಂಚಿತವಾಗಿ ಯೋಜನೆ ರೂಪಿಸಿ, ನಂತರವೇ ನಿರ್ಧಾರ ತೆಗೆದುಕೊಳ್ಳಿ.

    *ಮನೆ ಖರೀದಿಸುವ ಮುನ್ನ ನೀವು ಸದ್ಯ ಎಷ್ಟು ಬಾಡಿಗೆ ಪಾವತಿಸುತ್ತಿದ್ದೀರಿ, ಮನೆ ಖರೀದಿಸಿದರೆ ಇಎಂಐ ಎಷ್ಟು ಆಗುತ್ತದೆ, ನಿಮ್ಮ ಮಾಸಿಕ ಆದಾಯ ಎಷ್ಟು ಎಂಬುದನ್ನು ಲೆಕ್ಕ ಹಾಕಿ. ಸಾಮಾನ್ಯವಾಗಿ, ಸ್ವಂತ ಮನೆಯ ಇಎಂಐ ಬಾಡಿಗೆಯಿಗಿಂತ 3-4 ಪಟ್ಟು ಹೆಚ್ಚಾಗಬಹುದು. ನೀವು ಖರೀದಿಸಬಯಸುವ ಫ್ಲ್ಯಾಟ್ ಬೆಲೆ, ನಿಮ್ಮ ಬಾಡಿಗೆ, ಸಂಬಳ ಮತ್ತು ಇತರ ಆರ್ಥಿಕ ಬಾಧ್ಯತೆಗಳನ್ನೂ ಪರಿಗಣಿಸಿ.

    *ಮನೆ ಖರೀದಿಗೆ ಶೇ.20ರಷ್ಟು ಡೌನ್ ಪೇಮೆಂಟ್ ಬೇಕಾಗುತ್ತದೆ; ಬ್ಯಾಂಕ್‌ಗಳು ಸಾಮಾನ್ಯವಾಗಿ ಶೇ.80ರಷ್ಟು ಮಾತ್ರ ಸಾಲ ನೀಡುತ್ತವೆ. ಡೌನ್ ಪೇಮೆಂಟ್ ಕೂಡ ಸಾಲ ಮಾಡಿಕೊಂಡು ಮನೆ ಖರೀದಿಸುವುದು ಸೂಕ್ತವಲ್ಲ. ನಿಮ್ಮ ಆದಾಯ ಹೆಚ್ಚಿದ್ದು, ಎರಡು ಸಾಲಗಳನ್ನು ನಿಭಾಯಿಸಬಹುದು ಎಂದರೆ ಮಾತ್ರ ಈ ನಿರ್ಧಾರ ತೆಗೆದುಕೊಳ್ಳಿ. ಪ್ಲ್ಯಾನ್ ಇಲ್ಲದೆ ಕೈ ಹಾಕಿದರೆ ಆರ್ಥಿಕ ಸಂಕಷ್ಟ ಎದುರಾಗಬಹುದು.

    *ಮನೆ ಖರೀದಿಸಿದ ನಂತರವೂ ತುರ್ತು ವೆಚ್ಚಗಳಿಗೆ ಹಣ ಉಳಿಸಿಕೊಳ್ಳುವುದು ಅಗತ್ಯ. ಇಎಂಐ ಪಾವತಿಯಲ್ಲಿ ಹೆಚ್ಚಿನ ಭಾಗ ಖರ್ಚಾದರೆ, ಆರೋಗ್ಯ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸ, ವೃದ್ಧಾಪ್ಯ ಮುಂತಾದ ಭವಿಷ್ಯದ ಅಗತ್ಯಗಳಿಗೆ ಹಣ ಸಿಗದೆ ಹೋಗಬಹುದು. ಆದ್ದರಿಂದ, ಮನೆ ಖರೀದಿಸುವ ಮುನ್ನ ನಿಮ್ಮ ಎಲ್ಲಾ ಆರ್ಥಿಕ ಬಾಧ್ಯತೆಗಳು ಹಾಗೂ ಉಳಿತಾಯದ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಿಕೊಳ್ಳಿ. ತೆರಿಗೆ ವಿನಾಯಿತಿ ಪಡೆಯಲು ದೀರ್ಘಾವಧಿಗೆ ಸಾಲ ತೆಗೆದುಕೊಳ್ಳಬಹುದು, ಆದರೆ ಸಾಲದ ಷರತ್ತುಗಳು, ಬಡ್ಡಿದರ ಮತ್ತು ನಿಮ್ಮ ಹಣಕಾಸಿನ ಸ್ಥಿರತೆ ಕುರಿತು ಸಮಗ್ರವಾಗಿ ಪರಿಶೀಲನೆ ಮಾಡುವುದು ಅವಶ್ಯಕ.

    *ಮನೆಯ ದಾಖಲೆಗಳು, ಮಾಲೀಕತ್ವ, ಅನುಮತಿ ಪತ್ರಗಳು, ಹಾಗೂ ಲೀಗಲ್ ಕ್ಲಿಯರೆನ್ಸ್ ಎಲ್ಲಾ ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹರಾಜು ಅಥವಾ ಅಭಿವೃದ್ಧಿ ಪ್ರಾಧಿಕಾರದ ಸೈಟುಗಳಾದರೆ ದಾಖಲೆ ಸಮಸ್ಯೆ ಕಡಿಮೆ ಇರುತ್ತದೆ,ನೀವು ಖರೀಸುವ ಮನೆ/ಫ್ಲ್ಯಾಟ್‌ಗಳು RERA ನೋಂದಾಯಿತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದು ವಂಚನೆಗಳಿಂದ ರಕ್ಷಣೆ ನೀಡುತ್ತದೆ

    *ಮನೆಗೆ ಭವಿಷ್ಯದಲ್ಲಿ ಮರುಮಾರಾಟ ಮೌಲ್ಯ ಹೇಗಿರಬಹುದು ಎಂಬುದನ್ನು ಗಮನಿಸಿ. ಉತ್ತಮ ದಾಖಲೆಗಳು, ಸ್ಥಳ, ಮತ್ತು ಅಭಿವೃದ್ಧಿಯು ಮರುಮಾರಾಟ ಮೌಲ್ಯ ಹೆಚ್ಚಿಸುತ್ತದೆ.

    ಹಣ ಉಳಿಸಿ ಭವಿಷ್ಯ ಭದ್ರಗೊಳಿಸಿ LIC ನಿಂದ ಸೀಮಿತ ಅವಧಿಗೆ ಲಭ್ಯವಿರುವ ಸೂಪರ್ ಯೋಜನೆಗಳು

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಬೆಂಗಳೂರಿನಲ್ಲಿ ಮುಂಗಾರು ಆರ್ಭಟ: ಆಲಿಕಲ್ಲು ಮಳೆ, ಗುಡುಗು-ಸಿಡಿಲಿಗೆ ನಗರ ತತ್ತರ

    ಬೆಂಗಳೂರು: ಸಂಜೆ ಐಟಿ ರಾಜಧಾನಿ ಬೆಂಗಳೂರಿನ ಮೇಲೆ ಪ್ರಕೃತಿ ತನ್ನ ಕೋಪವನ್ನು ಸಂಪೂರ್ಣವಾಗಿ ತೋರಿಸಿತು. ಕಾರ್ಮೋಡ ಕವಿದ ಆಕಾಶದಿಂದ ಮೊದಲು ಗುಡುಗು-ಸಿಡಿಲಿನ ಆರ್ಭಟ, ಬಳಿಕ ಆಲಿಕಲ್ಲು ಮಳೆ ಮತ್ತು ಜೋರು ಗಾಳಿ ನಗರವನ್ನು...

    ಇಂಡೋನೇಷ್ಯಾದ ಡೇ-ಕೇರ್‌ನಲ್ಲಿ 53 ಮಕ್ಕಳಿಗೆ ನಡೆದ ಅಮಾನವೀಯ ದೌರ್ಜನ್ಯ: ವಿಡಿಯೋ ನೋಡಿ ಜಗತ್ತೇ ಬೆಚ್ಚಿ ಬಿದ್ದಿತು

    ಇಂಡೋನೇಷ್ಯಾದ ಜಾವಾ ದ್ವೀಪದ ಯೋಗ್ಯಕರ್ತ ನಗರದಲ್ಲಿ ನಡೆದ ಒಂದು ಆಘಾತಕಾರಿ ಘಟನೆ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. 'ಲಿಟಲ್ ಅರೇಶಾ' ಎಂಬ ಡೇ-ಕೇರ್ ಕೇಂದ್ರದಲ್ಲಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ 53 ಮಕ್ಕಳನ್ನು...

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading