ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತ ಪ್ರಕರಣದ ದೂರುದಾರ, ಪ್ರಸ್ತುತ ಆರೋಪಿಯಾಗಿರುವ ಮಾಸ್ಕ್‌ಮ್ಯಾನ್ ಚಿನ್ನಯ್ಯನ ಎಸ್‌ಐಟಿ ತನಿಖೆ ಮುಗಿದಿದ್ದು, ಶಿವಮೊಗ್ಗ ಜೈಲು ಪಾಲಾಗಿದ್ದಾನೆ. ಆತ ತಂದಿದ್ದ ತಲೆಬುರುಡೆ ರಹಸ್ಯ ಭೇದಿಸಲು ಇದೀಗ ಎಸ್‌ಐಟಿ ತಂಡ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಲ್ಲಿ ತನಿಖೆ ನಡೆಸುತ್ತಿದೆ.
ಶಿವಮೊಗ್ಗ ಜೈಲಿನ ಕಾವೇರಿ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ಕೋರ್ಟ್ ಈ ನಿರ್ಧಾರ ತೆಗೆದುಕೊಂಡಿದೆ. ಶಿವಮೊಗ್ಗ ಜೈಲು ಸೇರುವಾಗ ಕಣ್ಣೀರು ಹಾಕಿದ್ದಾನೆ ಎನ್ನಲಾಗುತ್ತಿದೆ. ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ಚಿನ್ನಯ್ಯನಿಗೆ ಕೈದಿ ನಂಬರ್ ನೀಡಲಾಗಿದೆ. ವಿಚಾರಣಾಧೀನ ಕೈದಿ ಸಂಖ್ಯೆ 1104/25 ಅನ್ನು ಜೈಲಿನ ಅಧಿಕಾರಿ ನೀಡಿದ್ದಾರೆ.
16 ದಿನಗಳ ಎಸ್‌ಯಟಿ ಕಸ್ಟಡಿ ಮುಗಿದ ಬಳಿಕ ಶನಿವಾರ ಬೆಳ್ತಂಗಡಿ ನ್ಯಾಯಾಲಯ ಚಿನ್ನಯ್ಯನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಉಚಿತ ಕಾನೂನು ಸೇವೆಗಳ ಪ್ರಾಧಿಕಾರ ನೇಮಿಸಿದ ವಕೀಲರು ಚಿನ್ನಯ್ಯನಿಗೆ ಜಾಮೀನು ನೀಡುವಂತೆ ಶನಿವಾರ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಲಾಗಿದೆ.
ಚಿನ್ನಯ್ಯನ ಮೂಲ ಊರು ಮಂಡ್ಯ. ನದಿಯಲ್ಲಿ ಮುಳುಗಿದ ಹೆಣಗಳಿಂದ ಈತ ಚಿನ್ನ ಕದಿಯುತ್ತಿದ್ದನಂತೆ. ಮಹಿಳೆಯರ ಮೂಗುತಿ, ಕಿವಿಯೋಲೆ, ಸರಗಳನ್ನೂ ಕದಿಯುತ್ತಿದ್ದನಂತೆ. ಈ ಕಾರಣದಿಂದಾಗಿಗೇ ಚಿನ್ನಪ್ಪ, ಚಿನ್ನಯ್ಯ ಎಂದು ಕರೆಯುತ್ತಿದ್ದರಂತೆ.
ಚಿನ್ನಯ್ಯ ನ್ಯಾಯಾಲಯದಲ್ಲಿ ಪ್ರದರ್ಶಿಸಿರುವ ತಲೆಬುರುಡೆ ತಂದಿರುವುದು ಬಂಗ್ಲೆಗುಡ್ಡೆ ಅರಣ್ಯ ಪ್ರದೇಶದಿಂದ ಎಂಬುದು ತನಿಖೆಯಿಂದ ಸಾಬೀತಾಗಿದೆ. ಈ ಬಗ್ಗೆ ಇನ್ನಷ್ಟು ತನಿಖೆ ಮುಂದುವರಿದಿದೆ. ಬುರುಡೆ ಹೇಗೆ ತೆಗೆದಿದ್ದಾರೆ ?, ಯಾರು ತೆಗೆದಿದ್ದಾರೆ ?, ಅದಕ್ಕೆ ಸಹಕರಿಸಿದವರು ಯಾರು ?, ದೇಹದ ಉಳಿದ ಅಸ್ತಿಗಳು ಎಲ್ಲಿವೆ ? ಎಂಬುದರ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


