ದಾವಣಗೆರೆ: ಮೈಸೂರು ಹಾಗೂ ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ವಿರುದ್ಧ ಹರಿಹಾಯ್ದಿದ್ದಾರೆ. ಕ್ಷೇತ್ರಕ್ಕೆ ಬಂದಿರುವ ಅನುದಾನವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುತ್ತಿಲ್ಲ ಎಂದು ಆರೋಪಿಸಿದ ಪ್ರತಾಪ್ ಸಿಂಹ ಪ್ರಭಾ ಮಲ್ಲಿಕಾರ್ಜುನ್ ಸರಿಯಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
ಈ ವೇಳೆ ಮಾವ ಶಾಮನೂರು ಶಿವಶಂಕರಪ್ಪ ಅವರ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್‌ನಿಂದ ಎಂಪಿಯಾದವರು ನೀವು ಎಂದ ಪ್ರತಾಪ್ ಸಿಂಹ ಪ್ರತಿ ಕಾರ್ಯಕ್ರಮದಲ್ಲೂ ಪರದೆ ಹಿಂದೆ ಹೋಗಿ ನಿಮ್ಮ ಸಹಾಯ ಇಲ್ಲದಿದ್ದರೆ ನಾನು ಎಂಪಿಯಾಗುತ್ತಿರಲಿಲ್ಲ ಎಂದು ಅನ್ಯ ಪಕ್ಷದವರಿಗೆ ಕೈಮುಗಿಯುತ್ತಾರೆ ಎಂದು ಟೀಕಿಸಿದ್ದಾರೆ.
ಅಲ್ಲದೇ ಕೇಂದ್ರ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಉಲ್ಲೇಖಿಸಿ ಬಿಜೆಪಿ ಭದ್ರಕೋಟೆ ದಾವಣಗೆರೆಯಲ್ಲಿ ಪಕ್ಷ ಸೋತಿದ್ದರ ಬಗ್ಗೆ ಮಾತನಾಡಿದ್ದನ್ನೂ ಸಹ ಹೇಳಿ ಪ್ರತಾಪ್ ಸಿಂಹ ಟೀಕಿಸಿದರು. ನಿಮ್ಮ ಕಾರಣಕ್ಕೆ ಪ್ರಭಾ ಮಲ್ಲಿಕಾರ್ಜುನ್ ಗೆಲುವು ಸಾಧಿಸಿದರು ಅವರಿಗೆ ರಾಜಕೀಯ ಜಾಣ್ಮೆ ಇದೆ ಎಂದು ಹೇಳಿದ್ದರು.
ಆದರೆ ಅಮಿತ್ ಶಾ ಅವರು ಪ್ರಭಾ ಮಲ್ಲಿಕಾರ್ಜುನ್ ಅವರನ್ನು ಅಂದು ಹೊಗಳಲಿಲ್ಲ, ಬದಲಾಗಿ ತೆಗಳಿದರು ಎಂದು ಪ್ರತಾಪ್ ಸಿಂಹ ವ್ಯಂಗ್ಯವಾಗಿ ನುಡಿದರು.
ಜನೌಷಧಿ ಕೇಂದ್ರಗಳ ಸ್ಥಗಿತ ಆದೇಶಕ್ಕೆ ಹೈಕೋರ್ಟ್ ತಡೆ: ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


