ಹಾಸನ: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ 40ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದು, ಈ ಪ್ರಕರಣಗಳ ಸಂಖ್ಯೆ ಜನತೆಯಲ್ಲಿ ಭಾರೀ ಆತಂಕವನ್ನು ಮೂಡಿಸಿದೆ.
ಕಿರಿಯ ವಯಸ್ಸಿನವರಿಂದ ಹಿಡಿದು 60 ವರ್ಷ ವಯಸ್ಸಿನವರೆಗಿನ ಹಲವಾರು ಮಂದಿ ಹೃದಯಾಘಾತಕ್ಕೆ ಅಸುನೀಗಿದ್ದು, ಜಿಲ್ಲೆಯಲ್ಲಿ ಹೃದಯಾಘಾತಗಳ ಸಂಖ್ಯೆ ದಿಢೀರ್ ಹೆಚ್ಚಾಗಲು ಕಾರಣವೇನೆಂಬುದು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಕುರಿತು ಇಂದು ಜಿಲ್ಲಾ ವೈದ್ಯಕೀಯ ಆಸ್ಪತ್ರೆಯಲ್ಲಿ ಮಾತನಾಡಿದ ಎಚ್‌ಡಿ ರೇವಣ್ಣ ಹೃದಯಾಘಾತ ಹೆಚ್ಚಾಗಲು ಕಾರಣ ಮಾಂಸ ಸೇವನೆ ಕಾರಣ ಎಂದು ಹೇಳಿದ್ದಾರೆ. ಅಲ್ಲದೇ ಬೀಗರೂಟದಲ್ಲಿ ಅತಿಯಾದ ರೆಡ್ ಮೀಟ್ ಸೇವನೆಯಾಗುತ್ತಿದೆ ಎಂದು ಆರೋಪಿಸಿದ ರೇವಣ್ಣ ಜಿಲ್ಲೆಯಲ್ಲಿ ಬಾರ್‌ಗಳ ಸಂಖ್ಯೆಯೂ ಸಹ ಹೆಚ್ಚಾಗಿದೆ, ಆದಾಯ ಬರುತ್ತದೆ ಎಂದು ಬಾರ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ದೂರಿದ್ದಾರೆ.
ವೈದ್ಯಕೀಯ ಆಸ್ಪತ್ರೆಯ ವೈದ್ಯರ ಜೊತೆ ನಡೆದ ಸಭೆಯಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ರೇವಣ್ಣ ಅವರ ಈ ಹೇಳಿಕೆಯ ವೇಳೆ ಮಧ್ಯ ಪ್ರವೇಶ ಮಾಡಿದ ಶಾಸಕ ಸಿಎನ್ ಬಾಲಕೃಷ್ಣ ಮಧ್ಯ ಪ್ರವೇಶಿಸಿ ಹಾಸನ ಜಿಲ್ಲೆಯಲ್ಲಿ ಬಾರ್‌ಗಳಿಗೆ ಸಮಯ ನಿಗದಿಪಡಿಸಬೇಕು ಬೆಳಗ್ಗೆ 10 ಗಂಟೆಗೆ ತೆರೆದು ರಾತ್ರಿ 8 ಗಂಟೆಗೆ ಮುಚ್ಚಬೇಕು ಎಂದು ಹೇಳಿದರು.
ಜನೌಷಧಿ ಕೇಂದ್ರಗಳ ಸ್ಥಗಿತ ಆದೇಶಕ್ಕೆ ಹೈಕೋರ್ಟ್ ತಡೆ: ರಾಜ್ಯ ಸರ್ಕಾರಕ್ಕೆ ಭಾರೀ ಹಿನ್ನಡೆ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


