ದಾವಣಗೆರೆ: ನಗರದಲ್ಲಿರುವ ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಅವರ ನಿವಾಸದಲ್ಲಿಂದು ( ಜುಲೈ 8 ) ಬಿಜೆಪಿ ರೆಬೆಲ್ ನಾಯಕರ ಜೊತೆ ಮಾಜಿ ಸಂಸದ ಪ್ರತಾಪ್ ಸಿಂಹ ಕಾಣಿಸಿಕೊಂಡಿದ್ದು, ಭಾರೀ ಕುತೂಹಲ ಹುಟ್ಟುಹಾಕಿತ್ತು.
ಸದ್ಯ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿಯೇ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಜತೆ ಪ್ರತಾಪ್ ಸಿಂಹ ಕಾಣಿಸಿಕೊಂಡದ್ದು ಇದು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ನಡೆಸಿದ ಸಭೆಯೇ ಎಂಬ ಪ್ರಶ್ನೆ ಸಹ ಮೂಡಿದೆ.
ಇನ್ನು ಸಭೆ ಮುಗಿದ ಬಳಿಕ ಮಾಧ್ಯಮದ ಮುಂದೆ ಬಂದ ಪ್ರತಾಪ್ ಸಿಂಹ ಭೇಟಿ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಈ ದಿನ ಬಂದಿರುವುದು ಜಿಎಂ ಸಿದ್ದೇಶ್ವರ ಅವರ ಹುಟ್ಟುಹಬ್ಬದ ಸಲುವಾಗಿ ಎಂದು ಪ್ರತಾಪ್ ಸಿಂಹ ತಿಳಿಸಿದರು. ಅಲ್ಲದೇ ತಾನು ಇಂದು ಮಾತ್ರವಲ್ಲ ಯಾವತ್ತೂ ವಿಜಯೇಂದ್ರ ಅವರ ವಿರುದ್ಧ ಮಾತನಾಡಿಲ್ಲ ಎಂದರು.
ವಿಜಯೇದ್ರ ರಾಜ್ಯಾಧ್ಯಕ್ಷನಾಗಿ ಉತ್ತಮಕೆಲಸ ಮಾಡುತ್ತಿದ್ದಾರೆ, ಅವರನ್ನು ಆರಿಸಿದ್ದು ಕೇಂದ್ರ ಸರ್ಕಾರ ಎಂದ ಪ್ರತಾಪ್ ಸಿಂಹ ಅವರ ನಿರ್ಧಾರವನ್ನು ನಾವೆಲ್ಲ ಸ್ವಾಗತಿಸುತ್ತೇವೆ ಹಾಗೂ ಕೆಲಸ ನಿರ್ವಹಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಯಾವುದೇ ಅನುಮಾನ ಬೇಡ ಇವರೇ ಬಿಜೆಪಿ ರಾಜ್ಯಾಧ್ಯಕ್ಷ ಎಂದ ರೇಣುಕಾಚಾರ್ಯ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


