ಹಿಂದಿ ಹೇರಿಕೆ ಆರೋಪಗಳು ಸದ್ಯ ರಾಜ್ಯದಲ್ಲಿ ಒಂದಲ್ಲ ಒಂದೆಡೆ ಆಗಾಗ ಬೆಳಕಿಗೆ ಬರುತ್ತಲೇ ಇವೆ. ಇನ್ನು ರಾಜ್ಯಕ್ಕೆ ಕಾಲಿಡುವ ಪರಭಾಷಿಗರು ಸಂವಹನಕ್ಕಾಗಿ ಇಂಗ್ಲಿಷ್ ಬಳಸದೇ ಹಿಂದಿಯನ್ನೇ ಬಳಸಿ ಇದು ಭಾರತ ಹಿಂದಿ ಮಾತನಾಡಲಿ ಎಂದು ಕನ್ನಡಿಗರನ್ನು ನಿರೀಕ್ಷಿಸುವುದು ಈ ಕಿತ್ತಾಟಗಳಿಗೆ ಕಾರಣವಾಗಿದೆ.
ಸದ್ಯ ಅಂತಹದ್ದೇ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಬಳಿ ಬಂದು ಹಿಂದಿಯಲ್ಲಿ ಬಂದು ಮಾತನಾಡಲು ಯತ್ನಿಸಿದ್ದಾನೆ. ಆತ ಬಂದು ಹಿಂದಿಯಲ್ಲಿ ಮಾತನಾಡುತ್ತಿದ್ದಂತೆ ಇಂಗ್ಲಿಷ್‌ನಲ್ಲಿ ಮಾತನಾಡಲು ಸಿಬ್ಬಂದಿ ಯತ್ನಿಸಿದ್ದು, ಈತ ಇಂಗ್ಲಿಷ್‌ನಲ್ಲಿ ಪ್ರತಿಕ್ರಿಯಿಸದೇ ಹಿಂದಿಯಲ್ಲಿಯೇ ಉತ್ತರಿಸಿದ್ದು, ಬಳಿಕ ಕನ್ನಡ ಬರುವುದಿಲ್ಲವೇ ಎಂದು ಪ್ರಶ್ನಿಸಿದಾಗ ತಾನೊಬ್ಬ ತಮಿಳಿನ ಎಂದು ಹೇಳಿಕೊಂಡಿದ್ದಾನೆ.
ಬಳಿಕ ಕೆಎಸ್‌ಆರ್‌ಟಿಸಿ ಸಿಬ್ಬಂದಿ ತಮಗೆ ಹಿಂದಿ ಬರುವುದಿಲ್ಲ ಎಂದು ಆತನನ್ನು ಅಲ್ಲಿಂದ ಕಳುಹಿಸಿದ್ದಾರೆ. ವಿಡಿಯೊದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಇಂಗ್ಲಿಷ್‌ನಲ್ಲಿ ಮಾತನಾಡಲು ಯತ್ನಿಸಿದರೂ ಆತ ಹಿಂದಿಯಲ್ಲೇ ಮಾತು ಮುಂದುವರಿಸಿದ್ದನ್ನು ಕಾಣಬಹುದಾಗಿದೆ. ಈ ಸಮಯದಲ್ಲಿ ಸಿಬ್ಬಂದಿ ʼಹೇಯ್ ಹಿಂದಿ ಬರಲ್ಲ ಹೋಗ್..ʼ ಎಂದು ಹೇಳಿರುವುದನ್ನೂ ಸಹ ಕಾಣಬಹುದಾಗಿದೆ.
ಸದ್ಯ ಈ ವಿಡಿಯೊಗೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿಬ್ಬಂದಿ ನಡೆ ಸರಿಯಾಗಿದೆ ಎಂದು ಪ್ರಶಂಸಿಸಿದ್ದಾರೆ. ಇನ್ನು ಈ ವಿಡಿಯೊವನ್ನು ಸ್ವತಃ ಆ ವ್ಯಕ್ತಿಯೇ ಚಿತ್ರೀಕರಿಸಿದ್ದು, ತಮಿಳುನಾಡಿನವನಾಗಿ ಹಿಂದಿಯಲ್ಲಿ ಮಾತನಾಡಿದ್ದೇಕೆ ಹಾಗೂ ಘಟನೆಯನ್ನು ಚಿತ್ರೀಕರಿಸಿದ್ದೇಕೆ ಎಂಬ ಪ್ರಶ್ನೆ ಮೂಡಿದೆ.
ಸಿಐಡಿ ತನಿಖೆಯಲ್ಲಿ ಚಿನ್ನಸ್ವಾಮಿ ಕಾಲ್ತುಳಿತಕ್ಕೆ ಕಾರಣ ಬಯಲು: ಕೊಹ್ಲಿ ಹೆಸರು ಬಳಸಿ ಮಹಾ ತಪ್ಪು ಮಾಡಿದ್ದು ಈತನೇ!
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


