ಏರ್ ಪೋರ್ಟ್ನಲ್ಲಿ ಗ್ರೌಂಡ್ ಸ್ಟಾಫ್ ಮತ್ತು ಲೋಡರ್ ಹುದ್ದೆಗಳಿಗೆ ಅರ್ಜಿಗಳನ್ನುಆಹ್ವಾನಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 1446 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಏರ್ ಪೋರ್ಟ್ನಲ್ಲಿ ಕೆಲಸ ಪಡೆಯಬೇಕು ಎಂಬ ಕನಸು ನಿಮಗಿದ್ದರೆ ಈ ಕೂಡಲೇ ಅರ್ಜಿ ಸಲ್ಲಿಸಿ. ವಿಮಾನ ನಿಲ್ದಾಣದ ಗ್ರೌಂಡ್ ಸ್ಟಾಫ್ 1017 ಹುದ್ದೆಗಳಿಗೆ ಮತ್ತು ಲೋಡರ್ 429 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗ್ರೌಂಡ್ ಸ್ಟಾಫ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿಪೂರ್ಣಗೊಳಿಸಿರಬೇಕು. ಜೊತೆಗೆ ಲೋಡರ್ ಹುದ್ದೆಗೆ, ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕನಿಷ್ಠ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಎರಡೂ ಹುದ್ದೆಗಳಿಗೆ ಪ್ರತ್ಯೇಕವಾಗಿ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ. ಗ್ರೌಂಡ್ ಸ್ಟಾಫ್ ಹುದ್ದೆಗೆ 18 ರಿಂದ 30 ವರ್ಷಗಳು ಮತ್ತು ಲೋಡರ್ ಹುದ್ದೆಗೆ 20 ರಿಂದ 40 ವರ್ಷಗಳ ನಡುವೆ ವಯಸ್ಸು ಇರಬೇಕುಎಂದುಅಧಿಸೂಚನೆಯಲ್ಲಿವಿವರಿಸಲಾಗಿದೆ.
ಆಯ್ಕೆಯಾದಅಭ್ಯರ್ಥಿಗಳಿಗೆಗ್ರೌಂಡ್ ಸ್ಟಾಫ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 25,000 ರಿಂದ 35,000 ರೂ. ಮತ್ತು ಲೋಡರ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 15,000 ರಿಂದ 25,000 ರೂ. ವೇತನ ದೊರೆಯಲಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 21ರ ವರೆಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ . ಈ ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ನಲ್ಲಿನಡೆಯುತ್ತಿದ್ದು, igiaviationdelhi.com ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು .
,ಸೇನಾ ಬಂಕರ್ ವಾಹನ ಅಪಘಾತ! ಯೋಧರ ಸಾವು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


